ಭಾರತದಲ್ಲಿ ಇವಿ ಕಾರುಗಳನ್ನು ತಯಾರಿಸಲು ಟೆಸ್ಲಾ ಕಂಪನಿಗೆ ಆಹ್ವಾನ: ನಿತಿನ್ ಗಡ್ಕರಿ
ನವದೆಹಲಿ: ಅಮೇರಿಕಾ ಮೂಲದ ವಿದ್ಯುತ್ ವಾಹನ ತಯಾರಕ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದರೆ ಕಂಪನಿಯೂ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ. ಒಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು ಪೆಟ್ರೋಲ್ ವಾಹನಗಳ ಬೆಲೆಗಿಂತ ಕಡಿಮೆಯಾಗುವ ದಿನಗಳು ಬಹಳ ದೂರವಿಲ್ಲ ಎಂದರು. ಇದಕ್ಕೂ ಮುಂಚೆ ಏಪ್ರಿಲ್ 26 ರಂದು, ಟೆಸ್ಲಾ ತನ್ನ ಇವಿಗಳನ್ನು ಭಾರತದಲ್ಲಿ ತಯಾರಿಸಲು ಸಿದ್ಧವಾಗಿದ್ದರೆ ‘ಯಾವುದೇ ತೊಂದರೆ […]