ಹಿರಿಯಡ್ಕ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಇದರ 31ನೇ ವಾರ್ಷಿಕೋತ್ಸವ ಸಮಾರಂಭ

ಹಿರಿಯಡ್ಕ: ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಹಿರಿಯಡ್ಕ ಇದರ 31ನೇ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಭೌತಿಕ್ ಕಾರ್ಯಕ್ರಮವು ಜ.26 ರಂದು ಜರುಗಿತು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೊಡವೂರು ನಗರಸಭೆ ಸದಸ್ಯ ವಿಜಯ್ ಕೊಡವೂರು, ಶ್ರೀರಾಮನಂತ ಮಗ, ಲಕ್ಷ್ಮಣ – ಭರತರಂತ ತಮ್ಮಂದಿರು, ಸೀತೆಯಂತ ಪತ್ನಿ ಇದ್ದಂತಹ ದೆಷ ನಮ್ಮದು. ಅಂಬೇಡ್ಕರ್, ವಿವೇಕಾನಂದ, ನಾರಾಯಣ ಗುರುಗಳಂತಹ ಮಹಾನ್ ವ್ಯಕ್ತಿಗಳನ್ನು ಕಂಡಂತಹ ನಮ್ಮ ದೇಶದಲ್ಲಿ ಇಂದು ಕೋಟ್ಯಂತರ ಜನ ಯಾಕೆ ನಿರ್ಗತಿಕರಾಗಿದ್ದಾರೆ? ಪ್ರತಿವರ್ಷ ಸಾವಿರಾರು ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದರೆ, ಮಕ್ಕಳನ್ನು ಹೆತ್ತ […]

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ನೊಂದ ವ್ಯಕ್ತಿ ನೇಣಿಗೆ ಶರಣು

ಹಿರಿಯಡ್ಕ: ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಕೊಲ್ಯಾರುವಿನಲ್ಲಿ ಡಿ. 9ರಂದು ವ್ಯಕ್ತಿಯೊಬ್ಬರ ಮನೆ ಕೊಟ್ಟಿಗೆಗೆ ಬೆಂಕಿ ಬಿದ್ದದ್ದರಿಂದ ಮನನೊಂದು ಆತ್ಯಹತ್ಯೆಗೆ ಶರಣಾದ ಘಟನೆ ನಡೆದಿದೆ. ಕೊಲ್ಯಾರುವಿನ 59 ವರ್ಷದ ಶಾಂತೇಶ್ ಶೆಟ್ಟಿ ಮೃತರಾದವರು. ಇವರ ಮನೆಯ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋಗಿತ್ತು. ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ ಮತ್ತು ಬೈಹುಲ್ಲು ಅಗ್ನಿಗಾಹುತಿಯಾಗಿದ್ದವು. ಇದರಿಂದ ಮಾನಸಿಕವಾಗಿ ಖಿನ್ನನಾದ ಶಾಂತೇಶ್ ಡಿ.11 ರ ರಾತ್ರಿ 10 ಗಂಟೆಯಿಂದ ಡಿ.12 ರ ಬೆಳಗ್ಗಿನ ಜಾವದ ಒಳಗೆ ಮನೆಯ ಹಿಂದಿದ್ದ ಹಲಸಿನ ಮರದ […]

ಡಿ. 10 ರಂದು ಎಂಕುಲ್ ಫ್ರೆಂಡ್ಸ್ ಕಲಾವಿದರ ವತಿಯಿಂದ ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ

ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು ಹಿರಿಯಡಕ ಇವರ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ಬಾಲಕಿಯರ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಹಾಗೂ ಅಂಡರ್ -19 ವಯೋಮಿತಿಯ ಬಾಲಕರ ಹಾಗೂ ಗ್ರಾಮೀಣ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಕೂಟ ಎಂಕುಲು ಫ್ರೆಂಡ್ಸ್ ಟ್ರೋಫಿ 2022-23, ಡಿ. 10 ಶನಿವಾರದಂದು ಬೆಳಿಗ್ಗೆ 8:30 ರಿಂದ ಮರುದಿನ ಭಾನುವಾರ ಬೆಳಿಗ್ಗೆ 8.30 ರವರೆಗೆ ಕೋಟ್ನಕಟ್ಟಿ ಮೈದಾನದಲ್ಲಿ ಜರುಗಲಿದೆ. ತ್ರೋಬಾಲ್ ಮಹಿಳೆಯರು ಮತ್ತು ಬಾಲಕಿಯರು: […]

ಹಿರಿಯಡಕ: ನ. 26 ರಂದು ವಾಯ್ಸ್ ಆಫ್ ಚಾಣಕ್ಯ 2022 ರ ಸೆಮಿಫೈನಲ್

ಹಿರಿಯಡಕ: ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ಸ್ ಹೆಬ್ರಿ ಇವರ ನೇತೃತ್ವದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಿರಿಯಡಕ ರೈತರ ಸಹಕಾರಿ ಸಂಘ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ ಇವರ ಸಹಯೋಗದೊಂದಿಗೆ ವಾಯ್ಸ್ ಆಫ್ ಚಾಣಕ್ಯ 2022 ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸಮರ್ಥ ಸೀಸನ್- 5 ರ ಸೆಮಿಫೈನಲ್ ನ. 26 ರಂದು ಬೆಳಿಗ್ಗೆ 9:30 ಕ್ಕೆ ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆ […]

ರಾಷ್ಟ್ರ ಸ್ವಯಂ ಸೇವಿಕಾ ಸಮಿತಿ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಭಜನೆ

ಹಿರಿಯಡಕ: ಭಾರತಾಂಬೆ ಸಗ್ರಿ ರಾಷ್ಟ್ರ ಸ್ವಯಂ ಸೇವಿಕಾ ಸಮಿತಿ ವತಿಯಿಂದ ಅರವಿಂದ ಭಂಡಾರಿಯವರ ನೇತೃತ್ವದಲ್ಲಿ ನವರಾತ್ರಿಯ ಪ್ರಯುಕ್ತ ಜಿಲ್ಲಾ ಕಾರಾಗೃಹದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು. ರಾಷ್ಟ್ರ ಸ್ವಯಂ ಸೇವಿಕಾ ಸಮಿತಿ ಉಡುಪಿ ಜಿಲ್ಲೆಯ ನಿಧಿಪ್ರಮುಖ್ ಭಾರತೀ ಎಚ್.ನಾಯಕ್, ಹಿರಿಯ ರಾಷ್ಟ್ರ ಸ್ವಯಂ ಸೇವಕಿ ಶ್ರೀಮತಿ ಸ್ನೇಹ ಪ್ರಭಾ ಕೆ. ರಾವ್, ಉಡುಪಿ ಕಾರ್ಯವಾಹಿಕಾ ಶ್ರೀಮತಿ ಶಕುಂತಲಾ ಆರ್ ಶೆಣೈ, ಭಾರತಾಂಬೆ ಸಗ್ರಿ ಶಾಖೆಯ ಪ್ರಮುಖ ಶಿಕ್ಷಕಿ ಮಂಜುಳಾ ಪ್ರಸಾದ್ ಹಾಗೂ ಕಾರಾಗೃಹದ ಅಧಿಕಾರಿ ಎಸ್.ಬಿ.ಪಟೇಲ್ ಅವರ ಸಹಕಾರದೊಂದಿಗೆ […]