ಭಾರತದಲ್ಲಿ ಇವಿ ಕಾರುಗಳನ್ನು ತಯಾರಿಸಲು ಟೆಸ್ಲಾ ಕಂಪನಿಗೆ ಆಹ್ವಾನ: ನಿತಿನ್ ಗಡ್ಕರಿ

ನವದೆಹಲಿ: ಅಮೇರಿಕಾ ಮೂಲದ ವಿದ್ಯುತ್ ವಾಹನ ತಯಾರಕ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದರೆ ಕಂಪನಿಯೂ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.

ಒಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು ಪೆಟ್ರೋಲ್ ವಾಹನಗಳ ಬೆಲೆಗಿಂತ ಕಡಿಮೆಯಾಗುವ ದಿನಗಳು ಬಹಳ ದೂರವಿಲ್ಲ ಎಂದರು.

ಇದಕ್ಕೂ ಮುಂಚೆ ಏಪ್ರಿಲ್ 26 ರಂದು, ಟೆಸ್ಲಾ ತನ್ನ ಇವಿಗಳನ್ನು ಭಾರತದಲ್ಲಿ ತಯಾರಿಸಲು ಸಿದ್ಧವಾಗಿದ್ದರೆ ‘ಯಾವುದೇ ತೊಂದರೆ ಇಲ್ಲ’ ಆದರೆ ಕಂಪನಿಯು ಚೀನಾದಿಂದ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಹೇಳಿದ್ದರು.

ಎಲಾನ್ ಮಸ್ಕ್ (ಟೆಸ್ಲಾ ಸಿಇಒ) ಭಾರತದಲ್ಲಿ ಇವಿ ತಯಾರಿಸಲು ಸಿದ್ಧರಾಗಿದ್ದರೆ ಯಾವುದೇ ತೊಂದರೆ ಇಲ್ಲ. ಭಾರತಕ್ಕೆ ಬನ್ನಿ, ಉತ್ಪಾದನೆಯನ್ನು ಪ್ರಾರಂಭಿಸಿ, ಭಾರತವು ದೊಡ್ಡ ಮಾರುಕಟ್ಟೆಯಾಗಿದೆ, ಅವರು ಭಾರತದಿಂದ ರಫ್ತು ಮಾಡಬಹುದು ಎಂದು ರೈಸಿನಾ ಡೈಲಾಗ್ಸ್ ಸಂವಾದಾತ್ಮಕ ಅಧಿವೇಶನದಲ್ಲಿ ಅವರು ಟೆಸ್ಲಾ ಕಂಪನಿಗೆ ಆಹ್ವಾನ ನೀಡಿದ್ದರು.