ಕೋವಿಡ್ ಇನ್ನೂ ಮುಗಿದಿಲ್ಲ: ಚೀನಾದ ಓಮಿಕ್ರಾನ್ ರೂಪಾಂತರ BF.7 ಭಾರತದಲ್ಲೂ ಪತ್ತೆ; ಮುನ್ನೆಚರಿಕೆಯೆ ಮದ್ದು ಎಂದ ತಜ್ಞರು
ನವದೆಹಲಿ: ಚೀನಾದಲ್ಲಿ ಹಠಾತ್ ಪ್ರಕರಣಗಳ ಏರಿಕೆಗೆ ಕಾರಣವಾಗಿರುವ ಕೋವಿಡ್-19 ರೂಪಾಂತರವಾದ ಓಮಿಕ್ರಾನ್ ರೂಪಾಂತರ BF.7, ಭಾರತದಲ್ಲಿಯೂ ಪತ್ತೆಯಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿ BF.7 ನ ಮೊದಲ ಪ್ರಕರಣವನ್ನು ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಅಕ್ಟೋಬರ್‌ನಲ್ಲಿ ಪತ್ತೆ ಮಾಡಿದೆ. ಇಲ್ಲಿಯವರೆಗೆ, ಗುಜರಾತ್‌ನಿಂದ ಎರಡು ಪ್ರಕರಣಗಳು ವರದಿಯಾಗಿದ್ದು, ಒಡಿಶಾದಿಂದ ಒಂದು ಪ್ರಕರಣ ವರದಿಯಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ. ಭಾರತದಲ್ಲಿ ಈ ರೂಪಾಂತರದ 3 ಪ್ರಕರಣಗಳು ಪತ್ತೆಯಾಗಿದ್ದರೂ, ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಒಟ್ಟಾರೆ ಏರಿಕೆ ಕಂಡುಬಂದಿಲ್ಲ. ಕೇಂದ್ರ ಆರೋಗ್ಯ ಸಚಿವ […]
ಡಿಸೆಂಬರ್ ಅಂತ್ಯದೊಳಗೆ 1.5 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ನಿರ್ಮಾಣ: ಕೇಂದ್ರ ಸರ್ಕಾರ
ನವದೆಹಲಿ: 1.50 ಲಕ್ಷ ಆಯುಷ್ಮಾನ್ ಭಾರತ್ – ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು (ಎಬಿ-ಎಚ್‌ಡಬ್ಲ್ಯೂಸಿ) ಸ್ಥಾಪಿಸುವ ಗುರಿ ಈ ವರ್ಷದ ಡಿಸೆಂಬರ್ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಶುಕ್ರವಾರ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯ ಮಂಡಿಸಿದ ಆರೋಗ್ಯ ಹಕ್ಕು ಮಸೂದೆ 2021 ರ ಶಾಸನದ ಮೇಲಿನ ಚರ್ಚೆಯಲ್ಲಿ ಉತ್ತರಿಸಿದ ಡಾ ಮಾಂಡವೀಯ, ದೇಶದಲ್ಲಿ ಒಟ್ಟು 1.50 ಲಕ್ಷ ಕೇಂದ್ರಗಳನ್ನು ಸ್ಥಾಪಿಸುವ ಗುರಿಯಿದ್ದು, ಈಗಾಗಲೇ ಒಂದು ಲಕ್ಷ 22 ಸಾವಿರ ಕೇಂದ್ರಗಳು […]