ಅಮೇರಿಕಾದಲ್ಲಿ ಭಾರತದ ಚಿನ್ನದ ಹಕ್ಕಿ: ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಿಂಚುತ್ತಿದ್ದಾರೆ ನಮ್ಮ ಕುಡ್ಲದ ಕುವರಿ ದಿವಿತಾ ರೈ
71 ನೇ ವಾರ್ಷಿಕ ವಿಶ್ವ ಸುಂದರಿ ಜನವರಿ 14 ರಂದು ಅಮೇರಿಕಾದ ನ್ಯೂ ಓರ್ಲಿಯನ್ಸ್, ಲೂಯಿಸಿಯಾನದಲ್ಲಿರುವ ಅರ್ನೆಸ್ಟ್ ಎನ್. ಮೋರಿಯಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದ್ದು, 86 ಕ್ಕೂ ಹೆಚ್ಚು ಮಹಿಳೆಯರು ವಿಶ್ವ ಸುಂದರಿ ಪಟ್ಟಕ್ಕಾಗಿ ಸ್ಪರ್ಧಿಸಲಿದ್ದಾರೆ. ಈಗಾಗಾಲೇ ಪೂರ್ವಾಭಾವಿ ಸುತ್ತುಗಳು ನಡೆಯುತ್ತಿದ್ದು, ಭಾರತದ ಪ್ರತಿನಿಧಿ ಮಿಸ್ ಯೂನಿವರ್ಸ್ ಇಂಡಿಯಾ ದಿವಿತಾ ರೈ ಕೂಡಾ ಸ್ಪರ್ಧೆಯಲ್ಲಿದ್ದಾರೆ. ದಿವಿತಾ ರೈ ಕಾಸ್ಟೂಮ್ ವಿಭಾಗದಲ್ಲಿ ಬಂಗಾರವರ್ಣದ ‘ಚಿನ್ನದ ಹಕ್ಕಿ’ಯ ಉಡುಗೆ ತೊಟ್ಟಿದ್ದು, ಇದು ಭಾರತದ ಅಪಾರ ಸಂಪತ್ತನ್ನು ಪ್ರತಿನಿಧಿಸುವ ಉಡುಗೆಯಾಗಿದೆ. […]