ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ಪ್ರಕರಣ: ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡುವವರೆಗೆ ಸುಮ್ಮನಿರುವುದಿಲ್ಲ ಎಂದ ಯಶ್ ಪಾಲ್ ಸುವರ್ಣ

ಉಡುಪಿ: ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರು ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಮೂಲಕ ಮತ್ತೊಬ್ಬ ವಿದ್ಯಾರ್ಥಿನಿಯನ್ನು ವಿಡೀಯೋ ಚಿತ್ರೀಕರಿಸಿರುವ ಘಟನೆ ಬಗ್ಗೆ ವರದಿಯಾಗಿದ್ದು, ಇದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ವರದಿಗಳ ಪ್ರಕಾರ ಮೂವರು ವಿದ್ಯಾರ್ಥಿನಿಯರು ತಮ್ಮ ಸಹವರ್ತಿ ವಿದ್ಯಾರ್ಥಿನಿಗಳು ಶೌಚಾಲಯಗಳನ್ನು ಬಳಸುವುದನ್ನು ರೆಕಾರ್ಡ್ ಮಾಡಲು ಮಹಿಳಾ ವಾಶ್ ರೂಂಗಳಲ್ಲಿ ವೀಡಿಯೋ ಕ್ಯಾಮೆರಾಗಳನ್ನು ಇರಿಸಿದ್ದರು ಎನ್ನಲಾಗಿದ್ದು ಈ ಸಂಬಂಧ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ಘಟನೆ ಸಂಬಂಧ ಉಡುಪಿ ಎಸ್ಪಿ ಅಕ್ಷಯ್ ಹಾಕೆ ಸ್ಪಷ್ಟನೆ ನೀಡಿದ್ದು, […]

ಸಂಚಾರಿ ಪೋಲೀಸ್ ಮತ್ತು ಚಾಲಕರಿಗೆ ತುರ್ತು ಪರಿಸ್ಥಿತಿ ಪ್ರಥಮ ಪ್ರತಿಕ್ರಿಯೆ ತರಬೇತಿ ಕಾರ್ಯಾಗಾರ

ಮಣಿಪಾಲ: ಉಡುಪಿ ಜಿಲ್ಲಾ ಪೊಲೀಸ್, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ (CCIF) ಮತ್ತು ಕೆಎಂಸಿ ಮಣಿಪಾಲದ ತುರ್ತು ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಟ್ರಾಫಿಕ್ ಪೊಲೀಸ್ ಮತ್ತು ಚಾಲಕರಿಗೆ ಪ್ರಥಮ ಪ್ರತಿಕ್ರಿಯೆ ನೀಡುವುದರ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಮೇ . 30 ರಂದು ಡಾ. ಟಿಎಂಎ ಪೈ ಹಾಲ್ ನಲ್ಲಿ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚಿಂದ್ರ ಭಾಗವಹಿಸಿ ಮಾತನಾಡಿ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ […]

ಕಳ್ಳತನವಾದ ಅಥವಾ ಕಳೆದುಹೋದ ಮೊಬೈಲ್ ಅನ್ನು ಸುಲಭವಾಗಿ ಬ್ಲಾಕ್ ಮಾಡುವ ವಿಧಾನ ತಿಳಿಯಿರಿ

ಅಕಸ್ಮಾತ್ ಆಗಿ ಮೊಬೈಲ್ ಕಳೆದು ಹೋದಲ್ಲಿ ಅಥವಾ ಕಳ್ಳತನವಾದಲ್ಲಿ ಇತರರು ಅದನ್ನು ಬಳಸದಂತೆ ಸುಲಭವಾಗಿ ಅದನ್ನು ಬ್ಲಾಕ್ ಮಾಡಬಹುದು. ಬ್ಲಾಕ್ ಮಾಡುವ ವಿಧಾನ: 1.KSP ಮೊಬೈಲ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ಇ-ಲಾಸ್ಟ್ ದೂರನ್ನು ನೋಂದಾಯಿಸಿ ಮತ್ತು ಇ-ಅಕ್ನಾಲೆಡ್ಜ್‌ಮೆಂಟ್ ಪಡೆಯಿರಿ. 2. ಒಟಿಪಿ ಪಡೆಯಲು ಸಂಬಂಧಿತ ಸೇವಾ ಪೂರೈಕೆದಾರರಿಂದ ನಕಲಿ ಸಿಮ್ ತೆಗೆದುಕೊಳ್ಳಿ ಮತ್ತು ಸಿಮ್ ಅನ್ನು ಸಕ್ರಿಯಗೊಳಿಸಿ. 3.CEIR na https://ceir.gov.in ವೆಬ್‌ಸೈಟ್‌ಗೆ ಲಾಗಿನ್ ಆಗಿ. 4. ಸ್ಟೋಲನ್/ಲಾಸ್ಟ್ ಮೊಬೈಲ್ ಮೇಲೆ ಕ್ಲಿಕ್ ಮಾಡಿ. 5.ಮೊಬೈಲ್ ಸಂಖ್ಯೆ, […]

ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರ ಬಂಧನ; ಮುಖ್ಯ ಆರೋಪಿಗಾಗಿ ಶೋಧ

ಉಡುಪಿ: ಫೆ. 5 ರಂದು ಪಾಂಗಾಳದಲ್ಲಿ ನಡೆದ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ. ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆಬ್ರವರಿ 5 ರಂದು ಮಾರಕ ಶಸ್ತ್ರಾಸ್ತ್ರಗಳನ್ನು ಬಳಸಿ ನಾಲ್ವರು ವ್ಯಕ್ತಿಗಳು ಶರತ್ ಶೆಟ್ಟಿಯನ್ನು ಕೊಲೆ ಮಾಡಿದ್ದರು. ಆದರೆ ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿರಲಿಲ್ಲ. ಆದರೆ ನಮ್ಮ ತಂಡಗಳ ಪರಿಣತಿಯಿಂದ ನಾವು ಈ ಪ್ರಕರಣವನ್ನು ಭೇದಿಸಿದ್ದೇವೆ ಮತ್ತು ನಾಲ್ವರನ್ನು ಬಂಧಿಸಿ, […]

ಜ.16 ರಿಂದ 22 ರವರೆಗೆ ನಾಗರೀಕ ಬಂದೂಕು ತರಬೇತಿ ಕಾರ್ಯಕ್ರಮ: ಆಸಕ್ತರು ಅರ್ಜಿ ಸಲ್ಲಿಸಿ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಾಗರೀಕ ಬಂದೂಕು ತರಬೇತಿ ಕಾರ್ಯಕ್ರಮವನ್ನು ಜ.16 ರಿಂದ 22 ರವರೆಗೆ ಉಡುಪಿ ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿಎಆರ್ ಉಡುಪಿ ಇಲ್ಲಿ ಹಮ್ಮಿಕೊಳ್ಳಲಾಗಿದ್ದು, ಉಡುಪಿ ಜಿಲ್ಲೆಗೆ ಸಂಬಂಧಿಸಿದ ಆಸಕ್ತ ನಾಗರೀಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳು ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮತ್ತು ಡಿಎಆರ್ ಪೊಲೀಸ್ ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಆಸಕ್ತರು ಆಯಾಯ ಕೇಂದ್ರ ಸ್ಥಾನದಿಂದ ಅರ್ಜಿ ಪಡೆದುಕೊಂದು ಭರ್ತಿ ಮಾಡಿ ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ […]