ಅಖಿಲ ಭಾರತ ಮಟ್ಟದ ಕೆವಿಪಿವೈ ಪರೀಕ್ಷೆ: ಎಕ್ಸ್ ಪರ್ಟ್ ಕಾಲೇಜಿನ 10 ವಿದ್ಯಾರ್ಥಿಗಳಿಗೆ ರ‍್ಯಾಂಕ್

ಮಂಗಳೂರು: ಭಾರತ ಸರಕಾರದ ವಿಜ್ಞಾನ ಮತ್ತುತಂತ್ರಜ್ಞಾನ ಇಲಾಖೆ ನಡೆಸಿದ ಕಿಶೋರ್ ವೈಜ್ಞಾನಿಕ್ ಪೋತ್ಸಾಹನ್‌ ಯೋಜನೆಯ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವಕಾಲೇಜಿನ 10 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದರ‍್ಯಾಂಕ್ ಪಡೆದುಕೊಂಡಿದ್ದಾರೆ.

ಇಂಡಿಯನ್‌ ಇನ್ಸಿಟ್ಯೂಟ್‌ ಆಫ್ ಸೈನ್ಸ್ ನಡೆಸಿದ ಕೆ.ವಿ.ಪಿ.ವೈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕಾಮತ್ ಅಮ್ಮೆಂಬಳ 127ನೇ ರ‍್ಯಾಂಕ್ ಹಾಗೂ ಶ್ರೇಯಸ್ ಕೆ. ನಿಶಾನಿ 149ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಎಸ್‌ಸಿ-ಎಸ್‌ಟಿ ವಿಭಾಗದಲ್ಲಿ ವಿಶಾಲ್‌ ಎಸ್. 49ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಸಾಥ್ವಿಕ್‌ ಎ.ಎಸ್. 552ನೇ ರ‍್ಯಾಂಕ್, ಸ್ಕಂದ ಶಾನುಭಾಗ್ 619ನೇ ರ‍್ಯಾಂಕ್, ಕೆ. ನಿಭಾ ಭಟ್ 910ನೇ ರ‍್ಯಾಂಕ್, ವೃಷಭ್ ವಿ. ಜವಳಿ 1107ನೇ ರ‍್ಯಾಂಕ್, ಪ್ರಣವ್‌ಎಸ್. 1431ನೇ ರ‍್ಯಾಂಕ್, ಸ್ನೇಹಲ್ ಮಹಿಮ ಕ್ಯಾಸ್ಟಲಿನೊ 1745ನೇ ರ‍್ಯಾಂಕ್, ಅಭಿಷೇಕ್ ಪ್ರಕಾಶ್‌ ಕಲ್ಯಾಣ್‌ ಶೆಟ್ಟಿ 1791 ನೇ ರ‍್ಯಾಂಕ್‌ಪಡೆದುಕೊಂಡಿದ್ದಾರೆ.

ಪ್ರವೇಶ ಪರೀಕ್ಷೆಯಲ್ಲಿಅರ್ಹತೆಯನ್ನು ಪಡೆದು ಇದೀಗ ಅಖಿಲ ಭಾರತ ಮಟ್ಟದಲ್ಲಿಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 80,000 ರೂ.ಯಿಂದ 1,12,000ರೂ. ಗಳ ವರೆಗೆ ಪ್ರೋತ್ಸಾಹಧನ ಸಿಗುತ್ತದೆ.

ಕೆವಿಪಿವೈ ರ‍್ಯಾಂಕ್ ವಿಜೇತರಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು  ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್.ನಾಯಕ್ ಅಭಿನಂದಿಸಿದ್ದಾರೆ.

ಮೂಲ ವಿಜ್ಞಾನದಲ್ಲಿಓದುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಭಾರತ ಸರಕಾರದ ವಿಜ್ಞಾನ ಮತ್ತುತಂತ್ರಜ್ಞಾನ ಇಲಾಖೆ 1999 ರಲ್ಲಿ ‘ಕಿಶೋರ್ ವಿಜ್ಞಾನಿ ಪೋತ್ಸಾಹನ್‌ ಯೋಜನೆ’ಯನ್ನು ಪ್ರಾರಂಭಿಸಿತ್ತು. ಈ ಕಾರ್ಯಕ್ರಮದಡಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಮೂಲ ಶಿಕ್ಷಣದಲ್ಲಿ ಅಧ್ಯಯನ ಮುಂದುವರಿಸುವವರಿಗೆ ಅಥವಾ ಸಂಶೋಧನೆ ಮಾಡುವವರಿಗೆ ೫ ವರ್ಷಗಳವರೆಗೆ ಪ್ರೋತ್ಸಾಹಧನವನ್ನುಕೇಂದ್ರ ಸರಕಾರ ನೀಡುತ್ತದೆ. ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು, ಇಂಡಿಯನ್‌ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್‌ ಆ್ಯಂಡ್‌ ರೀಸರ್ಚ್ ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.