ಭೂಕಂಪ ಹಿನ್ನೆಲೆ: ಅಫ್ಘಾನಿಸ್ತಾನದ ನಾಗರಿಕರಿಗೆ ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ರವಾನಿಸಿದ ಭಾರತ

ನವದೆಹಲಿ: ಸುಮಾರು 1000 ಕ್ಕೂ ಹೆಚ್ಚು ನಾಗರಿಕರ ಪ್ರಾಣ ಕಿತ್ತುಕೊಂಡ ಭೀಕರ ಭೂಕಂಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಜನರಿಗೆ ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ನೆರವನ್ನು ಭಾರತವು ರವಾನಿಸಿದೆ. ಪರಿಹಾರ ನೆರವು ಕುಟುಂಬ ರಿಡ್ಜ್ ಟೆಂಟ್‌ಗಳು, ಮಲಗುವ ಚೀಲಗಳು, ಹೊದಿಕೆಗಳು ಮತ್ತು ಮಲಗುವ ಮ್ಯಾಟ್‌ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒಳಗೊಂಡಿದೆ. ಪರಿಹಾರ ಸರಕನ್ನು ಕಾಬೂಲ್‌ನಲ್ಲಿರುವ ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿ ಮತ್ತು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಗೆ ಹಸ್ತಾಂತರಿಸಲಾಗುವುದು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಭಾರತವು […]

ರಷ್ಯಾದಲ್ಲಿ ಭಾರತೀಯ ಮಳಿಗೆಗಳನ್ನು ತೆರೆಯುವ ಬಗ್ಗೆ ಮಾತುಕತೆ ನಡೆಯುತ್ತಿದೆ: ವ್ಲಾದಿಮಿರ್ ಪುಟಿನ್

ಮಾಸ್ಕೋ: ಉಕ್ರೇನ್ ಮೇಲಿನ ಆಕ್ರಮಣದ ನಂತರ ಮಾಸ್ಕೋದ ಮೇಲೆ ಪಾಶ್ಚಿಮಾತ್ಯ ದೇಶಗಳ ಭಾರೀ ನಿರ್ಬಂಧಗಳ ನಡುವೆ ರಷ್ಯಾದಲ್ಲಿ ಭಾರತೀಯ ಮಳಿಗೆಗಳ ಸರಪಳಿಗಳನ್ನು ತೆರೆಯಲು ಮಾತುಕತೆ ನಡೆಯುತ್ತಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. “ರಷ್ಯಾದ ವ್ಯಾಪಾರ ವಲಯಗಳು ಮತ್ತು ಬ್ರಿಕ್ಸ್ ದೇಶಗಳ ವ್ಯಾಪಾರ ಸಮುದಾಯದ ನಡುವಿನ ಸಂಬಂಧಗಳು ಹೆಚ್ಚಾಗಿವೆ. ಉದಾಹರಣೆಗೆ, ರಷ್ಯಾದಲ್ಲಿ ಭಾರತೀಯ ಸರಣಿ ಮಳಿಗೆಗಳನ್ನು ತೆರೆಯಲು ಮಾತುಕತೆಗಳು ನಡೆಯುತ್ತಿವೆ ಮತ್ತು ನಮ್ಮ ಮಾರುಕಟ್ಟೆಯಲ್ಲಿ ಚೀನೀ ಕಾರುಗಳು, ಉಪಕರಣಗಳು ಮತ್ತು ಹಾರ್ಡ್‌ವೇರ್‌ಗಳ ಪಾಲು ಹೆಚ್ಚುತ್ತಿವೆ. ಅದಕ್ಕೆ […]

ಮಾಲ್ಡೀವ್ಸ್‌ನಿಂದ ಮರಳಿದ ವಿರಾಟ್ ಕೊಹ್ಲಿಗೆ ಕೋವಿಡ್-19 ಸೋಂಕು: ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದ ಮೇಲೆ ಕೋವಿಡ್ ಕಾರ್ಮೋಡ

ಜುಲೈ 1 ರಿಂದ 5ರವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮರು ನಿಗದಿಪಡಿಸಲಾದ ಟೆಸ್ಟ್‌ಗೆ ಭಾರತ ಸಿದ್ಧತೆ ಮಾಡುತ್ತಿರುವ ಬೆನ್ನಲ್ಲೆ ಟೀಂ ಇಂಡಿಯಾದ ಹಲವಾರು ಆಟಗಾರರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ವೈರಸ್‌ಗೆ ಪರೀಕ್ಷೆ ಧನಾತ್ಮಕವೆಂದು ಕಂಡು ಬಂದ ನಂತರ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ತಂಡದೊಂದಿಗೆ ಯುಕೆಗೆ ಪ್ರಯಾಣಿಸಲು ನಿರಾಕರಿಸಿದರೆ, ಕಳೆದ ವಾರ ತಂಡವು ಲಂಡನ್‌ಗೆ ಆಗಮಿಸಿದ ಬಳಿಕ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ಟೈಮ್ಸ್ […]

ಭಾರತದಿಂದ 192,000 ಕೆಜಿ ಹಸುವಿನ ಸಗಣಿ ಕುವೈತ್‌ಗೆ ರಫ್ತು: ಕನಕಪುರ ರೈಲು ನಿಲ್ದಾಣದಿಂದ ಮೊದಲ ಬ್ಯಾಚ್ ರವಾನೆ

ನವದೆಹಲಿ: ಭಾರತದಿಂದ 192,000 ಕೆಜಿ ಹಸುವಿನ ಸಗಣಿ ಕುವೈತ್‌ಗೆ ರಫ್ತಾಗುತ್ತಿದ್ದು, ಸಾವಯವ ಕೃಷಿಗಾಗಿ ಕುವೈತ್‌ಗೆ ಸಗಣಿ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಜೂನ್ 15 ಬುಧವಾರದಂದು ಕನಕಪುರ ರೈಲು ನಿಲ್ದಾಣದಿಂದ ಮೊದಲ ಬ್ಯಾಚ್ ನ ಸಗಣಿ ಕುವೈತ್‌ಗೆ ಹೊರಟಿದೆ. ಕಸ್ಟಮ್ಸ್ ಇಲಾಖೆಯ ಉಸ್ತುವಾರಿಯಲ್ಲಿ ಸಗಣಿ ಪೊಟ್ಟಣ ಕಟ್ಟುವ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ. ಜೈಪುರದ ಗೋಶಾಲೆಯಿಂದ ಸಗಣಿ ಕಳುಹಿಸಲಾಗುತ್ತಿದ್ದು, ಕುವೈತ್ ನ ಖಾಸಗಿ ಕಂಪನಿಯೊಂದಕ್ಕೆ ಸಗಣಿಯನ್ನು ರಫ್ತು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಈಗಾಗಲೇ […]

ರಷ್ಯಾದಿಂದ ತೈಲ ಆಮದನ್ನು ದ್ವಿಗುಣಗೊಳಿಸುವತ್ತ ಭಾರತದ ಚಿತ್ತ? ರಷ್ಯಾ ಕಂಪನಿಯಿಂದ ಹೆಚ್ಚು ತೈಲ ಖರೀದಿಸಲು ಭಾರತ ಉತ್ಸುಕ

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಯುದ್ದ ಹಿನ್ನೆಲೆಯಲ್ಲಿ ಯೂರೋಪ್ ಮತ್ತಿತರ ಪಾಶ್ಚಾತ್ಯ ದೇಶಗಳು ಮಾಸ್ಕೋದೊಂದಿಗಿನ ವ್ಯವಹಾರವನ್ನು ತಿರಸ್ಕರಿಸಿರುವುದರಿಂದ, ಭಾರತವು ಈ ಸನ್ನಿವೇಶವನ್ನು ತನ್ನ ಅನುಕೂಲಕ್ಕೆ ಪರಿವರ್ತಿಸಲು ಉತ್ಸುಕವಾಗಿದೆ ಎನ್ನಲಾಗಿದೆ. ಭಾರತವು ತನ್ನ ರಷ್ಯಾದ ತೈಲ ಆಮದುಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳೊಂದಿಗೆ ದ್ವಿಗುಣಗೊಳಿಸಲು ನೋಡುತ್ತಿದ್ದು, ರಷ್ಯಾದ ರೋಸ್ನೆಫ್ಟ್ ಪಿ ಜೆ ಎಸ್ ಸಿ ಯಿಂದ ಹೆಚ್ಚು-ರಿಯಾಯಿತಿ ಸರಬರಾಜುಗಳನ್ನು ತೆಗೆದುಕೊಳ್ಳಲು ಉತ್ಸುಕವಾಗಿದೆ ಎಂದು ವರದಿಯಾಗಿದೆ. ಭಾರತದ ಸಂಸ್ಕಾರಕಗಳು ಒಟ್ಟಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲಕ್ಕಾಗಿ ಆರು ತಿಂಗಳ ಹೊಸ ಪೂರೈಕೆ […]