ಭಾರತದ ಕೂಟನೀತಿಗೆ ಜಯ: ಆಸ್ಟ್ರೇಲಿಯಾ ವಿರುದ್ದದ ಕರಡು ನಿರ್ಣಯ ವಾಪಾಸ್ ಪಡೆದ ಚೀನಾ
ವಿಯೆನ್ನಾ: ಶನಿವಾರ ವಿಯೆನ್ನಾದಲ್ಲಿ ನಡೆದ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಸಾಮಾನ್ಯ ಸಮ್ಮೇಳನದಲ್ಲಿ ಅಮೇರಿಕಾ-ಯುಕೆ-ಆಸ್ಟ್ರೇಲಿಯಾ ಪರಮಾಣು ಜಲಾಂತರ್ಗಾಮಿ ಒಪ್ಪಂದದ ವಿರುದ್ಧ ನಿರ್ಣಯವನ್ನು ಅಂಗೀಕರಿಸುವ ಚೀನಾದ ಪ್ರಯತ್ನವನ್ನು ತಡೆಯುವಲ್ಲಿ ಭಾರತದ ಚತುರ ರಾಜತಾಂತ್ರಿಕತೆಯು ನೆರವಾಗಿದೆ. ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಆಸ್ಟ್ರೇಲಿಯಾಕ್ಕೆ ಒದಗಿಸುವ ಎ.ಯುಕೆ.ಯುಎಸ್ ಸಂಯುಕ್ತ ಸಂಘಟೆನೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಚೀನಾ ಪ್ರಯತ್ನಿಸುತ್ತಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ದದ ಕರಡು ನಿರ್ಣಯಕ್ಕೆ ಬಹುಮತದ ಬೆಂಬಲ ಸಿಗದಂತೆ ನೋಡಿಕೊಳ್ಳಲು ಭಾರತವು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಅನೇಕ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ […]
ಭಾರತೀಯ ಬೌಲರ್ ವಿನೂ ಮಂಕಡ್ ಅವರ ಮಾಂಕಡಿಂಗ್ ತಂತ್ರದಿಂದ ಪಂದ್ಯ ಮತ್ತು ಭಾರತೀಯರ ಹೃದಯ ಗೆದ್ದ ದೀಪ್ತಿ ಶರ್ಮಾ
ಕ್ರಿಕೆಟ್ ಕ್ರೀಡೆಯಲ್ಲಿ, ಬೌಲರ್ ಬೌಲ್ ಮಾಡುವ ಅಂತಿಮ ಹಂತದಲ್ಲಿದ್ದಾಗ ನಾನ್-ಸ್ಟ್ರೈಕಿಂಗ್ ಬ್ಯಾಟ್ಸ್ಮನ್ ಕ್ರೀಸ್ ತೊರೆದು ಬ್ಯಾಕ್ ಅಪ್ ಮಾಡಿದಲ್ಲಿ ಬೌಲರ್ ಅವರನ್ನು ರನ್ ಔಟ್ ಮಾಡುವ ಪ್ರಕ್ರಿಯೆಯನ್ನು ಮಾಂಕಡಿಂಗ್ ಎನ್ನುತ್ತಾರೆ. 1948 ರ ಸಿಡ್ನಿ ಟೆಸ್ಟ್ನಲ್ಲಿ ಇದೇ ರೀತಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಬಿಲ್ ಬ್ರೌನ್ ಅವರನ್ನು ರನೌಟ್ ಮಾಡಿದ ಭಾರತೀಯ ಬೌಲರ್ ವಿನೂ ಮಾಂಕಡ್ ಅವರ ತಂತ್ರವನ್ನು ಕ್ರಿಕೆಟ್ ಜಗತ್ತಿನಲ್ಲಿ ಅವರದೇ ಹೆಸರಿನಿಂದ ಗುರುತಿಸಲಾಗುವುದು ಭಾರತೀಯರಿಗೆ ಹೆಮ್ಮೆ. ಒಬ್ಬ ಭಾರತೀಯ ಕ್ರಿಕೆಟಿಗನ ಇದೇ ತಂತ್ರವನ್ನು ಬಳಸಿ ಇನ್ನೊಬ್ಬಾಕೆ […]
ಶ್ರೀಲಂಕಾಕ್ಕೆ ದ್ವಿಪಕ್ಷೀಯ ಸಾಲ ನೀಡುವಿಕೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ
ನವದೆಹಲಿ: ಭಾರತವು ಚೀನಾವನ್ನು ಹಿಂದಿಕ್ಕಿ ಶ್ರೀಲಂಕಾಕ್ಕೆ ಅತಿದೊಡ್ಡ ದ್ವಿಪಕ್ಷೀಯ ಸಾಲ ನೀಡುವ ದೇಶವಾಗಿ ಹೊರಹೊಮ್ಮಿದೆ. 2022 ರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಭಾರತವು ದ್ವೀಪ ರಾಷ್ಟ್ರಕ್ಕೆ ಒಟ್ಟು 968 ಮಿಲಿಯನ್ ಯುಎಸ್ ಡಾಲರ್ ಸಾಲವನ್ನು ನೀಡಿದೆ. 2017 ರಿಂದ 2021 ರವರೆಗೆ ಕಳೆದ ಐದು ವರ್ಷಗಳಲ್ಲಿ, ಚೀನಾ ಅತಿದೊಡ್ಡ ದ್ವಿಪಕ್ಷೀಯ ಸಾಲದಾತನಾಗಿತ್ತು. ಭಾರತವು ಶ್ರೀಲಂಕಾಕ್ಕೆ ಸುಮಾರು 4 ಬಿಲಿಯನ್ ಡಾಲರ್ ಆಹಾರ ಮತ್ತು ಆರ್ಥಿಕ ನೆರವು ನೀಡಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ […]
ಬಿ747 ಜಂಬೋ ಜೆಟ್ ನಲ್ಲಿ ಭಾರತಕ್ಕೆ ಬರಲಿವೆ 8 ಚಿರತೆಗಳು: ವಿಮಾನದ ಮನಮೋಹಕ ಚಿತ್ರ ಹಂಚಿಕೊಂಡ ಅಧಿಕಾರಿಗಳು
ವಿಂಡ್ಹೋಕ್: ವಿಶೇಷ ವಿಮಾನವೊಂದು ನಮೀಬಿಯಾದಿಂದ ಭಾರತಕ್ಕೆ ಚಿರತೆಗಳನ್ನು ಕರೆತರುತ್ತಿರುವ ಸುಂದರ ಚಿತ್ರ ಕಣ್ಮುಂದೆ ಬಂದಿದೆ. ಇದರಲ್ಲಿ ಚಿರತೆಗಳ ಸುಂದರ ವರ್ಣಚಿತ್ರಗಳನ್ನು ಮಾಡಲಾಗಿದೆ. ವಿಮಾನಯಾನ ಸಂಸ್ಥೆಯು ಈ ವಿಮಾನಕ್ಕೆ 118 ಎನ್ನುವ ವಿಶೇಷ ಸಂಖ್ಯೆ ನೀಡಿದೆ. ಈ ಕಂಪನಿಯು ಇದೆ ಮೊದಲ ಬಾರಿಗೆ ಚಿರತೆಗಳನ್ನು ಸ್ಥಳಾಂತರಿಸುತ್ತಿದೆ. ಈ ದೊಡ್ಡ ವಿಮಾನದಲ್ಲಿ 8 ಚಿರತೆಗಳನ್ನು ಭಾರತಕ್ಕೆ ತರಲಾಗುವುದು. ಚಿರತೆಗಳನ್ನು ಭಾರತಕ್ಕೆ ತರಲು ವಿಶೇಷ ವಿಮಾನ ನಮೀಬಿಯಾಕ್ಕೆ ಆಗಮಿಸಿದ್ದು, ನಮೀಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ವಿಮಾನದ ಚಿತ್ರವನ್ನು ಟ್ವೀಟ್ ಮಾಡಿದೆ. A […]
ಪಾಕ್ ಅಭಿಮಾನಿಗಳ ಜೊತೆ ಮಾರಾಮಾರಿ; ಭಾರತದ ಜೊತೆ ದೋಸ್ತಿ ಯಾರಿ: ಇದು ಅಫ್ಘಾನ್ ಕ್ರಿಕೆಟ್ ಅಭಿಮಾನಿಗಳ ಭಾರತ ಪ್ರೇಮ!
ಅಫ್ಘಾನಿಸ್ತಾನವು ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಒಂದರ ನಂತರ ಇನ್ನೊಂದರಂತೆ ಎರಡು ಪಂದ್ಯಗಳನ್ನು ಆಡಿದೆ. ಮೊಹಮ್ಮದ್ ನಬಿ ನೇತೃತ್ವದ ತಂಡಕ್ಕೆ ಫಲಿತಾಂಶವು ಒಂದೇ ಆಗಿದ್ದರೂ, ವೀಕ್ಷಕರ ಗ್ಯಾಲರಿಯ ದೃಶ್ಯಗಳು ಮಾತ್ರ ಬೇರೆ ಬೇರೆಯಾಗಿವೆ. ಅಫ್ಘಾನಿಸ್ತಾನವು ಪಾಕಿಸ್ತಾನದ ವಿರುದ್ಧ ಕೇವಲ 1 ವಿಕೆಟ್ನಿಂದ ಸೋತಿತ್ತು. ಅದೆ ಭಾರತದ ವಿರುದ್ದ ಕೊನೆಯ ಸೂಪರ್ 4 ಘರ್ಷಣೆಯಲ್ಲಿ 101 ರನ್ಗಳಿಂದ ಆಲೌಟ್ ಆಗಿತ್ತು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ಮಧ್ಯದಲ್ಲೇ ಈ ಎರಡೂ ದೇಶಗಳ ಅಭಿಮಾನಿಗಳು ಹೊಯ್-ಕೈ […]