ಆರೋಗ್ಯವೇ ಭಾಗ್ಯ: ನಿಮ್ಮ ಕುಟುಂಬಕ್ಕಾಗಿ ಸರಿಯಾದ ಆರೋಗ್ಯ ವಿಮೆಯನ್ನೇ ಆಯ್ಕೆ ಮಾಡಿಕೊಳ್ಳಿ

ಆರೋಗ್ಯವೇ ಭಾಗ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಆರೋಗ್ಯವನ್ನು ಎಷ್ಟು ಸಾಧ್ಯವೋ ಅಷ್ಟು ಪ್ರಾಕೃತಿಕವಾಗಿ ಕಾಪಾಡಿಕೊಂಡರೆ ಒಳಿತು. ಆದಾಗ್ಯೂ, ಕೆಲವೊಮ್ಮೆ ಕೈಮೀರಿದ ಸಂದರ್ಭಗಳಲ್ಲಿ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಬೇಕಾಗಿ ಚಿಕಿತ್ಸೆ ಪಡೆದುಕೊಂಡಾಗ ಕೈಗೆ ನೀಡಲಾಗುವ ಆಸ್ಪತ್ರೆ ಬಿಲ್ ಗಳನ್ನು ಕಂಡು ಮತ್ತೊಮ್ಮೆ ಆಸ್ಪತ್ರೆ ಸೇರುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಇಂತಹ ಪರಿಸ್ಥಿತಿಗಳನ್ನು ತಪ್ಪಿಸಿಕೊಳ್ಳಲು ಹೆಲ್ತ್ ಇನ್ಶೂರೆನ್ಸ್(ಆರೋಗ್ಯ ವಿಮೆ)ಗಳನ್ನು ಮಾಡಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ತರಹೇವಾರಿ ಆರೋಗ್ಯ ವಿಮೆಗಳಿದ್ದು ಯಾವುದನ್ನು ಆಯ್ಕೆ ಮಾಡಲಿ ಎನ್ನುವ ಗೊಂದಲ ಎಲ್ಲರನ್ನೂ ಕಾಡುತ್ತವೆ. ಕಂಪನಿಗಳು ಕೂಡಾ […]