ಆ.5 ರೊಳಗೆ ನೈಜ ಆರೋಪಿಗಳನ್ನು ಪತ್ತೆ ಹಚ್ಚದಿದ್ದಲ್ಲಿ ಮಂಗಳೂರಿನಲ್ಲಿ ಧರಣಿ ಕೂರುವ ಎಚ್ಚರಿಕೆ ನೀಡಿದ ಕುಮಾರಸ್ವಾಮಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಹತ್ಯೆ ಪ್ರಕರಣಗಳ ನೈಜ ಆರೋಪಿಗಳನ್ನು ಆ.5 ರೊಳಗೆ ಪತ್ತೆಹಚ್ಚಿ ಬಂಧಿಸಬೇಕು. ಆರೋಪಿಗಳ ಪತ್ತೆಯಲ್ಲಿ ಸರಕಾರ ಯಶಸ್ವಿಯಾಗದಿದ್ದಲ್ಲಿ ಆ.6 ರಿಂದ ಮಂಗಳೂರಿನಲ್ಲಿ ಧರಣಿ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಹತ್ಯೆಯಾದ ಮಸೂದ್, ಪ್ರವೀಣ್ ನೆಟ್ಟಾರು, ಸುರತ್ಕಲ್‌ನ ಫಾಝಿಲ್ ಮನೆಗೆ ಸೋಮವಾರ ಭೇಟಿ ನೀಡಿದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಸಹಿತ ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ […]
ಮಂಗಳೂರು: ಆಗಸ್ಟ್ 5ರವರೆಗೆ ನಿಷೇಧಾಜ್ಞೆ ಮುಂದುವರಿಕೆ
ಮಂಗಳೂರು: ದ.ಕ ವ್ಯಾಪ್ತಿಯಲ್ಲಿ ಬೆನ್ನು ಬೆನ್ನಿಗೆ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ, ಕರಾವಳಿ ಜಿಲ್ಲೆಯು ಕುದಿಯುವ ಬಾಣಲೆಯಂತಾಗಿದ್ದು, ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಮಂಗಳೂರು ನಗರ ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಆಗಸ್ಟ್ 1 ರವರೆಗಿದ್ದ ನಿಷೇಧಾಜ್ಞೆಯನ್ನು ಆಗಸ್ಟ್ 5ರ ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ. ನಿಷೇಧಾಜ್ಞೆ ಸಂದರ್ಭದಲ್ಲಿ ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವಂತಿಲ್ಲ. ಚೇಷ್ಟೆ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವ ಕ್ರಿಯೆಯನ್ನು ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ. ನಿಷೇಧಿತ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ […]
ಫಾಸಿಲ್ ನ ಹತ್ಯೆಗೆ ಬಳಸಲಾಗಿದ್ದ ಕಾರಿನೊಳಗೆ ಸಿಮ್ ಕಾರ್ಡ್, ರಕ್ತದ ಕಲೆಗಳು: ಹೆಚ್ಚಿನ ತನಿಖೆಗಾಗಿ ಆಗಮಿಸಲಿರುವ ವಿಧಿವಿಜ್ಞಾನ ತಂಡ
ಪಡುಬಿದ್ರೆ: ಸುರತ್ಕಲ್ ನ ಯುವಕ ಫಾಸಿಲ್ ನ ಹತ್ಯೆಗೆ ಬಳಸಲಾಗಿದ್ದ ಇಯಾನ್ ಕಾರು ಪಡುಬಿದ್ರೆ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ಕಾಜರಕಟ್ಟೆ ಅಶ್ವಥ ಕಟ್ಟೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಕಾರೊಳಗೆ ಮೈಕ್ರೋ ಸಿಮ್, ಹಿಂಬದಿಯ ಸೀಟಿನಲ್ಲಿ ರಕ್ತದ ಕಲೆಗಳು, ನೀರಿನ ಬಾಟಲಿ ಮತ್ತು ಸ್ವಲ್ಪ ಹಣ ಪತ್ತೆಯಾಗಿದೆ ಎಂದು ಹೊಸದಿಗಂತ ವರದಿ ಮಾಡಿದೆ. ಪಡುಬಿದ್ರೆ ಪೋಲಿಸರು ಕಾರಿಗೆ ಹೊದಿಕೆ ಮುಚ್ಚಿದ್ದು, ಹೆಚ್ಚಿನ ತನಿಖೆಗಾಗಿ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ತಂಡವನ್ನು ಕಾಯಲಾಗುತ್ತಿದೆ.
ಫಾಜಿಲ್ ಹತ್ಯೆಗೆ ಬಳಸಿದ ಕಾರು ಪಡುಬಿದ್ರೆಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆ
ಪಡುಬಿದ್ರೆ: ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆಗೆ ಬಳಸಿದ ಬಿಳಿ ಬಣ್ಣದ ಇಯಾನ್ ಕಾರು ಪಡುಬಿದ್ರೆಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ ಸ್ಥಳೀಯರು ಉಡುಪಿ ಜಿಲ್ಲಾ ಪೋಲಿಸರಿಗೆ ಅಪರಿಚಿತ ಕಾರು ಇರುವ ಬಗ್ಗೆ ಮಾಹಿತಿ ನೀಡಿದ್ದು, ಪೋಲಿಸರು ಸ್ಥಳಕ್ಕೆ ತೆರಳಿ ಕಾರನ್ನು ಗಮನಿಸಿದಾಗ ಫಾಜಿಲ್ ಹತ್ಯೆಗೆ ಬಳಸಿದ ಕಾರು ಎಂದು ತಿಳಿದು ಬಂದಿದೆ. ಆರೋಪಿಗಳು ಕಾರನ್ನು ಸುರತ್ಕಲ್ ನಿಂದ ಪಡುಬಿದ್ರೆಯ ಇನ್ನಾಕ್ಕೆ ಚಲಾಯಿಸಿಕೊಂಡು ಬಂದು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು […]