ಮಹಿಳೆಯರಿಗಾಗಿ ಪಚ್ಚಿಲೆ ಕೃಷಿ ಮಾಹಿತಿ ಕಾರ್ಯಕ್ರಮ

ಉಡುಪಿ: ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಅಡಿಯಲ್ಲಿ ರಚಿತವಾದ ಉಡುಪಿ ಕಿನಾರ ಮೀನುಗಾರಿಕಾ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ವತಿಯಿಂದ ಕೋಡಿಗ್ರಾಮದ ಮಹಿಳೆಯರಿಗೆ ಹಾಗೂ ಷೇರುದಾರರಿಗೆ ಪಚ್ಚಿಲೆ ಕೃಷಿ ಬಗ್ಗೆಉಡುಪಿ ಕಿನಾರ ರೈತ ಉತ್ಪಾದಕ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಸುಧೀನ್‌ ಕೋಡಿ ಅವರು ಮಾಹಿತಿ ಕಾರ್ಯಾಗಾರವನ್ನು ನಡೆಸಿದರು.

ಸಮುದ್ರದಲ್ಲಿರುವ ಕಲ್ಲಿನಲ್ಲಿ ಪಚ್ಚಿಲೆಗಳು ಅಂಟಿಕೊಂಡು ಬೆಳೆಯುತ್ತದೆ. ನೀರಿನ ಮಟ್ಟ ಕಡಿಮೆ ಇರುವ ಸಮಯದಲ್ಲಿ ಮರಿಗಳು ಸಿಗುತ್ತವೆ. ಆ ಮರಿಗಳನ್ನು ತಂದು ಬಿಡಿ ಬಿಡಿಯಾಗಿತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಇಟ್ಟುಕೊಂಡು ರೋಪ್ ಗೆ ಹಾಕಿ ಬಟ್ಟೆಯಿಂದ ಕಟ್ಟಿ ಉಪ್ಪು ನೀರಿನ ಹೊಳೆಯಲ್ಲಿ ಹಾಕಿರುವ ಚಪ್ಪರದಲ್ಲಿ ನೆಲಕ್ಕೆ ತಾಗದಂತೆ ನೇತು ಹಾಕಬೇಕು. ಮೂರು ದಿನದಲ್ಲಿ ರೋಪಿಗೆ ಹಾಕಿರುವ ಮರಿ ರೋಪಿಗೆ ಅಂಟಿಕೊಂಡು ಆ ಬಟ್ಟೆ ಕರಗಿ ರೋಪಿಗೆ ಗಟ್ಟಿಮಾಡಿ ಕಚ್ಚಿಕೊಂಡು ಬೆಳೆಯುತ್ತದೆ. ಹೊಳೆಯಲ್ಲಿ ಏರಿಳಿತಕ್ಕೆ ಬರುವ ಆಹಾರ ಪದಾರ್ಥಗಳನ್ನು ತಿಂದು ಬೆಳೆಯುತ್ತದೆ. 3-4 ತಿಂಗಳಿಗೆ ಸರಿಸುಮಾರು 4 ಇಂಚಿನ ತನಕ ಬೆಳೆಯುತ್ತದೆ. ಸ್ವಲ್ಪ ದಿನ ಬಿಟ್ಟರೆ ಇನ್ನೂ ಬೆಳೆಯುತ್ತದೆ. ಇದಕ್ಕೆ ಗೋವಾ,ಕೇರಳ,ಮುಂಬೈನಲ್ಲಿ ಭಾರೀ ಬೇಡಿಕೆ ಇರುತ್ತದೆ. ಕೆ.ಜಿಗೆ 400 ರಿಂದ 500 ರೂಪಾಯಿಗಳವರೆಗೂ ಆದಾಯ ಬರುತ್ತದೆ.

ಕಾರ್ಯಾಗಾರದಲ್ಲಿ ಕೃಷಿಯಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿವಿಧ ವಿಧಾನಗಳ ಮೂಲಕ ಕೃಷಿಯನ್ನುಅಭಿವೃದ್ಧಿ ಪಡಿಸುವುದರ ಬಗ್ಗೆ ಮಾಹಿತಿ ನೀಡಿಲಾಯಿತು. ಕಾರ್ಯಕ್ರಮವು ಅನೇಕ ಮಹಿಳೆಯರಿಗೆ ಸ್ವಉದ್ಯಮಕ್ಕೆ ಪ್ರೇರಣೆಯನ್ನು ನೀಡಿತು.