ಜ.2 ರಂದು ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಉಚಿತ ತಪಾಸಣೆ

ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಶಾಲಾಕ್ಯತಂತ್ರ ವಿಬಾಗದ ವತಿಯಿಂದ ಕಣ್ಣಿನ ಪೊರೆಯ ಉಚಿತ ತಪಾಸಣಾ ಶಿಬಿರವನ್ನು ಜನವರಿ 2 ರಂದು ಬೆಳಿಗ್ಗೆ 9 ರಿಂದ 5 ರ ವರೆಗೆ ಶಾಲಾಕ್ಯತಂತ್ರ ಹೊರರೋಗಿ ವಿಭಾಗ ಸಂಖ್ಯೆ ೧೦ ರಲ್ಲಿ ನಡೆಸಲಾಗುವುದು. ಪ್ರತಿ ತಿಂಗಳ ಮೊದಲನೆ ಸೋಮವಾರ ಉಚಿತವಾಗಿ ಕಣ್ಣಿನ ಪೊರೆಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತದೆ. ರಿಯಾಯತಿ ದರದಲ್ಲಿ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸಾ ಸೌಲಭ್ಯವೂ ಇದೆ. ಹೆಚ್ಚಿನ ಮಾಹಿತಿಗಾಗಿ 0820 2520623 ಅಥವಾ ಇ-ಮೇಲ್ […]

ಕಳತ್ತೂರು: ಉಚಿತ ನೇತ್ರ ತಪಾಸಣಾ ಮತ್ತು ಪೊರೆ ಚಿಕಿತ್ಸೆ ಶಿಬಿರ ಸಂಪನ್ನ

ಕಳತ್ತೂರು: ಕುಶಲ ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಕಳತ್ತೂರು ಶೇಖರ ಬಿ. ಶೆಟ್ಟಿ ನೇತೃತ್ವದಲ್ಲಿ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಆದಿತ್ಯವಾರ ಕಳತ್ತೂರಿನ ಕುಶಲ ಶೇಖರ ಶೆಟ್ಟಿ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪ್ರಸಾದ ನೇತ್ರಾಲಯ […]