ವಿಶ್ವ ಆಹಾರ ದಿನದ ಅಂಗವಾಗಿ ಎಕ್ಸ್ ಪರ್ಟ್ ಕಾಲೇಜಿನಲ್ಲಿ ಮಾಸ್ಟರ್ ಶೆಫ್ಸ್ ಸ್ಪರ್ಧೆ
ಮಂಗಳೂರು: ಜೀವನದಲ್ಲಿ ಸಾಧನೆಯ ಸಾಧ್ಯತೆಗೆ ಅಡುಗೆ ಕೌಶಲವೂ ಪ್ರೇರಣಾದಾಯಕವಾಗಿದೆ. ಸಾಹಿತ್ಯ, ಸಂಗೀತ ಮೊದಲಾದ ಕಲೆಗಳು ಕೆಲವರನ್ನು ಮಾತ್ರ ಸೆಳೆಯಬಹುದು. ಆದರೆ ಉತ್ತಮ ಆಹಾರವನ್ನು ಎಲ್ಲರೂ ಮೆಚ್ಚುತ್ತಾರೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅವರು ಅಭಿಪ್ರಾಯಪಟ್ಟರು. ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜು ಮತ್ತು ಸ್ಪೈಸಸ್ ಎನ್ ಶೆಫ್ಸ್ ಇದರ ಜಂಟಿ ಸಹಯೋಗದಲ್ಲಿ ವಿಶ್ವ ಆಹಾರ ದಿನದ ಅಂಗವಾಗಿ ಆಯೋಜಿಸಿದ ಎಕ್ಸ್‌ಪರ್ಟ್ ಮಾಸ್ಟರ್ ಶೆಫ್ಸ್ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಸರ್ವಾಂಗೀಣ ಹಿತದೃಷ್ಟಿಯಿಂದ […]
ಎನ್‌ಡಿಎ ಪ್ರವೇಶ ಪರೀಕ್ಷೆಯಲ್ಲಿ ಎಕ್ಸ್ ಪರ್ಟ್ ಕಾಲೇಜು ವಿದ್ಯಾರ್ಥಿಗಳು ತೇರ್ಗಡೆ
ಮಂಗಳೂರು: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅರ್ಹತೆ ಪಡೆದು ಮುಂದಿನ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರಿನ ಅರ್ಜುನ್ ಕಿಶೋರ್ ಮತ್ತು ಬೆಂಗಳೂರಿನ ಸವ್ಯಸಾಚಿ ಎಸ್. ಆಯ್ಕೆಯಾಗಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 2023ರ ಸೆಪ್ಟೆಂಬರ್ 3 ರಂದು ಪರೀಕ್ಷೆ ನಡೆಸಿತ್ತು.
ಮಂಗಳೂರು: ಎಕ್ಸ್ ಪರ್ಟ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು: 77 ನೇ ವರ್ಷದ ಸ್ವಾತಂತ್ರ್ಯೋತ್ಸವದ ವೈಭವದ ವಿಜಯೋತ್ಸವವನ್ನು ಗುರುತಿಸಲು ಸ್ವಾತಂತ್ರ್ಯ ದಿನಾಚರಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಅಮೇರಿಕಾದ ಅಡೋಬಿಯ ಪ್ರಿನ್ಸಿಪಾಲ್ ಪ್ರೋಗ್ರಾಮ್ ಮ್ಯಾನೇಜರ್ ಆಗಿರುವ ಆಶಾ ಕಾಮತ್ ಅಭಿಪ್ರಾಯಪಟ್ಟರು. ಮಂಗಳೂರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಶ್ರೀ ಭಗವತಿ ದೇವಸ್ಥಾನದ ಆವರಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ಗುಲಾಮಗಿರಿಯ ಸಂಕೋಲೆಯನ್ನು ಮುರಿಯಲು ನಮಗೆ ನೂರಾರು ವರ್ಷಗಳು ಸಂದವು. ನಾವೆಲ್ಲರೂ ಪ್ರಜಾಪ್ರಭುತ್ವವನ್ನು ಆ ಮೂಲಕ ಎತ್ತಿಹಿಡಿಯಬೇಕಾಗಿದೆ. […]
ಮಂಗಳೂರು: ಎಕ್ಸ್ ಪರ್ಟ್ ಕಾಲೇಜಿನ 99 ಶೇ. ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
ಮಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ವಳಚ್ಚಿಲ್ ಹಾಗೂ ಕೊಡಿಯಾಲ್‌ಬೈಲ್‌ನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಶೇ. 99.52 ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಅಭೂತ ಪೂರ್ವ ಸಾಧನೆ ಮಾಡಿದ್ದಾರೆ. 590 ಕ್ಕಿಂತ ಅಧಿಕ ಅಂಕವನ್ನು 6 ವಿದ್ಯಾರ್ಥಿಗಳು, 580 ಕ್ಕಿಂತ ಅಧಿಕ ಅಂಕವನ್ನು 62, ಶೇ. 95 ಕ್ಕಿಂತ ಅಧಿಕ ಅಂಕವನ್ನು 231, ಶೇ.90 ಕ್ಕಿಂತ ಅಧಿಕ ಅಂಕವನ್ನು 759, ಶೇ.85 ಕ್ಕಿಂತ […]
ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಮಂಗಳೂರು: ಕನ್ನಡ ಎಂಬುದು ಕೇವಲ ಆಡು ಭಾಷೆ ಮಾತ್ರವಲ್ಲ, ಭಾರತದಂತಹ ದೇಶದಲ್ಲಿ ಕನ್ನಡವು ಸಂಸ್ಕೃತಿಯ ಪ್ರತಿರೂಪ. ಇಂಗ್ಲೀಷ್ ನಮಗೆ ಅವಕಾಶದ ಭಾಷೆ. ಆದರೆ ಕನ್ನಡ ಹಾಗಲ್ಲ. ಕನ್ನಡ ನಾಡು -ನುಡಿ-ಸಂಸ್ಕೃತಿಯು ವೈವಿಧ್ಯತೆಯಿಂದ ಕೂಡಿದ್ದು, ವೈವಿಧ್ಯತೆ ಈ ಸಂಸ್ಕೃತಿಯ ಉಸಿರು. ಇಂತಹ ನಾಡಿನಲ್ಲಿ ಜನಿಸಿದ ನಾವೇ ಧನ್ಯರು ಎಂದು ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರಭಟ್ ಹೇಳಿದರು. ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಯ ಬೇರು […]