ಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಅತ್ಯಂತ ದುಬಾರಿ ಗೋಳಿ ಮೀನು 2 ಲಕ್ಷ ರೂ ಗೆ ಮಾರಾಟ

ಮಲ್ಪೆ: ಇಲ್ಲಿನ ಬಂದರಿನ ಮೀನುಗಾರರ ಬಲೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಗೋಳಿ ಮೀನು ಬಿದ್ದಿದೆ. ಈ ಮೀನು 22 ಕೆಜಿ ತೂಕವಿದ್ದು, ಬರೋಬ್ಬರಿ 2,34,080 ರೂಪಾಯಿಗಳಿಗೆ ಮಾರಾಟವಾಗಿದೆ. ಈ ಹಿಂದೆ ಶಾನ್ ರಾಜ್ ತೊಟ್ಟಂ ಎಂಬವರಿಗೆ 20 ಕೆಜಿ ತೂಕದ ಗೋಳಿ ಮೀನು ಸಿಕ್ಕಿ,ಇದು 1.90 ಲಕ್ಷ ರೂಪಾಯಿಗೆ ಮಾರಾಟವಾಗಿ ಸುದ್ದಿಯಾಗಿತ್ತು. ‘ಸಾಗರದ ಚಿನ್ನ’ ಎಂದುಕರೆಯಲ್ಪಡುವ ಘೋಲ್ ಮೀನು ಸ್ಥಳೀಯ ಭಾಷೆಯಲ್ಲಿ ಗೋಳಿ ಮೀನು ಎಂದು ಚಿರಪರಿಚಿತವಾಗಿದ್ದು, ಭಾರತದ ಅತ್ಯಂತ ದುಬಾರಿ ಮೀನುಗಳಲ್ಲಿ ಒಂದಾಗಿದೆ. ಈ […]