ಅಪ್ಪ ಮಗನ ಅಪೂರ್ವ ಸಂಗಮದ ಪೋಸ್ಟರ್; ಚಿತ್ರ ಕ್ಕೆ ತೆರಿಗೆ ವಿನಾಯಿತಿ; ಗಂಧದಗುಡಿ ಎಲ್ಲಾ ದಾಖಲೆಗಳನ್ನೂ ಪುಡಿಗಟ್ಟಲಿ ಎಂದ ಯಶ್

ಬೆಂಗಳೂರು: ಸಸ್ಯ ಮತ್ತು ಪ್ರಾಣಿಗಳ ರಕ್ಷಣೆ ಮತ್ತು ಸಂರಕ್ಷಣೆಯನ್ನು ಆಧರಿಸಿದ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಕನ್ನಡ ಸಾಕ್ಷ್ಯಚಿತ್ರ ‘ಗಂಧದ ಗುಡಿ’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇದು ಅಪ್ಪು ನಟನೆಯ ಕೊನೆಯ ಚಿತ್ರವಾಗಿದೆ. ಈ ಮಧ್ಯೆ ಅಪ್ಪು ಮತ್ತು ವರನಟ ಡಾ. ರಾಜ್ ಕುಮಾರ್ ಅವರ ಚಿತ್ರಗಳನ್ನೊಳಗೊಂಡ ಪೋಸ್ಟರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಪ್ಪ-ಮಗ ಇಬ್ಬರೂ ಗಂಧದಗುಡಿ ಎನ್ನುವ ಹೆಸರಿನ ಚಿತ್ರದಲ್ಲಿ ನಟಿಸಿದ್ದು, ದುರಾದೃಷ್ಟವಶಾತ್ ಈ […]

ಪುನೀತ್ ರಾಜ್ ಕುಮಾರ್ ನೆನಪಿಗಾಗಿ ಅರಮನೆ ಮೈದಾನದಲ್ಲಿ ಪುನೀತ ಪರ್ವ: ಭಾರತೀಯ ಚಿತ್ರರಂಗದ ದಿಗ್ಗಜರು ಭಾಗವಹಿಸುವ ನಿರೀಕ್ಷೆ

ಅಪ್ಪು ಕಣ್ಮರೆಯಾಗಿ ಒಂದು ವರ್ಷವಾಗುತ್ತಾ ಬಂದಿದ್ದು, ಅವರ ಪುಣ್ಯ ಸ್ಮರಣೆಯ ಒಂದು ದಿನಕ್ಕೂ ಮುನ್ನ ಅಕ್ಟೋಬರ್‌ 28ರಂದು ‘ಗಂಧದ ಗುಡಿ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ. ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನೈಜ ಜೀವನದ ಪುನೀತ್ ರಾಜ್‍ಕುಮಾರ್ ಆಗಿ ಅಪ್ಪು ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ  ಅರಮನೆ ಮೈದಾನದಲ್ಲಿ ಅಕ್ಟೋಬರ್ 21ರ ಶುಕ್ರವಾರ ಚಿತ್ರದ ಬಿಡುಗಡೆ ಪೂರ್ವ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮಕ್ಕೆ ‘ಪುನೀತ ಪರ್ವ’ ಎಂದು ಹೆಸರಿಡಲಾಗಿದೆ. ಈ ಪುನೀತ ಪರ್ವ ಕಾರ್ಯಕ್ರಮಕ್ಕೆ […]

ಅಪ್ಪು ಗಂಧದಗುಡಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ

ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. ‘ಗಂಧದ ಗುಡಿ’ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಗಂಧದ ಗುಡಿ ಚಿತ್ರ ಬಿಡುಗಡೆ ಬಗ್ಗೆ ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟಿಸಿದ್ದರು. ನಮಸ್ತೆ ನರೇಂದ್ರ ಮೋದಿ ಅವರೇ, ಅಪ್ಪು ಅವರ […]

ಅಕ್ಟೋಬರ್ 28 ರಂದು ತೆರೆಗಪ್ಪಳಿಸಲಿದೆ ಗಂಧದ ಗುಡಿ: ಇದು ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ ಕೊನೆ ಚಿತ್ರ

ನಟ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಅಮೋಘವರ್ಷ ನಿರ್ದೇಶನದ ಸಾಕ್ಷ್ಯಚಿತ್ರ ಅಕ್ಟೋಬರ್ 28 ರಂದು ತೆರೆ ಮೇಲೆ ಬರಲಿದೆ. ಬಿಡುಗಡೆ ದಿನಾಂಕದ ಅಧಿಕೃತ ಪ್ರಕಟಣೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ. “ತನ್ನ ಮೇಲೆ ಅಪಾರ ಪ್ರೀತಿಯನ್ನು ಧಾರೆಯೆರೆದ ಭೂಮಿಗೆ ಗೌರವವಾಗಿ ಕರ್ನಾಟಕದ ಕಾಡುಗಳನ್ನು ಪುನೀತ್ ಆಗಿಯೇ ಅನ್ವೇಷಿಸುತ್ತಾರೆ. ಈ ಚಿತ್ರದಲ್ಲಿ ಚಿತ್ರಕಥೆಯಿಲ್ಲದ ನೈಜ ಪುನೀತ್ ಅವರನ್ನು ಅಭಿಮಾನಿಗಳು ಕಾಣಬಹುದು” ಎಂದು ಅಶ್ವಿನಿ ಹೇಳಿದ್ದಾರೆ. […]