ಜ್ಞಾನವಾಪಿ ದೇಗುಲದ ನೆಲಮಾಳಿಗೆಯಲ್ಲಿ ಪ್ರಾರ್ಥನೆಗೆ ಅಲಹಬಾದ್ ಹೈಕೋರ್ಟ್ ಮೊಹರು: ಮಸೀದಿ ಸಮಿತಿಯ ಅರ್ಜಿ ವಜಾ
ನವದೆಹಲಿ: ಜ್ಞಾನವಾಪಿ ದೇವಾಲಯ ಪ್ರಕರಣ ಸಂಬಂಧ ಹಿಂದೂ ಪಕ್ಷಕ್ಕೆ ಮತ್ತೊಮ್ಮೆ ಗೆಲುವಾಗಿದೆ. ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ತೆಹ್ಖಾನಾ’ (Vyas Tehkhana)ದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಜಾಗೊಳಿಸಿದೆ. ಜ್ಞಾನವಾಪಿ ದೇಗುಲ ಸಂಕೀರ್ಣದಲ್ಲಿರುವ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದ ಜ್ಞಾನವಾಪಿ ಮಸೀದಿ ಸಮಿತಿಯ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ತೀರ್ಪು […]
30 ವರ್ಷಗಳ ಬಳಿಕ ಜ್ಞಾನವಾಪಿ ಮಂದಿರದ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಅರ್ಚಕರು
ವಾರಣಾಸಿ: ಜ್ಞಾನವಾಪಿ ಮಂದಿರದ ನೆಲಮಾಳಿಗೆಯಲ್ಲಿ ಸೀಲ್ ಮಾದುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆದೇಶದ 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಂದೂ ಅರ್ಚಕರು ‘ವ್ಯಾಸರ ನೆಲಮಾಳಿಗೆ’ಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡರು. ಬುಧವಾರದಂದು ಜಿಲ್ಲಾ ನ್ಯಾಯಾಲಯವು ಸೀಲ್ ಮಾಡಲಾದ ಪ್ರದೇಶವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಮತ್ತು ಪೂಜಾ ವಿಧಿ ವಿಧಾನಗಳನ್ನು ಜಿಲ್ಲಾಡಳಿತದ ಸುಪರ್ದಿಯಲ್ಲಿ ನಡೆಸುವಂತೆ ಆದೇಶ ನೀಡಿತ್ತು. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಂದಿರದ ಸಮೀಪವಿರುವ ಪ್ರದೇಶವು ನಿನ್ನೆ […]
ಜ್ಞಾನವಾಪಿ ಮಂದಿರ ಪರಿಸರದಲ್ಲಿ ಹಿಂದೂ ಪಕ್ಷಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿಯ ಜಿಲ್ಲಾ ನ್ಯಾಯಾಲಯ
ವಾರಣಾಸಿ: ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರದಂದು ಹಿಂದೂ ಪಕ್ಷದವರಿಗೆ ಜ್ಞಾನವಾಪಿ ಮಂದಿರದ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದೆ. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿ ಮತ್ತು ಹಿಂದೂ ಕಡೆಯಿಂದ ಪೂಜೆಯನ್ನು ಮಾಡಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. “ಏಳು ದಿನದೊಳಗೆ ಪೂಜೆ ಆರಂಭವಾಗಲಿದೆ. ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ” ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಪೂಜೆಯ ವಿಧಿ ವಿಧಾನಗಳನ್ನು […]