ಮಣಿಪಾಲ: ಆಗಸ್ಟ್‌ 13 ರಂದು ತಪೋವನ ಲೈಫ್‌ ಸ್ಪೇಸ್‌ನಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆ

ಮಣಿಪಾಲ: ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌, ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಮತ್ತು ತಪೋವನ, ಮಣಿಪಾಲ ‌ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ‘ರಾಷ್ಟ್ರಭಕ್ತಿ’ ಎಂಬ ವಿಷಯದ ಮೇಲೆ ಮಕ್ಕಳಿಗಾಗಿ ಚಿತ್ರಕಲೆ, ಸಂಗೀತ  ಮತ್ತು ಕಥೆ ಹೇಳುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಮಣಿಪಾಲದ ತಪೋವನ ಲೈಫ್‌ ಸ್ಪೇಸ್‌ನಲ್ಲಿ ಆಗಸ್ಟ್‌ 13 ರವಿವಾರ ಳಗ್ಗೆ 10 ಗಂಟೆಯಿಂದ ಸ್ಪರ್ಧೆ ಆರಂಭವಾಗಲಿದೆ. ಪ್ರತಿ ಸ್ಪರ್ಧೆಯಲ್ಲಿಯೂ 1 ರಿಂದ 3, 4 ರಿಂದ 7 ಮತ್ತು 8ರಿಂದ 10ನೆಯ ತರಗತಿಯವರೆಗಿನ
ಮೂರು ವಿಭಾಗಗಳಿವೆ. ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ಭಾವನಾ ಭಟ್
[ 6364919422] , ಮಹೇಶ ಮಲ್ಪೆ [8660637172] ಇವರನ್ನು ಸಂಪರ್ಕಿಸಬಹುದಾಗಿದೆ.