ಜ.2 ರಂದು ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಉಚಿತ ತಪಾಸಣೆ

ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಶಾಲಾಕ್ಯತಂತ್ರ ವಿಬಾಗದ ವತಿಯಿಂದ ಕಣ್ಣಿನ ಪೊರೆಯ ಉಚಿತ ತಪಾಸಣಾ ಶಿಬಿರವನ್ನು ಜನವರಿ 2 ರಂದು ಬೆಳಿಗ್ಗೆ 9 ರಿಂದ 5 ರ ವರೆಗೆ ಶಾಲಾಕ್ಯತಂತ್ರ ಹೊರರೋಗಿ ವಿಭಾಗ ಸಂಖ್ಯೆ ೧೦ ರಲ್ಲಿ ನಡೆಸಲಾಗುವುದು.

ಪ್ರತಿ ತಿಂಗಳ ಮೊದಲನೆ ಸೋಮವಾರ ಉಚಿತವಾಗಿ ಕಣ್ಣಿನ ಪೊರೆಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತದೆ. ರಿಯಾಯತಿ ದರದಲ್ಲಿ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸಾ ಸೌಲಭ್ಯವೂ ಇದೆ.

ಹೆಚ್ಚಿನ ಮಾಹಿತಿಗಾಗಿ 0820 2520623 ಅಥವಾ ಇ-ಮೇಲ್ sdmahu@gmail.com/infosdmahu@gmail.com ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.