ಬೋಟ್ ಗಳಿಗೆ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಿ: ಗಣಪತಿ ಮಾಂಗ್ರೆ
ಉಡುಪಿ: ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ಅವಘಡಕ್ಕೆ ಸಿಲುಕುವ ಮೀನುಗಾರರ ಜೀವ ರಕ್ಷಣೆ ಹಾಗೂ ಬೋಟ್‍ಗಳನ್ನು ರಕ್ಷಿಸುವ ಸಲುವಾಗಿ ಎಲ್ಲ ಬೋಟ್‍ಗಳಿಗೆ ಟ್ರ್ಯಾಕರ್ ಮಾದರಿಯ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್‍ನ ಅಧ್ಯಕ್ಷ ಗಣಪತಿ ಮಾಂಗ್ರೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಾಧುನಿಕ ಸಂಪರ್ಕ ತಂತ್ರಜ್ಞಾನದ ಕೊರತೆಯಿಂದ ನೂರಾರು ಮಂದಿ ಮೀನುಗಾರರು ದುರಂತಕ್ಕೆ ಸಿಲುಕಿ, ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೋಟ್ ಗಳಿಗೆ ಟ್ರ್ಯಾಕರ್ ಗಳನ್ನು ಅಳವಡಿಸಿದ್ದಲ್ಲಿ […]