ಪಡುಬಿದೆ: ಹೆಜ್ಜೇನು ದಾಳಿಯಿಂದ ಬಚಾವಾಗಲು ನೀರಿಗೆ ಹಾರಿ ಓರ್ವ ಮೃತ; ಇನ್ನೋರ್ವ ಗಂಭೀರ

ಪಡುಬಿದ್ರೆ: ಹೆಜ್ಜೇನು ದಾಳಿಯಿಂದ ಬಚಾವಾಗಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಪಡುಬಿದ್ರೆ ಬೀಚ್ ಬಳಿ ನಡೆದಿದೆ. ಪಡುಬಿದ್ರೆ ಬೀಚ್ ಬಳಿ ಇಬ್ಬರು ವ್ಯಕ್ತಿಗಳು ಅಡ್ಡಾಡುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿದೆ ಎನ್ನಲಾಗಿದೆ. ಹೆಜ್ಜೇನು ಕಡಿತದಿಂದ ಬಚಾವಾಗಲು ಪ್ರಯತ್ನಿಸಿ ಇಬ್ಬರೂ ಕೂಡಾ ನೀರಿಗೆ ಹಾರಿದ್ದಾರೆ. ಘಟನೆಯಲ್ಲಿ ಓರ್ವ ಮೃತ ಪಟ್ಟಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ವಾಸುದೇವ ಡಿ.ಸಾಲಿಯಾನ್​(65) ಮೃತಪಟ್ಟವರು. ಮೀನುಗಾರರಾಗಿರುವ ವಾಸುದೇವ ಸಾಲ್ಯಾನ್ ಹೆಜ್ಜೇನು ದಾಳಿ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲೇ ಸಮೀಪದ ಸಮುದ್ರದ […]

ಜೇನುಗಾರಿಕಾ ತರಬೇತಿಗೆ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ ನವೆಂಬರ್ 14 ರಿಂದ 2023 ಫೆಬ್ರವರಿ 15 ರ ವರೆಗೆ ನಡೆಯಲಿರುವ 3 ತಿಂಗಳ ಜೇನುಗಾರಿಕೆ ತರಬೇತಿಗೆ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ, 18 ರಿಂದ 35 ವರ್ಷ ವಯಸ್ಸಿನ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ತರಬೇತಿ ಬಯಸುವ ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು, ಸ್ವಂತ ಸಾಗುವಳಿ ಮಾಡುತ್ತಿರಬೇಕು. ಅರ್ಜಿ ಸಲ್ಲಿಸಲು ನವೆಂಬರ್ 5 ಕೊನೆಯ ದಿನ. […]