ಮೀರಾ ಡಹಾಣೂ ಬಂಟ್ಸ್ ವಾರ್ಷಿಕ ಟರ್ಫ್ ಫುಟ್ ಬಾಲ್ ಪಂದ್ಯಾವಳಿ

ಬೊಯಿಸರ್: ಸ್ಪರ್ಧೆಗಳು ನಮ್ಮಲ್ಲಿನ ಕ್ರೀಡಾಮನೋಭಾವವನ್ನು ಹುರಿದುಂಬಿಸುತ್ತವೆ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಇಂತಹ ಕ್ರೀಡೆಗಳಲ್ಲಿ ಸ್ಪರ್ಧಿಸುವಲ್ಲಿನ ಹುಮ್ಮಸ್ಸು ನಮ್ಮಲ್ಲಿನ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ಹೆಚ್ಚಿಸುತ್ತದೆ ಎಂದು ಮೀರಾ ಡಹಾಣೂ ಬಂಟ್ಸ್ ನ ಟ್ರಸ್ಟೀ ಹಾಗೂ ಮಾಜಿ ಅಧ್ಯಕ್ಷ ಕೆ. ಭುಜಂಗ ಶೆಟ್ಟಿ ಹೇಳಿದರು. ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲಾ ಬೊಯಿಸರ್ ಪೂರ್ವದಲ್ಲಿನ ಸ್ಕೋರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ರವಿವಾರ ಜರಗಿದ ಮೀರಾ ಡಹಾಣೂ ಬಂಟ್ಸ್ (ರಿ) ವಾರ್ಷಿಕ ಟರ್ಫ್ ಫುಟ್ ಬಾಲ್ ಟೂರ್ನಮೆಂಟ್ ಉದ್ಘಾಟನೆಯ ಸಮಾರಂಭದಲ್ಲಿ […]

ಬಾರದ ಲೋಕಕ್ಕೆ ಪಯಣಿಸಿದ ಫುಟ್ಬಾಲ್ ದಂತಕಥೆ ಪೀಲೆ: ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ಫುಟ್ಬಾಲ್ ಪಟು

ಫುಟ್ಬಾಲ್ ದಂತಕಥೆ, ಬ್ರೆಜಿಲ್‌ನ ಸಾರ್ವಕಾಲಿಕ ಪ್ರಮುಖ ಸ್ಕೋರರ್ ಪೀಲೆ 92 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಆಟವನ್ನು ಆಡಿದ ಸರ್ವಶ್ರೇಷ್ಠ ಆಟಗಾರ ತಮ್ಮ 82 ನೇ ವಯಸ್ಸಿನಲ್ಲಿ ಬಾರದ ಲೋಕದತ್ತ ಪಯಣಿಸಿದ್ದಾರೆ. ಅಪ್ರತಿಮ, ಪ್ರತಿಭೆ, ಚುರುಕುತನ ಮತ್ತು ಸೃಜನಶೀಲತೆಯಿಂದ ತುಂಬಿದ ಸುಂದರವಾದ ಆಟದಿಂದ ಮೂರು-ಬಾರಿ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿರುವ ಪೀಲೆ ಅಕ್ಟೋಬರ್ 23, 1940 ರಂದು, ದಕ್ಷಿಣ ಬ್ರೆಜಿಲ್‌ನ ಟ್ರೆಸ್ ಕೊರಾಕೋಸ್‌ನಲ್ಲಿ ಬಡಕುಟುಂಬದಲ್ಲಿ ಜನಿಸಿದರು. ಪೀಲೆ ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ಆಟಗಾರನಾಗಿ ಉಳಿದಿದ್ದಾರೆ. […]

ರೊನಾಲ್ಡೊ, ಮೆಸ್ಸಿ ಪಕ್ಕದಲ್ಲಿ ಭಾರತದ ಸುನಿಲ್ ಛೇತ್ರಿ: ಅಂತಾರಾಷ್ಟ್ರೀಯ ಗೋಲ್ ಗಳಿಕೆಯಲ್ಲಿ ಮೂರನೆ ಸ್ಥಾನ ಪಡೆದ ನಾಯಕ

ರತೀಯರೆಲ್ಲರೂ ಹೆಮ್ಮೆ ಪಡುವ ಕ್ಷಣವೊಂದು ಫುಟ್ ಬಾಲ್ ಕ್ರೀಡೆಯಿಂದ ಒದಗಿ ಬಂದಿದೆ. ಫುಟ್ ಬಾಲ್ ನ ದಂತ ಕಥೆಗಳೆಂದೆ ಪರಿಗಣಿತರಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಪಕ್ಕದಲ್ಲಿ ಭಾರತದ ಆಟಗಾರ ಸುನಿಲ್ ಛೇತ್ರಿ ಇರುವ ಫೋಟೋವೊಂದನ್ನು ಫಿಫಾ(FIFA) ಹಂಚಿಕೊಂಡಿರುವುದೆ ಈ ಖುಷಿಗೆ ಕಾರಣ. ಸಕ್ರಿಯ ಅಂತಾರಾಷ್ಟ್ರೀಯ ಗೋಲ್‌ ಗಳಿಕೆಯ ಪಟ್ಟಿಯಲ್ಲಿ ರೊನಾಲ್ಡೊ ಮತ್ತು ಮೆಸ್ಸಿ ಬಳಿಕದ ಮೂರನೇ ಸ್ಥಾನ ಭಾರತದ ಆಟಗಾರ ಛೇತ್ರಿ ಪಾಲಾಗಿದೆ. ವಿಶ್ವದ ಟಾಪ್ ಮೂರು ಗೋಲ್ ಗಳಿಕೆದಾರರಲ್ಲಿ ಒಬ್ಬರು ಭಾರತೀಯರಾಗಿರುವುದು ಸಮಸ್ತ […]