ಮಹಿಳೆಯರಿಗಾಗಿ ಪಚ್ಚಿಲೆ ಕೃಷಿ ಮಾಹಿತಿ ಕಾರ್ಯಕ್ರಮ
ಉಡುಪಿ: ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಅಡಿಯಲ್ಲಿ ರಚಿತವಾದ ಉಡುಪಿ ಕಿನಾರ ಮೀನುಗಾರಿಕಾ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ವತಿಯಿಂದ ಕೋಡಿಗ್ರಾಮದ ಮಹಿಳೆಯರಿಗೆ ಹಾಗೂ ಷೇರುದಾರರಿಗೆ ಪಚ್ಚಿಲೆ ಕೃಷಿ ಬಗ್ಗೆಉಡುಪಿ ಕಿನಾರ ರೈತ ಉತ್ಪಾದಕ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಸುಧೀನ್ ಕೋಡಿ ಅವರು ಮಾಹಿತಿ ಕಾರ್ಯಾಗಾರವನ್ನು ನಡೆಸಿದರು. ಸಮುದ್ರದಲ್ಲಿರುವ ಕಲ್ಲಿನಲ್ಲಿ ಪಚ್ಚಿಲೆಗಳು ಅಂಟಿಕೊಂಡು ಬೆಳೆಯುತ್ತದೆ. ನೀರಿನ ಮಟ್ಟ ಕಡಿಮೆ ಇರುವ ಸಮಯದಲ್ಲಿ ಮರಿಗಳು ಸಿಗುತ್ತವೆ. ಆ ಮರಿಗಳನ್ನು ತಂದು ಬಿಡಿ ಬಿಡಿಯಾಗಿತೆಗೆದು […]