ನಮ ಬಿರುವೆರ್ ಹಿರಿಯಡ್ಕದಿಂದ ಸಹಾಯಧನ ವಿತರಣೆ
ಉಡುಪಿ: ಕಳೆದ ಕೆಲವು ದಿನಗಳ ಹಿಂದೆ ಬಸ್ಸ್ ಅಪಘಾತದಲ್ಲಿ ತನ್ನ ಬಲ ಕೈ ಕಳೆದುಕೊಂಡ ಉಡುಪಿ ತಾಲೂಕಿನ ಹಿರಿಯಡಕ ಅಂಜಾರು ಗ್ರಾಮದ ಬಾಕ್ಯಾರ್ ಕಟ್ಟ ನಿವಾಸಿ ಭಾಸ್ಕರ ಶೆಟ್ಟಿ ಹಾಗೂ ಗುಲಾಬಿ ದಂಪತಿಯ ಪುತ್ರ ಅಜಿತ್ ಶೆಟ್ಟಿ ಅವರಿಗೆ ನಮ ಬಿರುವೆರ್ ಹಿರಿಯಡ್ಕ ಸಂಘಟನೆಯ ವತಿಯಿಂದ ಸಹಾಯಧನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಸುಂದರ ಪೂಜಾರಿ ಗಂಪ, ಅಧ್ಯಕ್ಷ ಶೇಖರ ಪೂಜಾರಿ, ಪ್ರ. ಕಾರ್ಯದರ್ಶಿ ರವಿ ಎಸ್. ಪೂಜಾರಿ, ಕೋಶಾಧಿಕಾರಗಳಾದ ಪ್ರದೀಪ್ ಪೂಜಾರಿ, ವಿನುತ್ ಪೂಜಾರಿ, […]
ಖಾಸಗಿ ಬಸ್ ನ ಅವಾಂತರ: ಬಲಗೈ ಕಳೆದುಕೊಂಡ ಹುಡುಗನ ಚಿಕಿತ್ಸೆಗೆ ನೆರವಾಗುವಿರಾ?
ಉಡುಪಿ: ಬಸ್ ನ ಕಿಟಕಿ ಬದಿಯ ಸೀಟ್ ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ವೇಳೆ ಅತೀ ಧಾವಂತದಲ್ಲಿ ನುಗ್ಗಿ ಬಂದ ಬಸ್ ವೊಂದು ಅಂತಿಮ ವರ್ಷದ ಪದವಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಯೋರ್ವನ ಬಲಗೈಯನ್ನು ಬಲಿ ಪಡೆದುಕೊಂಡ ದಾರುಣ ಘಟನೆಯೊಂದು ಉಡುಪಿಯಲ್ಲಿ ಸಂಭವಿಸಿದ್ದು, ಸದ್ಯ ಆತನ ಚಿಕಿತ್ಸೆ ಗೆ ನೆರವು ನೀಡಬೇಕಾಗಿದೆ. ಅಜಿತ್ ಶೆಟ್ಟಿ ಮೂಲತ: ಹಿರಿಯಡಕದ ಅಂಜಾರಿನವರಾಗಿದ್ದು, ಎಂಜಿಎಂ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ. ಅಜಿತ್ ಮಂಗಳವಾರದಂದು ತರಗತಿ ಮುಗಿಸಿಕೊಂಡು ಕಾಲೇಜಿನಿಂದ ಮನೆಯತ್ತಾ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಪರ್ಕಳದ […]
ಹಿರಿಯಡಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಏ.19: ಸಿರಿಜಾತ್ರೆ, ಏ.22: ರಥೋತ್ಸವ
ಹಿರಿಯಡಕ: ಪೌರಾಣಿಕ ಹಿನ್ನೆಲೆಯುಳ್ಳ ಉಡುಪಿ ತಾಲೂಕಿನ ಹಿರಿಯಡಕದ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಎ. 9ರಂದು ವಾರ್ಷಿಕಮಹೋತ್ಸವ ಪ್ರಾರಂಭಗೊಂಡಿದ್ದು, ಏ. 24ರ ವರೆಗೆ ಜರಗಲಿದೆ. ಏ.19ರಂದು ಸಿರಿಜಾತ್ರೆ, ಏ. 22ರಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. ಏ. 19ರಂದು ಧ್ವಜಾರೋಹಣ, ರಾತ್ರಿ ಆರಾಧನಾ ಪೂಜೆ, ಪೂರ್ಣಿಮಾ ಉತ್ಸವ, ರಾತ್ರಿ ಹಾಲುಹಬ್ಬ, ಸವಾರಿ ಬಲಿ, ಬ್ರಹ್ಮಮಂಡಲ, ಭೂತ ಬಲಿ, ಏ. 20ರಂದು ರಾತ್ರಿ ಆರಾಧನಾ ಪೂಜೆ, ಬೈಗಿನ ಬಲಿ, ಸವಾರಿ ಬಲಿ, ಏ. 21ರಂದು ರಾತ್ರಿ ಆರಾಧನಾ ಪೂಜೆ, ನಿತ್ಯಬಲಿ, […]
ಹಿರಿಯಡಕ: ವೃತ್ತಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ
ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇಲ್ಲಿನ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ಘಟಕ, ಐಕ್ಯುಎಸಿ ಮತ್ತು ತ್ರಿಶಾ ಕ್ಲಾಸಸ್, ಉಡುಪಿ ಇವರ ಸಹಯೋಗದೊಂದಿಗೆ ಅಂತಿಮ ವರ್ಷದ ಬಿ.ಕಾಂ., ಬಿ.ಎ. ವಿದ್ಯಾರ್ಥಿಗಳಿಗೆ “ಪ್ರೀಪೇರಿಂಗ್ ಫಾರ್ ಕಾರ್ಪೋರೇಟ್ ಜಾಬ್ಸ್” ಎಂಬ ಕಾರ್ಯಾಗಾರವನ್ನು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತ್ರಿಶಾ ಕ್ಲಾಸಸ್, ಮಂಗಳೂರು ವಿಭಾಗದ ಮುಖ್ಯಸ್ಥ ಪ್ರೊ. ಚಂದನ್ ರಾವ್ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವುದರೊಂದಿಗೆ ಕಾರ್ಪೋರೇಟ್ ವಲಯದಲ್ಲಿ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯಗಳನ್ನು, […]
ಹಿರಿಯಡಕ: ಬ್ರ್ಯಾಂಡ್ ರಂಗೋಲಿ ಸ್ಪರ್ಧೆ
ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇಲ್ಲಿಯ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ಹೋಳಿಯನ್ನು ಸೋಮವಾರ ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಪ್ರಥಮ ವರ್ಷದ ಎಂ.ಕಾಂ. ವಿದ್ಯಾರ್ಥಿಗಳಿಗೆ ಬ್ರ್ಯಾಂಡ್ ರಂಗೋಲಿ ಸ್ಪರ್ಧೆಯನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲಾಯಿತು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಸ್ಪರ್ಧೆಯ ಸಂಘಟಕ ಪ್ರೊ. ಆನಂದ್ ಎಂ. ಬಿ. ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಸ್ಪರ್ಧೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿಗಳು ವಿವಿಧ ಕಂಪನಿಗಳ ಬ್ರ್ಯಾಂಡ್ಗಳನ್ನು ರಂಗೋಲಿ ಮೂಲಕ ಬಿಡಿಸಿ, ಆಯಾ ಕಂಪನಿಯ ಬಗೆಗೆ ಔಚಿತ್ಯ […]