ಆರೋಗ್ಯ ಕಾರ್ಡ್ ಮೂಲಕ ಡಾ. ಜಿ ಶಂಕರ್ ಅವರಿಂದ ಆರೋಗ್ಯ ಕ್ರಾಂತಿ: ರಮೇಶ್ ಕಾಂಚನ್

ಉಡುಪಿ: ಯಾವುದೇ ಜಾತಿ, ಧರ್ಮ ಬೇಧವಿಲ್ಲದೇ ಜಿಲ್ಲೆಯ ಜನರಿಗೆ ಡಾ. ಜಿ. ಶಂಕರ್ ಅವರು ಆರೋಗ್ಯ ಕಾರ್ಡ್ ವಿತರಿಸುತ್ತಿದ್ದು, ಬಡವರ ಪಾಲಿಗೆ ಇದು ಸಂಜೀವಿನಿಯಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಈ ಕಾರ್ಡ್ ಮೂಲಕ ಅನುಕೂಲವಾಗಿದ್ದು, ಆ ಮೂಲಕ ಡಾ. ಜಿ ಶಂಕರ್ ಅವರು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ಅಭಿಪ್ರಾಯಪಟ್ಟಿದ್ದಾರೆ. ಚಿಟ್ಪಾಡಿ ಶಾರದಾಂಬ ದೇವಸ್ಥಾನದಲ್ಲಿ ಶುಕ್ರವಾರ ಡಾ. ಜಿ ಶಂಕರ್ ಆರೋಗ್ಯ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. […]