ಉಡುಪಿ: ಹೈರಿಸ್ಕ್ ದೇಶದಿಂದ ಬಂದಿರುವ ಮೂವರಿಗೆ ಹೋಮ್ ಕ್ವಾರಂಟೈನ್: ಡಿಸಿ ಕೂರ್ಮಾರಾವ್
ಉಡುಪಿ: ಉಡುಪಿ ಜಿಲ್ಲೆಗೆ ಕಳೆದ ಐದು ದಿನಗಳಲ್ಲಿ 91 ಮಂದಿ ವಿದೇಶದಿಂದ ಆಗಮಿಸಿದ್ದು, ಈ ಪೈಕಿ ಮೂರು ಮಂದಿ ಹೈರಿಸ್ಕ್ ದೇಶದಿಂದ ಬಂದಿದ್ದಾರೆ. ಇವರೆಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ ಹೈರಿಸ್ಕ್ ದೇಶದಿಂದ ಬಂದಿರುವ ಮೂವರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಒಂದು ವಾರದಲ್ಲಿ ಜಿಲ್ಲೆಗೆ ಕೇರಳದಿಂದ 69 ಮಂದಿ ಬಂದಿದ್ದು, ಅದರಲ್ಲಿ 9 […]