ಮದುವೆಗೆ ಒಪ್ಪಿದ್ದರೂ ಆತ ಮಗಳಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ: ಪ್ರಿಯಕರನಿಂದ ಹತ್ಯೆಯಾದ ಸೌಮಶ್ರೀ ತಾಯಿಯ ಅಳಲು

ಉಡುಪಿ: ಈಚೆಗೆ ಉಡುಪಿ ಹೊರವಲಯದ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಿಯಕರನೊಬ್ಬ ತನ್ನ ಪ್ರಿಯತಮೆಗೆ ಚೂರಿಯಿಂದ ಇರಿದು ಕೊಲೆಗೈದು ಬಳಿಕ ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡು ಘಟನೆಗೆ ಸಂಬಂಧಿಸಿದಂತೆ ಪ್ರಿಯತಮೆ ಸೌಮ್ಯಶ್ರೀಯ ಮನೆಯವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ಸಂದೇಶ್ ಕುಲಾಲ್ (ಪ್ರಿಯಕರ) ಮತ್ತು ನನ್ನ ಮಗಳು ಪ್ರೀತಿಸುತ್ತಿದ್ದ ವಿಚಾರ ನಮಗೆ ಮೂರು ನಾಲ್ಕು ವರ್ಷಗಳ ಹಿಂದೆ ಗೊತ್ತಾಯಿತು. ಹಾಗಾಗಿ ನನ್ನ ಮಗಳನ್ನು ಮದುವೆ ಆಗುವಂತೆ ಐದಾರು ಬಾರಿ ಅವರ ಮನೆಗೆ ಹೋಗಿ ಕೇಳಿಕೊಂಡಿದ್ದೆವು. ಆದರೆ ಆತ […]