ಪರ್ಯಾಯ ವಿದ್ಯುಚ್ಛಕ್ತಿಯ ಪಿತಾಮಹ ನಿಕೋಲಾ ಟೆಸ್ಲಾನ ಆವಿಷ್ಕಾರಗಳಿಗೆ ಸೂರ್ತಿ ಸ್ವಾಮಿ ವಿವೇಕಾನಂದರು!
ಇವತ್ತು ಟೆಸ್ಲಾ ಎಂದ ತಕ್ಷಣ ನಮ್ಮ ನಮಗೆ ಥಟ್ ಅಂತ ಏಲೋನ್ ಮಸ್ಕ್ ಮತ್ತು ಅವರ ಟೆಸ್ಲಾ ಇವಿ ಕಾರು ನೆನಪಾಗುತ್ತದೆ. ಆದರೆ ಏಲೋನ್ ಮಸ್ಕ್ ಗೆ ಸ್ಪೂರ್ತಿಯಾಗಿರುವ ನಿಕೋಲಾ ಟೆಸ್ಲಾಗೂ ಸ್ಪೂರ್ತಿಯಾದವರು ನಮ್ಮ ಸ್ವಾಮಿ ವಿವೇಕಾನಂದರು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ವಿದ್ಯುಚ್ಛಕ್ತಿ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದ ಮಹಾನ್ ವಿಜ್ಞಾನಿ ನಿಕೋಲಾ ಟೆಸ್ಲಾ. ಇವತ್ತು ರಸ್ತೆ ತುಂಬೆಲ್ಲಾ ಓಡಾಡುವ ಇವಿ ಕಾರುಗಳ ಹಿಂದಿನ ಶಕ್ತಿ ನಿಕೋಲಾ ಟೆಸ್ಲಾ. ಸರ್ಬಿಯನ್-ಅಮೆರಿಕನ್ ಸಂಶೋಧಕ, ಎಲೆಕ್ಟ್ರಿಕಲ್ ಇಂಜಿನಿಯರ್, ಮೆಕ್ಯಾನಿಕಲ್ ಇಂಜಿನಿಯರ್ ಮತ್ತು […]
ಹಕ್ಕಿ ಬಿಡುಗಡೆ ಹೊಂದಿತು ಎಂದ ಏಲಾನ್ ಮಸ್ಕ್: ಸಿ.ಇ.ಒ ಪರಾಗ್ ಅಗರ್ವಾಲ್ ಗೆ ಟ್ವಿಟರ್ ನಿಂದ ಗೇಟ್ ಪಾಸ್
ಸ್ಯಾನ್ ಫ್ರಾನ್ಸಿಸ್ಕೋ: ಏಲಾನ್ ಮಸ್ಕ್ ಅವರು ಗುರುವಾರ ತಡರಾತ್ರಿ ಟ್ವಿಟರ್‌ನ 44 ಶತಕೋಟಿ ಡಾಲರ್ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿದ ನಂತರ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿ ಸಾಮಾಜಿಕ ಮಾಧ್ಯಮ ಕಂಪನಿಯ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಛೇರಿಯಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. ಸಿಇಒ ಪರಾಗ್ ಅಗರವಾಲ್, ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಜನರಲ್ ಕೌನ್ಸಿಲ್ ಸೀನ್ ಎಡ್ಜೆಟ್ ವಜಾಗೊಳಿಸಲಾಗಿರುವ […]
ಬಾಹ್ಯಾಕಾಶದ ಬಿಗ್ ಬಾಸ್ ಏಲಾನ್ ಮಸ್ಕ್ ಗೆ ಭಾರತದಲ್ಲೊಬ್ಬ ಕುಚ್ಚಿಕೂ ಗೆಳೆಯ! ಪೂನಾದ ಸಾಪ್ಟವೇರ್ ಇಂಜಿನಿಯರ್ ಪ್ರಣಯ್-ಮಸ್ಕ್ ದೋಸ್ತಿ!
ಬಾಹ್ಯಾಕಾಶ ತಂತ್ರಜ್ಞಾನದ ಬಿಗ್ ಬಾಸ್, ಟೆಸ್ಲಾ ಕಂಪನಿ ಮಾಲಕ, ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಏಲಾನ್ ಮಸ್ಕ್ ಬಗ್ಗೆ ತಿಳಿಯದೆ ಇರುವವರು ಕಡಿಮೆ. ಮಂಗಳ ಗ್ರಹದ ಮೇಲೆ ಮನೆಯ ಮಾಡಲು ಸ್ಪೇಸ್ ಎಕ್ಸ್‌ಪ್ಲೋರೇಶನ್ ಟೆಕ್ನಾಲಜೀಸ್ ಕಾರ್ಪೊರೇಷನ್ ಎನ್ನುವ ಅಮೆರಿಕದ ಬಾಹ್ಯಾಕಾಶ ನೌಕೆ ತಯಾರಕ, ಬಾಹ್ಯಾಕಾಶ ಉಡಾವಣಾ ಪೂರೈಕೆದಾರ ಕಂಪನಿಯನ್ನು ಹುಟ್ಟುಹಾಕಿರುವ ಮಸ್ಕ್, ಸೌರಶಕ್ತಿ ಆಧಾರಿತ ಉತ್ಪನ್ನ ಮತ್ತು ಸೇವೆಗಳನ್ನು ನೀಡುವ ಟೆಸ್ಲಾ ಕಂಪನಿಯ ಸ್ಥಾಪಕ ಕೂಡಾ ಹೌದು. ಇಂತಹ ದಿಗ್ಗಜನಿಗೆ ಭಾರತದಲ್ಲಿ ಒಬ್ಬ ಗೆಳೆಯನಿದ್ದಾನೆ. ಪೂನಾದಲ್ಲಿ […]
ಮೇಡ್ ಇನ್ ಇಂಡಿಯಾ ಟೆಸ್ಲಾ ಇವಿ ಕಾರಿಗೆ ಕೂಡಿ ಬಂದಿಲ್ಲ ಕಾಲ: ಮೊದಲು ಮಾರಾಟ ಮತ್ತು ಸೇವೆಗೆ ಪಟ್ಟು ಹಿಡಿದ ಮಸ್ಕ್!
ನವದೆಹಲಿ: “ಕಾರುಗಳನ್ನು ಮಾರಾಟ ಮಾಡಲು ಮತ್ತು ಸೇವೆ ನೀಡಲು ಮೊದಲು ನಮಗೆ ಅನುಮತಿ ನೀಡದ ಹೊರತು ಭಾರತದ ಯಾವುದೇ ಸ್ಥಳದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಹಾಕುವುದಿಲ್ಲ” ಎಂದು ಎಲೆಕ್ಟ್ರಿಕ್ ಕಾರು ಟೆಸ್ಲಾದ ನಿರ್ಮಾತ ಏಲನ್ ಮಸ್ಕ್ ಹೇಳಿದ್ದಾರೆ. ಟೆಸ್ಲಾ ಸಂಸ್ಥಾಪಕರು ಭಾರತದಲ್ಲಿ ಇವಿ ಕಾರುಗಳನ್ನು ತಯಾರಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ, ಮಾರಾಟ ಮತ್ತು ಸೇವೆಯನ್ನು ಅನುಮತಿಸುವವರೆಗೆ, ಭಾರತದಲ್ಲಿ ಯಾವುದೇ ಸ್ಥಾವರವನ್ನು ಸ್ಥಾಪಿಸುವುದಿಲ್ಲ ಎಂದು ಟ್ವಿಟರ್ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. 2016 ರಿಂದಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು […]
ಮಸ್ಕ್ ಗೆ ಬೇಕು ಟ್ರಂಪ್? ಟ್ವಿಟರ್ ಗೆ ರೀ ಎಂಟ್ರಿ ಕೊಡಲಿದ್ದಾರೆ ಟ್ರಂಪ್! ಟ್ರಂಪ್ ಟ್ವಿಟರ್ ಬ್ಯಾನ್ ಗೆ ಮಸ್ಕ್ ವಿದಾಯ!!
ಇಬ್ಬರು ವ್ಯಾಪಾರ ದಿಗ್ಗಜರು, ತಮ್ಮ ನೇರ ನಡೆ ನುಡಿಗಳಿಗೆ ಹೆಸರುವಾಸಿಯಾದವರು, ಒಂದೆಡೆ ಸೇರಿದರೆ ಅದು ಹೇಗಿರುತ್ತೋ? ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿರುವ ಟೆಸ್ಲಾ ಕಂಪನಿಯ ಮಾಲಕ ಏಲನ್ ಮಸ್ಕ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ಟ್ವಿಟರ್ ನಿಷೇಧವನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಟ್ವಿಟ್ಟರ್ ತನ್ನನ್ನು ಬ್ಯಾನ್ ಮಾಡಿದ್ದಕ್ಕಾಗಿ ಆ ಸಂಸ್ಥೆಯನ್ನೇ ಖರೀದಿ ಮಾಡಿರುವ ಮಸ್ಕ್, ಇದೀಗ ಟ್ರಂಪ್ ಮೇಲಿರುವ ಟ್ವಿಟರ್ ಬ್ಯಾನ್ ಅನ್ನು ತೆರವುಗೊಳಿಸಲು ಉತ್ಸುಕರಾಗಿದ್ದಾರೆ. ನಿರಂಕುಶ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ […]