ಮಂಗಳೂರು: ಎಕ್ಸ್ ಪರ್ಟ್ ಕಾಲೇಜಿನ 99 ಶೇ. ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಮಂಗಳೂರು: ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ವಳಚ್ಚಿಲ್ ಹಾಗೂ ಕೊಡಿಯಾಲ್‌ಬೈಲ್‌ನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಶೇ. 99.52 ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಅಭೂತ ಪೂರ್ವ ಸಾಧನೆ ಮಾಡಿದ್ದಾರೆ.

590 ಕ್ಕಿಂತ ಅಧಿಕ ಅಂಕವನ್ನು 6 ವಿದ್ಯಾರ್ಥಿಗಳು, 580 ಕ್ಕಿಂತ ಅಧಿಕ ಅಂಕವನ್ನು 62, ಶೇ. 95 ಕ್ಕಿಂತ ಅಧಿಕ ಅಂಕವನ್ನು 231, ಶೇ.90 ಕ್ಕಿಂತ ಅಧಿಕ ಅಂಕವನ್ನು 759, ಶೇ.85 ಕ್ಕಿಂತ ಅಧಿಕ ಅಂಕವನ್ನು 1113 ಹಾಗೂ ಶೇ.80 ಕ್ಕಿಂತ ಅಧಿಕ ಅಂಕವನ್ನು 1286 ವಿದ್ಯಾರ್ಥಿಗಳು ಪಡೆದಿದ್ದಾರೆ.
4 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, 9 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 28 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ಹಾಗೂ 97 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಇನ್ನು ಫಿಸಿಕ್ಸ್ನಲ್ಲಿ 67 ವಿದ್ಯಾರ್ಥಿಗಳು, ಕೆಮೆಸ್ಟ್ರಿಯಲ್ಲಿ 8, ಬಯೋಲಾಜಿಯಲ್ಲಿ 75, ಮ್ಯಾಥಮೆಟಿಕ್ಸ್ನಲ್ಲಿ 92, ಸ್ಟಾಟಿಸ್ಟಿಕ್ಸ್ನಲ್ಲಿ 5, ಕಂಪ್ಯೂಟರ್ ಸೈನ್ಸ್ನಲ್ಲಿ 21, ಇಲೆಕ್ಟ್ರಾನಿಕ್ಸ್ನಲ್ಲಿ 1, ಸಂಸ್ಕೃತದಲ್ಲಿ 23 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.

593 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿರುವ ಮನಸ್ವಿ ಹೆಗಡೆ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದರೆ,ತನ್ವಿ ಅನಿಲ್ ಗಿರಿರಡ್ಡರ್, ಅನಿಕಾ ಪಿ. 591 ಅಂಕ,ಯಶಸ್ ಗೌಡ ಎನ್., ಅನುಶ್ರೀ ಮಂಕಾರೆ,ಡಿ. ನವಮಿ ಎನ್. ಪೈ 590 ಅಂಕ, ಆದಿತಿ ಬಿ.ಎನ್., ಬೈರೇಶ್ ಎಸ್.ಎಚ್., ಶ್ರೇಯಾ ವೈ.ಜೆ., ಶಾಮಿಕ್ ಅಬ್ದುಲ್ ರೆಹಮಾನ್ 589 ಅಂಕ ಹಾಗೂ ಸಾತ್ವಿಕ 588 ಅಂಕ ಪಡೆದಿದ್ದಾರೆ.

ಶ್ರೀವತ್ಸ ಲಕ್ಷ್ಮಣ ಹೆಗಡೆ, ಸಫೀನಾ ಯಮನೂರ ಸಾಬ್ ಬೇಲೇರಿ, ಸಾನ್ವಿ ಎಚ್.ಎಸ್. (587), ವೀಕ್ಷಿತ್ ವಿ.ಎಚ್., ಹೇಮಚಂದ್ರ ಸಿ., ಸುಶ್ರುತ್ ರಘುವೀರ್ ನಾಯಕ್ (586), ಅನ್ವಿತಾ ಡಿ., ಸಮೃದ್ಧ ಮುಖೋಪಾಧ್ಯಾಯ (585), ಆಧ್ಯ ಎಸ್. ನಿರಂಜನ್, ಮೊಹಮ್ಮದ್ ಉಮೇರ್, ಅಭಯ ಮಹಾಂತೇಶ ಝಳಕಿ, ಮಧುಪ್ರಿಯಾ ಕೆ.ಎಂ., ಸ್ವಸ್ತಿಕ್ ಜೆ. (584), ಅನುಷ್ಕಾ ಆರ್.ರಾವ್, ಧನ್ಯಾ ಆರ್., ಸಾತ್ವಿಕ್ ಹೆಗ್ಡೆ, ರಿಷಿಕಾ ವಿಶೇಷ ಎಚ್.ಕೆ., ಚಾರ್ವಿ ಲಕ್ಷ್ಮಿ (583), ರಚನಾ ಎಚ್.ಎ., ಯಾನಾ ಪಿ.ಮೇಟಿ, ನಿನೋ ಫ್ರಾನ್ಸಿಸ್ಕೊ ಡಯಾಸ್, ವೈಷ್ಣವಿ, ಅಥ್ಮಿಕ್ ಎಚ್. ಸೂಡಾ (582), ಅಮೃತ ಚಂದ್ರಕಾಂತ ಭಟ್, ರಾಹುಲ್ ವೈ., ಗನ್ಯಾ ವಿ. ಕರಭಾರಿ, ಸಿದ್ದೇಶ್ ಆರ್.ವಿ., ಅಕ್ಷಯ ಶ್ರೀ ವಿ.ಆರ್., ಯೋಜಿತ್ ಹಳೆಮನೆ, ರಾಣಿಯಾ ಆರ್. ಅತ್ತರ್, ರಿಷ್ವಿಕ್ ಡಿ. ಹೆತ್ತೂರ್, ದಿಶಾ ಟಿ.ಪಿ., ಬ್ರಜೇಶ್ ಪೈ ಪಿ.ಎನ್., ಶಾಜಾ ಫಾತಿಮಾ, ಶ್ರೀಯಾ ಬೆಳ್ಳಾರೆ ಕಾಮತ್, ಸತ್ಯಜಿತ್ ಜೆ. ಶೆಟ್ಟಿ, ಪ್ರಥಮ್ ಎಂ. ಮಲ್ಯ, ಸುವ್ವಾಡ ಶಂಕರ ನಾರಾಯಣ ರಾವ್, ಅನಂತಕೃಷ್ಣನ್ ಪಿ.(581), ಇಂಚರಾ ಪಿ.ಗೌಡ, ಸಂಜನಾ ಶ್ರೀನಿವಾಸ್, ಕೃತಿಕಾ ಎಂ.ಬಿ., ಸುಧನ್ವ ಎನ್. ತಂದಿಗೆ, ಕೆ.ಜಿ. ಪ್ರೀತಿ, ಧೀಮಂತ್ ಜೆ., ಈಶ್ವರ್ ಎಂ., ಶ್ರಾವ್ಯ ಸುದರ್ಶನ್, ಎಚ್. ಶ್ರೀಶಾಂತ್ ಉಡುಪ, ಮೋನಿಕಾ ಕೆ., ಸುಮೇಧ್ ಉಡುಪ ಉಪ್ಪಿನಕುದ್ರು, ಶ್ರೀವತ್ಸ ಕುತ್ತೆತ್ತೂರು (580) ಅಂಕ ಪಡೆದುಕೊಂಡಿದ್ದಾರೆ.

ಅನುಶ್ರೀ ಮಂಕಾರೆ, ಡಿ. ನವಮಿ ಎನ್. ಪೈ, ಬೈರೇಶ್ ಎಸ್.ಎಚ್., ಅನಂತಕೃಷ್ಣ ನಾಲ್ಕು ವಿಷಯದಲ್ಲಿ ಹಾಗೂ ಮನಸ್ವಿ ಹೆಗಡೆ, ಅನಿಕಾ ಪಿ., ಯಶಸ್ ಗೌಡ ಎನ್.,ಆದಿತಿ ಬಿ.ಎನ್.,ಶಾಮಿಕ್ ಅಬ್ದುಲ್ ರೆಹಮಾನ್, ಸಾತ್ವಿಕ, ಶ್ರೀವತ್ಸ ಲಕ್ಷ್ಮಣ ಹೆಗಡೆ, ಹೇಮಚಂದ್ರ ಸಿ., ಯೋಜಿತಾ ಹಳೆಮನೆ ಅವರು 3 ವಿಷಯದಲ್ಲಿ ತಲಾ 100 ಅಂಕ ಪಡೆದಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ಅವರು, ಆಡಳಿತ ವರ್ಗ, ಪ್ರಾಂಶುಪಾಲರು, ಎಲ್ಲಾ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳ ಪರವಾಗಿ ಅಭಿನಂದಿಸಿರುತ್ತಾರೆ.

ಪ್ರತೀ ವರ್ಷ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿರುವ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಅದೇ ಸಾಧನೆಯ ಹಾದಿಯಲ್ಲಿದೆ.