ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿರುವ ಅಮೇರಿಕಾದ ಬಿಲಿಯನೇರ್ ಎಲೋನ್ ಮಸ್ಕ್
ನವದೆಹಲಿ: ಇವಿ ತಯಾರಕ ಟೆಸ್ಲಾ ಅಂತಿಮವಾಗಿ ದೇಶದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಭೂಮಿಯನ್ನು ಹುಡುಕುತ್ತಿದೆ ಎಂಬ ಊಹಾಪೋಹಗಳ ನಡುವೆ ಬಿಲಿಯನೇರ್ ಎಲೋನ್ ಮಸ್ಕ್ ಭಾರತಕ್ಕೆ ಭೇಟಿ ನೀಡುವುದಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಾಗಿ ದೃಢಪಡಿಸಿದ್ದಾರೆ. “ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ!” ಎಂದು ತನ್ನ ಸ್ವಾಮಿತ್ವದ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಎಲೋನ್ ಮಸ್ಕ್ ತಿಳಿಸಿದ್ದಾರೆ. ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಾರ, ಎಲೋನ್ ಮಸ್ಕ್ ಏಪ್ರಿಲ್ 22 ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು […]
ಇಸ್ರೇಲ್ ನಲ್ಲಿ ಎಲ್ಲ ಸೂಪರ್ ಚಾರ್ಜಿಂಗ್ ಸ್ಟೇಷನ್ ಗಳು ಉಚಿತ ಬಳಕೆಗೆ ಲಭ್ಯ ಎಂದ ಟೆಸ್ಲಾ ದಿಗ್ಗಜ
ಕ್ಯಾಲಿಫೋರ್ನಿಯಾ: ಟೆಸ್ಲಾ ಮಾಲೀಕ ಏಲಾನ್ ಮಸ್ಕ್, ಇಸ್ರೇಲ್‌ನಲ್ಲಿ ಬಳಕೆದಾರರು ತಮ್ಮ ವಾಹನಗಳನ್ನು ಉಚಿತವಾಗಿ ಚಾರ್ಜ್ ಮಾಡಬಹುದು ಎಂದು X ನಲ್ಲಿ ತಿಳಿಸಿದ್ದಾರೆ. ಇಸ್ರೇಲ್-ಹಮಾಸ್ ಯುದ್ದದ ಉದ್ವಿಗ್ನತೆಯ ನಡುವೆ ಪ್ರಯಾಣವನ್ನು ಸುಲಭಗೊಳಿಸಲು ಯು.ಎಸ್ ವಾಹನ ತಯಾರಕ ಎಲ್ಲಾ ಸೂಪರ್ಚಾರ್ಜರ್ ಸ್ಟೇಷನ್ ಗಳನ್ನು ಬಳಕೆದಾರರಿಗೆ ಮುಕ್ತವಾಗಿಸಿದ್ದಾರೆ. ಟೆಸ್ಲಾ ಇಸ್ರೇಲ್‌ನಲ್ಲಿ 22 ಸೂಪರ್‌ಚಾರ್ಜರ್ ಸ್ಟೇಷನ್‌ಗಳನ್ನು ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸೂಪರ್‌ಚಾರ್ಜರ್‌ಗಳು ಟೆಸ್ಲಾದ ಅತ್ಯಂತ ವೇಗದ ಚಾರ್ಜಿಂಗ್ ಸ್ಟೇಷನ್‌ಗಳಾಗಿದ್ದು ಅದು 250 kW ವರೆಗೆ ಶಕ್ತಿಯನ್ನು ಒದಗಿಸುತ್ತದೆ. ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳು […]
ಭಾರತದಲ್ಲಿ EV ಕಾರು ನಿರ್ಮಾಣ ಕಾರ್ಖಾನೆ ತೆರೆಯಲು ಟೆಸ್ಲಾ ಉತ್ಸುಕತೆ: ವಾರ್ಷಿಕ 500,000 EV ಕಾರು ಉತ್ಪಾದನೆಯ ಯೋಜನೆ
ನವದೆಹಲಿ: ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಭಾರತದಲ್ಲಿ ಸ್ಥಳೀಯವಾಗಿ ಕಾರ್ಖಾನೆಯನ್ನು ಸ್ಥಾಪಿಸಲು ಭಾರತ ಸರ್ಕಾರದೊಂದಿಗೆ ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ. ಈ ಕಾರ್ಯತಂತ್ರವು ಭಾರತದಲ್ಲಿ EV ಕಾರುಗಳನ್ನು ತಯಾರಿಸುವ ಮತ್ತು ಅವುಗಳನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ನೀಡುವ ಗುರಿಯನ್ನು ಹೊಂದಿದೆ. ಸರ್ಕಾರಿ ಮೂಲಗಳ ಪ್ರಕಾರ, ಟೆಸ್ಲಾ ವಾರ್ಷಿಕವಾಗಿ 500,000 EV ಗಳನ್ನು ಉತ್ಪಾದಿಸಲು ಯೋಜಿಸಿದ್ದು, ಆರಂಭಿಕ ಬೆಲೆಗಳು 20 ಲಕ್ಷದಿಂದ ಪ್ರಾರಂಭವಾಗುತ್ತವೆ ಎಂದು ಟಿಒಐ ವರದಿ ಮಾಡಿದೆ. ಒಂದೊಮ್ಮೆ ಟೆಸ್ಲಾ ಭಾರತದಲ್ಲಿ ಸ್ಥಳೀಯ ಕಾರ್ಖಾನೆಯನ್ನು ತೆರೆಯುವಲ್ಲಿ ಸಫಲರಾದರೆ ಈ […]
ನಾನು ಮೋದಿ ಅಭಿಮಾನಿ ಎಂದ ಎಲೋನ್ ಮಸ್ಕ್; ಸಾಧ್ಯವಾದಷ್ಟು ಬೇಗ ಟೆಸ್ಲಾ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಅಮೇರಿಕಾ ಪ್ರವಾಸದಲ್ಲಿದ್ದು ಮಂಗಳವಾರ ಟೆಕ್ ದಿಗ್ಗಜ, ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರನ್ನು ಭೇಟಿಯಾದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್, ‘‘ನಾನು ಮೋದಿ ಅವರ ಅಭಿಮಾನಿ” ಎಂದು ಹೇಳಿದ್ದಾರೆ. “ಇದು ಪ್ರಧಾನ ಮಂತ್ರಿಯೊಂದಿಗಿನ ಅದ್ಭುತ ಸಭೆ ಮತ್ತು ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಹಾಗಾಗಿ, ನಾವು ಹಲವು ಕಾಲದಿಂದ […]
ಭಾರತೀಯ ಉಡುಗೆಯಲ್ಲಿ ಟೆಕ್ ದಿಗ್ಗಜ ಏಲಾನ್ ಮಸ್ಕ್ ಚಿತ್ರ ವೈರಲ್ : ಐ ಲವ್ ಇಟ್ ಎಂದ ಮಸ್ಕ್
ಮಿಡ್‌ಜರ್ನಿಆರ್ಟ್ ಎಂಬ ಐಎ ಕಲೆಯು ಭಾರತೀಯ ಉಡುಗೆಯಲ್ಲಿ ಏಲಾನ್ ಮಸ್ಕ್ ಅವರ ಚಿತ್ರವನ್ನು ರಚಿಸಿದ್ದು ಇದು ಭಾರತದಲ್ಲಿ ವೈರಲ್ ಆಗಿದೆ. ಡಾಡ್ಜ್ ಡಿಸೈನರ್ ಎಂಬ ಟ್ವಿಟರ್ ಬಳಕೆದಾರ ಇದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ವ್ಯಕ್ತ ಪಡಿಸಿರುವ ಟೆಕ್ ದಿಗ್ಗಜ ಏಲಾನ್ ಮಸ್ಕ್, “ಐ ಲವ್ ಇಟ್” ಎಂದು ಪ್ರತಿಕ್ರಿಯಿಸಿದ್ದಾರೆ. ಮಿಡ್‌ಜರ್ನಿಆರ್ಟ್ ಎಂಬುದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸ್ವತಂತ್ರ ಸಂಶೋಧನಾ ಲ್ಯಾಬ್ ಮಿಡ್‌ಜರ್ನಿ ಇಂಕ್‌ನಿಂದ ರಚಿಸಲ್ಪಟ್ಟ ಮತ್ತು ಹೋಸ್ಟ್ ಮಾಡಲ್ಪಟ್ಟ ಒಂದು ಉತ್ಪಾದಕ ಕೃತಕ ಬುದ್ಧಿಮತ್ತೆ ಪ್ರೊಗ್ರಾಂ ಮತ್ತು […]