ಬುಕ್ ಮೈ ಶೋನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ‘ಕಾಂತಾರ’

ದೇಶದ ಚಲನಚಿತ್ರೋದ್ಯಮದಲ್ಲೇ ಸಂಚಲನ ಸೃಷ್ಟಿಸಿರುವ ‘ಕಾಂತಾರ’ ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ತೆರೆಕಂಡ ಅತ್ಯುತ್ತಮ ಚಲನಚಿತ್ರಗಳ ಸ್ಥಾನಮಾನವನ್ನು ಗಳಿಸಿದೆ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಈ ಚಿತ್ರವು ರಾಷ್ಟ್ರಪ್ರಶಸ್ತಿಯನ್ನು ಪಡೆಯುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಅಲ್ಲದೆ ಗಲ್ಲಾ ಪೆಟ್ಟಿಗೆ ಸಂಗ್ರಹಣೆಯೂ ದಿನೇ ದಿನೇ ಏರುತ್ತಲೇ ಇದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’ ರಜಾ ದಿನವಲ್ಲದೆ, ಕೆಲಸದ ದಿನಗಳಲ್ಲೂ ಹೌಸ್ ಫುಲ್ ಓಡುತ್ತಿದ್ದು, ಬುಕ್ ಮೈ ಶೋ ವೆಬ್ ಸೈಟ್ ನಲ್ಲಿ ಸಿನಿಮಾ ನೋಡುಗರಿಂದ ಟಿಕೆಟ್ ಗೆ ಭಾರಿ […]

ರಾಜ್ ಬಿ ಶೆಟ್ಟಿ ನೃತ್ಯ ಸಂಯೋಜನೆಯಲ್ಲಿ ಮೂಡಿಬಂತು ತುಳುನಾಡ ದೈವಾರಾಧನೆ: ಕನ್ನಡದ RRR ಕೈಚಳಕದ ಕಾಂತಾರಾ!!

ವಿಶ್ವ ಚಲನಚಿತ್ರ ವೇದಿಕೆಯಲ್ಲಿ ಸಂಚಲನ ಮೂಡಿಸುತ್ತಿರುವ, ತುಳುನಾಡು, ತುಳು ಸಂಸ್ಕೃತಿಯ ಬಗ್ಗೆ ಅಮೋಘ ಚಿತ್ರಣವನ್ನು ಹೊಂದಿರುವ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿರುವ ಹೊಂಬಾಳೆ ಫಿಲಂಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದ ಹಿಂದೆ ರಾಜ್ ಬಿ.ಶೆಟ್ಟಿ ಮತ್ತು ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿಯವರ ಕೈ ಚಳಕವೂ ಇದೆ! ಇಡೀ ಚಲನಚಿತ್ರದ ಅತ್ಯಂತ ಅಮೋಘ ಮತ್ತು ಅಕಲ್ಪನೀಯ ದೃಶ್ಯವಾಗಿರುವ ದೈವಾರಾಧನೆಯ ದೃಶ್ಯಗಳಿಗೆ ನೃತ್ಯ ಸಂಯೋಜನೆ ಮಾಡಿರುವುದು ಗರುಡ ಗಮನ ವೃಷಭ ವಾಹನ ಖ್ಯಾತಿಯ ರಾಜ್.ಬಿ. ಶೆಟ್ಟಿ. . @RajbShettyOMK […]

ತುಳುವ ಮಣ್ಣಿನ ಕಂಪು ಪಸರುವ ಕಾಂತಾರಾ ಚಿತ್ರದ ಟ್ರೈಲರ್ ಬಿಡುಗಡೆ

ಮಂಗಳೂರು/ಉಡುಪಿ: ಅವಿಭಜಿತ ದ.ಕ ಜಿಲ್ಲೆಯ ಬಹುಮುಖ ಪ್ರತಿಭೆ, ಕುಂದಾಪುರದ ಅಭಿಜಾತ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಾಂತಾರಾ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಖುದ್ದು ರಿಷಬ್ ಶೆಟ್ಟಿ ಚಿತ್ರಕಥೆ ಬರೆದು ನಟಿಸಿ ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ನಲ್ಲಿ ತುಳುನಾಡಿನ ದೈವಾರಾಧನೆ ಮತ್ತು ಕಂಬಳದ ದೃಶ್ಯಗಳು ಮನೋಜ್ಞವಾಗಿ ಮೂಡಿಬಂದಿವೆ. ನಾಯಕಿಯಾಗಿ ಸಪ್ತಮಿ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮತೊಬ್ಬ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಸಂಗೀತ ಮತ್ತು ಹಿನ್ನೆಲೆ ಸಂಗೀತವು […]

ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ ಪ್ರಭಾಸ್ ನಟನೆಯ ಸಲಾರ್: ಕೆ.ಜಿ.ಎಫ್ ಕಮಾಲ್ ಗೆ ಮನಸೋತ ಜನ ಸಲಾರ್ ಗೂ ಜೈ ಎನ್ನುವರೆ?

ಭಾರತೀಯ ಚಿತ್ರರಂಗದ ಬಾಹುಬಲಿ, ದಕ್ಷಿಣದ ಖ್ಯಾತ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಸೆಪ್ಟೆಂಬರ್ 28 ರಂದು ತೆರೆಗಪ್ಪಳಿಸಲಿದೆ. ಕೆ.ಜಿ.ಎಫ್ ಖ್ಯಾತಿಯ ಪ್ರಖ್ಯಾತ ಬ್ಯಾನರ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ, ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಬತ್ತಳಿಕೆಯಿಂದ ಹೊರಟಿರುವ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಬಗ್ಗೆ ಈಗಾಗಲೇ ಕುತೂಹಲ ಮತ್ತು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕೆ.ಜಿ.ಎಫ್ ಕಮಾಲಿಗೆ ಮನಸೋತು ಕ್ರೇಜ್ ಹುಟ್ಟಿಸಿಕೊಂಡ ಸಿನಿಪ್ರಿಯರು ಸಲಾರ್ ಗೂ ಸೋಲುವರೆ? ಸಿನಿಮಾ ಗೆಲ್ಲಿಸುವರೆ ಎನ್ನುವುದನ್ನು ಕಾಲವೆ […]