ಭಾರತದ ಕೋವಿಡ್ -19 ಚುಚ್ಚುಮದ್ದು ಅಭಿಯಾನವನ್ನು ಶ್ಲಾಘಿಸಿದ ಮೈಕ್ರೋಸಾಫ್ಟ್ ದಿಗ್ಗಜ: ‘ಜಗತ್ತಿಗೆ ಒಂದು ಪಾಠ’ ಎಂದ ಬಿಲ್ ಗೇಟ್ಸ್

ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕೋವಿಡ್ -19 ವಿರುದ್ಧ ಚುಚ್ಚುಮದ್ದು ಅಭಿಯಾನದಲ್ಲಿ ಯಶಸ್ಸನ್ನು ಸಾಧಿಸಿರುವ ಭಾರತವನ್ನು ಶ್ಲಾಘಿಸಿದ್ದಾರೆ ಮತ್ತು ಆರೋಗ್ಯ ಫಲಿತಾಂಶವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿದ ಭಾರತದ ರೀತಿಯು ಜಗತ್ತಿಗೆ ಒಂದು ಪಾಠವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾದ ಕೆಲವು ದಿನಗಳ ನಂತರ ಮಾಂಡವಿಯಾ ಟ್ವೀಟ್‌ಗೆ ಟ್ವಿಟರ್‌ನಲ್ಲಿ ಉತ್ತರದ ರೂಪದಲ್ಲಿ ಗೇಟ್ಸ್ ಹೇಳಿಕೆ ಬಂದಿದೆ. ಮೇ 25 ರಂದು ಮನ್ಸುಖ್ ಮಾಂಡವಿಯಾ ವರ್ಲ್ಡ್ ಎಕನಾಮಿಕ್ ಫೋರಮ್ 2022 […]

ಮೇಡ್ ಇನ್ ಇಂಡಿಯಾ ಟೆಸ್ಲಾ ಇವಿ ಕಾರಿಗೆ ಕೂಡಿ ಬಂದಿಲ್ಲ ಕಾಲ: ಮೊದಲು ಮಾರಾಟ ಮತ್ತು ಸೇವೆಗೆ ಪಟ್ಟು ಹಿಡಿದ ಮಸ್ಕ್!

ನವದೆಹಲಿ: “ಕಾರುಗಳನ್ನು ಮಾರಾಟ ಮಾಡಲು ಮತ್ತು ಸೇವೆ ನೀಡಲು ಮೊದಲು ನಮಗೆ ಅನುಮತಿ ನೀಡದ ಹೊರತು ಭಾರತದ ಯಾವುದೇ ಸ್ಥಳದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಹಾಕುವುದಿಲ್ಲ” ಎಂದು ಎಲೆಕ್ಟ್ರಿಕ್ ಕಾರು ಟೆಸ್ಲಾದ ನಿರ್ಮಾತ ಏಲನ್ ಮಸ್ಕ್ ಹೇಳಿದ್ದಾರೆ. ಟೆಸ್ಲಾ ಸಂಸ್ಥಾಪಕರು ಭಾರತದಲ್ಲಿ ಇವಿ ಕಾರುಗಳನ್ನು ತಯಾರಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ, ಮಾರಾಟ ಮತ್ತು ಸೇವೆಯನ್ನು ಅನುಮತಿಸುವವರೆಗೆ, ಭಾರತದಲ್ಲಿ ಯಾವುದೇ ಸ್ಥಾವರವನ್ನು ಸ್ಥಾಪಿಸುವುದಿಲ್ಲ ಎಂದು ಟ್ವಿಟರ್ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. 2016 ರಿಂದಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು […]

14 ಬಾರಿಯ ಚಾಂಪಿಯನ್ ಅನ್ನು ಮಣಿಸಿ ಪ್ರಪ್ರಥಮ ಬಾರಿಗೆ ಥಾಮಸ್ ಕಪ್ ಕಿರೀಟವನ್ನು ಗೆದ್ದುಕೊಂಡ ಭಾರತ!!

ಥಾಮಸ್ ಕಪ್ 2022: ಭಾನುವಾರ ಮೇ 15 ರಂದು, ಬ್ಯಾಂಕಾಕ್‌ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸುವ ಮೂಲಕ ಭಾರತವು ಮೊದಲ ಬಾರಿಗೆ ಥಾಮಸ್ ಕಪ್ ಕಿರೀಟವನ್ನು ಗೆದ್ದುಕೊಂಡಿದೆ. ಭಾರತೀಯ ಆಟಗಾರರಾದ ಲಕ್ಷ್ಯ ಸೇನ್, ಸಾತ್ವಿಕ್‌ ಸಾಯಿರಾಜ್-ಚಿರಾಗ್ ಶೆಟ್ಟಿ ಮತ್ತು ಕಿದಂಬಿ ಶ್ರೀಕಾಂತ್ ಅವರು 3-0 ಅಂತರದಿಂದ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸಿ ಹೊಸ ಇತಿಹಾಸ ರಚಿಸಿದ್ದಾರೆ. # ಥಾಮಸ್ ಕಪ್ ಫೈನಲ್‌ನಲ್ಲಿ ಭಾರತವು 3-0 ಅಂತರದಲ್ಲಿ ಇಂಡೋನೇಷ್ಯಾವನ್ನು ಸೋಲಿಸಿದೆ. # ಶ್ರೀಕಾಂತ್ ಅವರು ಜೊನಾಥನ್ […]

ದೇಶದಲ್ಲಿ ಏರುತ್ತಿರುವ ಗೋಧಿ ಬೆಲೆ ತಗ್ಗಿಸಲು ರಫ್ತಿಗೆ ನಿಷೇಧ ಹೇರಿದ ಭಾರತ: ನಿರ್ಧಾರದಿಂದ ಯೂರೋಪಿನಲ್ಲಿ ತಳಮಳ!

ದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಅದರ ಉತ್ಪನ್ನಗಳ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತತ್ಕಾಲದಿಂದಲೇ ಜಾರಿಗೆ ಬರುವಂತೆ ಗೋದಿಯ ರಫ್ತನ್ನು ನಿಷೇಧಿಸಿ ಭಾರತ ಸರಕಾರದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಆದೇಶ ಹೊರಡಿಸಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದ, ಹಾಗೂ ಏರುತ್ತಿರುವ ತಾಪಮಾನದಿಂದಾಗಿ ವಿದೇಶೀ ಮಾರುಕಟ್ಟೆಗಳಲ್ಲಿ ಗೋಧಿಯ ಆವಕ ಕಡಿಮೆಯಾಗುತ್ತಿದ್ದು, ಯೂರೋಪ್, ಅಮೇರಿಕಾ ಮತ್ತಿತರ ದೇಶಗಳಿಗೆ ಗೋಧಿಯನ್ನು ರಫ್ತು ಮಾಡುವ ಉದ್ದೇಶದಲ್ಲಿದ್ದ ಭಾರತವು ಇದೀಗ ರಫ್ತಿನ ಮೇಲೆ ನಿಷೇಧ ಹೇರಿರುವುದು ಯೂರೋಪ್ ಮುಂತಾದ ದೇಶಗಳಲ್ಲಿ ತಳಮಳವನ್ನು […]

ದೇಶದ ಗಡಿ ತಂಟೆಗೆ ಬರುವವರಿಗೆ ಅಮೇರಿಕಾ, ಇಸ್ರೇಲ್ ಮಾದರಿ ಉತ್ತರ: ಅಮಿತ್ ಶಾ

ಬೆಂಗಳೂರು: ದೇಶದ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸುವವರನ್ನು ಹಿಮ್ಮೆಟ್ಟಿಸುವಲ್ಲಿ ಭಾರತವು ಅಮೇರಿಕಾ ಮತ್ತು ಇಸ್ರೇಲ್‌ನಂತಹ ದೇಶಗಳ ಸಾಲಿನಲ್ಲಿ ಸೇರಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರತಿಪಾದಿಸಿದ್ದಾರೆ. ಯಾರಾದರೂ ತಮ್ಮ ಗಡಿ ಮತ್ತು ಮಿಲಿಟರಿಯ ತಂಟೆಗೆ ಬಂದಾಗ ಕೇವಲ ಎರಡು ರಾಷ್ಟ್ರಗಳು ಸಂಯುಕ್ತ ಅಮೇರಿಕಾ ಮತ್ತು ಇಸ್ರೇಲ್ ಗಳು ಮಾತ್ರ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ, ನಮ್ಮ ಮಹಾನ್ ರಾಷ್ಟ್ರ ಭಾರತವು ಕೂಡಾ ಆ ಗುಂಪಿಗೆ ಸೇರಿದೆ ಎಂದು ನೃಪತುಂಗ ವಿಶ್ವವಿದ್ಯಾನಿಲಯ, ಅದರ […]