ಹಿಂದೂ ಮಹಾಸಾಗರದಲ್ಲಿರುವ ದೈತ್ಯ “ಗುರುತ್ವಾಕರ್ಷಣೆಯ ರಂಧ್ರ” ರಚನೆಗೆ ಕಾರಣ ಹುಡುಕಿದ ಬೆಂಗಳೂರು ಐಐಎಸ್ಸಿ ವಿಜ್ಞಾನಿಗಳು!!
ಬೆಂಗಳೂರು: ಭೂಮಿಯ ಗುರುತ್ವಾಕರ್ಷಣೆಯು ಹಿಂದೂ ಮಹಾಸಾಗರದ ಮಧ್ಯದಲ್ಲೆಲ್ಲೋ ದುರ್ಬಲವಾಗಿದೆ. ಇದಕ್ಕೆ ಕಾರಣ ಇಲ್ಲಿ ಇರುವ ದೈತ್ಯ ” ಗುರುತ್ವಾಕರ್ಷಣ ರಂಧ್ರ” . ಭಾರತೀಯ ವಿಜ್ಞಾನಿಗಳ ತಂಡವು ಹಿಂದೂ ಮಹಾಸಾಗರದಲ್ಲಿ ಮೂರು ಮಿಲಿಯನ್ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿರುವ ದೈತ್ಯ “ಗುರುತ್ವಾಕರ್ಷಣೆಯ ರಂಧ್ರ” ಕ್ಕೆ ಕಾರಣವೇನು ಎಂದು ಗುರುತಿಸಿದೆ. ಇಂಡಿಯನ್ ಓಷನ್ ಜಿಯೋಯ್ಡ್ ಲೋ (IOGL) ಎಂದು ಕರೆಯಲ್ಪಡುವ ಈ ಗುರುತ್ವಾಕರ್ಷಣೆಯ ರಂಧ್ರವು ಭೂಮಿಯ ಪ್ರಮುಖ ಗುರುತ್ವಾಕರ್ಷಣೆಯ ಅಸಂಗತತೆಯಾಗಿದೆ. ಇಲ್ಲಿ ಗುರುತ್ವಾಕರ್ಷಣೆಯು ಸರಾಸರಿಗಿಂತ ಕಡಿಮೆಯಾಗಿದೆ, ಹೀಗಾಗಿ ಸಮುದ್ರ ಮಟ್ಟವು […]
ಅಖಿಲ ಭಾರತ ಮಟ್ಟದ ಕೆವಿಪಿವೈ ಪರೀಕ್ಷೆ: ಎಕ್ಸ್ ಪರ್ಟ್ ಕಾಲೇಜಿನ 10 ವಿದ್ಯಾರ್ಥಿಗಳಿಗೆ ರ‍್ಯಾಂಕ್
ಮಂಗಳೂರು: ಭಾರತ ಸರಕಾರದ ವಿಜ್ಞಾನ ಮತ್ತುತಂತ್ರಜ್ಞಾನ ಇಲಾಖೆ ನಡೆಸಿದ ಕಿಶೋರ್ ವೈಜ್ಞಾನಿಕ್ ಪೋತ್ಸಾಹನ್ ಯೋಜನೆಯ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವಕಾಲೇಜಿನ 10 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದರ‍್ಯಾಂಕ್ ಪಡೆದುಕೊಂಡಿದ್ದಾರೆ. ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಕೆ.ವಿ.ಪಿ.ವೈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕಾಮತ್ ಅಮ್ಮೆಂಬಳ 127ನೇ ರ‍್ಯಾಂಕ್ ಹಾಗೂ ಶ್ರೇಯಸ್ ಕೆ. ನಿಶಾನಿ 149ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಎಸ್‌ಸಿ-ಎಸ್‌ಟಿ ವಿಭಾಗದಲ್ಲಿ ವಿಶಾಲ್ ಎಸ್. 49ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. […]