ಮುರುಕಲು ಗುಡಿಸಲಿನ 90ರ ವೃದ್ದೆಗೆ ಮೇ ತಿಂಗಳ ಕರೆಂಟ್ ಬಿಲ್ 1 ಲಕ್ಷ ರೂ! ತಾಂತ್ರಿಕ ದೋಷದಿಂದ ಬಿಲ್ ನಲ್ಲಿ ಗಡಿಬಿಡಿ
ಕೊಪ್ಪಳ: ಇಲ್ಲಿನ 90 ವರ್ಷದ ವೃದ್ದೆಗೆ ಮೇ ತಿಂಗಳ ತನ್ನ ವಿದ್ಯುತ್ ಬಿಲ್ ಅನ್ನು ಕಂಡು ಜೀವಮಾನದ ಆಘಾತಕ್ಕೆ ಒಳಗಾಗಿದ್ದಾರೆ. ಕೊಪ್ಪಳದ ಭಾಗ್ಯನಗರದ ಮುರುಕಲು ಗುಡಿಸಿಲಿನಲ್ಲಿ ಕೇವಲ ಎರಡು ಎಲ್.ಇ.ಡಿ ಬಲ್ಬ್ ಮಾತ್ರ ಹೊಂದಿರುವ ಗಿರಿಜಮ್ಮ ಎನ್ನುವ 90 ವರ್ಷದ ವೃದ್ದೆಗೆ ಮೇ ತಿಂಗಳ ವಿದ್ಯುತ್ ಬಿಲ್ 1,03,315 ರೂ ಬಂದಿದ್ದು ವೃದ್ದೆಯು ಆಘಾತಕ್ಕೆ ಒಳಗಾಗಿದ್ದಾರೆ. ಪ್ರತಿ ತಿಂಗಳೂ 70-80 ರೂ ವಿದ್ಯುತ್ ಬಿಲ್ ಬರುತ್ತಿದ್ದು, ಮೇ ತಿಂಗಳಲ್ಲಿ ಏಕಾಏಕಿ 1 ಲಕ್ಷಕ್ಕೂ ಮಿಕ್ಕಿ ಬಿಲ್ ಬಂದಿರುವುದನ್ನು […]
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ: ಯಾವ ನಗರದಲ್ಲಿ ಎಷ್ಟು ಹೆಚ್ಚಳ ತಿಳಿದುಕೊಳ್ಳಿ
ಬೆಂಗಳೂರು: ರಾಜ್ಯದ ಜನತೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಉಚಿತ ವಿದ್ಯುತ್ ನಿಂದ ಆಗುವ ನಷ್ಟವನ್ನು ಸರಿದೂಗಿಸುವ ಸಲುವಾಗಿ ವಿದ್ಯುತ್ ದರವನ್ನು ಹೆಚ್ಚಿಸಿದೆ ಎನ್ನಲಾಗಿದ್ದು, ಇದರ ವಿರುದ್ದ ವಿರೋಧ ಪಕ್ಷ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ನಾಗರಿಕರು ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸುವಾಗ 200 ಯೂನಿಟ್‌ಗಳಿಗಿಂತ ಹೆಚ್ಚಿನ ಸ್ಲ್ಯಾಬ್ ಹೊಂದಿದವರಾಗಿದ್ದರೆ ಈ ತಿಂಗಳು ಪ್ರತಿ ಯೂನಿಟ್‌ಗೆ 2.89 ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದ ಹೊಂದಾಣಿಕೆ ಮತ್ತು […]
ಒಂದು ತಿಂಗಳಲ್ಲಿ 3,419 ಕೋಟಿ ವಿದ್ಯುತ್ ಬಿಲ್: ಮಧ್ಯಪ್ರದೇಶ ವಿದ್ಯುತ್ ನೌಕರನ ಅವಾಂತರಕ್ಕೆ ತಲೆ ತಿರುಗಿ ಆಸ್ಪತ್ರೆ ಸೇರಿದ ಮನೆ ಹಿರಿಸದಸ್ಯ
ಭೋಪಾಲ್: ಒಂದೇ ತಿಂಗಳಲ್ಲಿ 3,419 ಕೋಟಿ ರೂಪಾಯಿ ವಿದ್ಯುತ್ ಖರ್ಚು! ಈ ವಿದ್ಯುತ್ ಬಿಲ್ ನೋಡಿ ಮನೆಯ ಮಾಲೀಕರಿಗೆ ತಲೆ ತಿರುಗಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಶಿವ ವಿಹಾರ್ ಕಾಲೋನಿ ನಿವಾಸಿ ಪ್ರಿಯಾಂಕಾ ಗುಪ್ತಾ ಮನೆಗೆ ಜುಲೈನಲ್ಲಿ 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಬಂದಾಗ ಮನೆ ಮಂದಿಯೆಲ್ಲಾ ಆಘಾತಕ್ಕೊಳಗಾಗಿ ಮನೆಯ ಹಿರಿಯ ಸದಸ್ಯ, ಪ್ರಿಯಾಂಕಾರವರ ಮಾವ ಅಸ್ವಸ್ಥರಾಗಿ ಆಸ್ಪತ್ರೆ ಸೇರಬೇಕಾಗಿ ಬಂದಿದೆ. ತನ್ನ ತಂದೆ ವಿದ್ಯುತ್ ಬಿಲ್ ನೋಡಿ […]