ಚಂದ್ರಯಾನ-3 ರ ಚಿತ್ರ ರಚಿಸಿ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿಸಿದ ನ್ಯೂ ಫ್ರೆಂಡ್ಸ್ ಕಬ್ಬೆಟ್ಟು
ಉಡುಪಿ: ಅಂಬಲಪಾಡಿಯ ನ್ಯೂ ಫ್ರೆಂಡ್ಸ್ ಕಬ್ಬೆಟ್ಟು ಇವರು ಪ್ರತೀ ಬಾರಿಯಂತೆ ಈ ಬಾರಿಯೂ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಈ ಬಾರಿ 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಚಂದ್ರಯಾನ- 3 ರ ಚಿತ್ರ ರಚಿಸಿ ಜನಮನ್ನಣೆ ಗಳಿಸಿದ್ದಾರೆ. ಕಲಾರಚನೆಯಲ್ಲಿ ಸುಧಾಕರ್, ದಯಾನಂದ, ಹರೀಶ್ ಸಹಕರಿಸಿದ್ದಾರೆ.
ಮಣಿಪಾಲ: ಆಗಸ್ಟ್ 13 ರಂದು ತಪೋವನ ಲೈಫ್ ಸ್ಪೇಸ್‌ನಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆ
ಮಣಿಪಾಲ: ಮಣಿಪಾಲ್ ಯೂನಿವರ್ಸಲ್ ಪ್ರೆಸ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ತಪೋವನ, ಮಣಿಪಾಲ ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ‘ರಾಷ್ಟ್ರಭಕ್ತಿ’ ಎಂಬ ವಿಷಯದ ಮೇಲೆ ಮಕ್ಕಳಿಗಾಗಿ ಚಿತ್ರಕಲೆ, ಸಂಗೀತ ಮತ್ತು ಕಥೆ ಹೇಳುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಣಿಪಾಲದ ತಪೋವನ ಲೈಫ್ ಸ್ಪೇಸ್‌ನಲ್ಲಿ ಆಗಸ್ಟ್ 13 ರವಿವಾರ ಳಗ್ಗೆ 10 ಗಂಟೆಯಿಂದ ಸ್ಪರ್ಧೆ ಆರಂಭವಾಗಲಿದೆ. ಪ್ರತಿ ಸ್ಪರ್ಧೆಯಲ್ಲಿಯೂ 1 ರಿಂದ 3, 4 ರಿಂದ 7 ಮತ್ತು 8ರಿಂದ 10ನೆಯ ತರಗತಿಯವರೆಗಿನ ಮೂರು ವಿಭಾಗಗಳಿವೆ. ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ಭಾವನಾ ಭಟ್ [ 6364919422] , ಮಹೇಶ ಮಲ್ಪೆ [8660637172] ಇವರನ್ನು ಸಂಪರ್ಕಿಸಬಹುದಾಗಿದೆ.
ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಬಹುಮಾನ ಗಳಿಸಿ; ಸ್ವಾತಂತ್ರ್ಯೋತ್ಸವವನ್ನು ವಿಶೇಶವಾಗಿ ಆಚರಿಸಿ!!
ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗೆ ದ.ಕ/ಉಡುಪಿ ಜಿಲ್ಲೆ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ತಿರಂಗಾ ಜೊತೆ ಸೆಲ್ಫಿ ಕ್ಲಿಕ್ಕಿಸಿ 7204146368 ಈ ಸಂಖ್ಯೆಗೆ ಕಳುಹಿಸಿ ಬಹುಮಾನ ಗೆಲ್ಲಿ. ಮೊದಲನೆ ಬಹುಮಾನ-3000ರೂ ಎರಡನೇ ಬಹುಮಾನ-2000ರೂ ಮೂರನೇ ಬಹುಮಾನ-1000ರೂ 5 ಸಮಾಧಾನಕರ ಬಹುಮಾನ ಮತ್ತು ಆಕರ್ಷಕ ಉಡುಗೊರೆ ಗೆಲ್ಲಿ ಫೋಟೋ ಕಳುಹಿಸಲು ಕೊನೆಯ ದಿನಾಂಕ ಆ. 16. ಒಬ್ಬರು ಒಂದು ಫೋಟೋ ಮಾತ್ರ ಕಳುಹಿಸಬಹುದು. ಆ19 ರಂದು […]
ಮಂದಾರ್ತಿ: ನಮಸ್ತೆ ಭಾರತ್ ಟ್ರಸ್ಟ್ ವತಿಯಿಂದ ಸದಾವತ್ಸಲೇ ಜನ-ಗಣ-ಮನ ಕಾರ್ಯಕ್ರಮ
ಮಂದಾರ್ತಿ: ನಮಸ್ತೆ ಭಾರತ್ ಟ್ರಸ್ಟ್ (ರಿ) ಮಂದಾರ್ತಿ ಇವರ ಸಂಯೋಜನೆಯಲ್ಲಿ ಆ.13 ರಂದು ಮಧ್ಯಾಹ್ನ 3 ಗಂಟೆಗೆ ಮಂದಾರ್ತಿ ಶ್ರೀ ದುರ್ಗಾ ಸನ್ನಿಧಿ ಶೇಡಿಕೂಡ್ಲುವಿನಲ್ಲಿ ಸದಾವತ್ಸಲೇ ಜನ-ಗಣ-ಮನ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಜಾಗೃತಿ, ಪ್ರತಿಭಾ ಪುರಸ್ಕಾರ, ಕಿರುಚಿತ್ರ ಪ್ರದರ್ಶನ, ಕುಣಿತ ಭಜನೆ, ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ಹಮ್ಮಿಕೊಳ್ಳಲಾಗಿದೆ. ವೃತ್ತಿಪರ ಕೃಷಿಕ ಹೆಚ್. ವಿಠಲ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ, ಮಂದಾರ್ತಿ ದೇವಳದ ಆನುವಂಶಿಕ ಮೊಕ್ತೇಸರ ಹೆಚ್.ಧನಂಜಯ್ […]
ಉಡುಪಿ ಅಂಚೆ ಕಚೇರಿ ವತಿಯಿಂದ ‘ಹರ್ ಘರ್ ತಿರಂಗಾ’ ಜನಜಾಗೃತಿ ಜಾಥಾ
ಉಡುಪಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಅಭಿಯಾನದ ಯಶಸ್ಸಿಗಾಗಿ ಉಡುಪಿ ಅಂಚೆ ವಿಭಾಗವು ತ್ರಿವರ್ಣ ಧ್ವಜದ ಕುರಿತು ಜನಜಾಗೃತಿ ಜಾಥವನ್ನು ಉಡುಪಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿತ್ತು. ಉಡುಪಿ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಜಾಥಕ್ಕೆ ಚಾಲನೆ ನೀಡಿದ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಮಾತನಾಡಿ, ಕಳೆದ ಬಾರಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಪ್ರತಿ ಮನೆಯಲ್ಲೂ ತ್ವಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಯಶಸ್ವಿ ಯಾಗುವಲ್ಲಿ ಭಾರತೀಯ ಅಂಚೆ ಇಲಾಖೆಯ ಪಾತ್ರ […]