ಗುಜರಾತಿನ ನರ್ಮದಾ ನದಿಯ ಬಯಲಿನಲ್ಲಿದೆ ಭೂಗ್ರಹದ ಅತ್ಯಂತ ಹಳೆಯ ಬೃಹತ್ ಜೀವಿಗಳ ಪಳೆಯುಳಿಕೆಗಳು!
ಇಂದಿಗೆ ಸುಮಾರು 180 ಮಿಲಿಯನ್ ವರ್ಷಗಳ ಹಿಂದಿನ ಮಾತಿದು. ಆಗ ಭೂಗ್ರಹದ ಭೂಖಂಡಗಳು ಇಂದಿನಂತಿರದೆ ಒಂದಕ್ಕೊಂದು ಅಂಟಿಕೊಂಡಿದ್ದವು. ಈ ಒಂದೇ ಭೂಖಂಡವನ್ನು ಪಾಂಜಿಯಾ ಎಂದು ಕರೆಯಲಾಗುತ್ತದೆ. ಈ ಕಾಲವನ್ನು ಜುರಾಸಿಕ್ ಯುಗವೆಂದೂ ಕರೆಯಲಾಗುತ್ತದೆ. ಭೂ ತಟ್ಟೆಗಳ ಚಲನೆಯಿಂದಾಗಿ ಈ ಪಾಂಜಿಯಾ ಖಂಡವು ಬೇರ್ಪಟ್ಟು ಇಂದು ನಾವು ನೋಡುತ್ತಿರುವ ಸಪ್ತಖಂಡಗಳಾಗಿ ಹರಿದು ಹಂಚಿಹೋದವು. ಕ್ರಿಟೇಶಿಯಸ್ ಅವಧಿಯ ಸರಿಸುಮಾರು 145-65 ಮಿಲಿಯನ್ ವರ್ಷಗಳ ಅಂತರದಲ್ಲಿ ಈ ಎಲ್ಲಾ ಭೂಖಂಡಗಳು ನಿಧಾನವಾಗಿ ದೂರ ಸರಿದು, ಭಾರತೀಯ ಖಂಡವು ಸಮುದ್ರದಲ್ಲಿ ತೇಲುತ್ತಾ ಏಷಿಯಾ […]
ಡೈನೋಸಾರ್‌ಗಳನ್ನು ಕೊಂದ ಬೃಹತ್ ಕ್ಷುದ್ರಗ್ರಹದ ಪ್ರಭಾವವು ತಿಂಗಳುಗಳ ಕಾಲ ಬೃಹತ್ ಭೂಕಂಪಗಳನ್ನು ಭೂಮಿಯಾದ್ಯಂತ ಸೃಷ್ಟಿಸಿತ್ತು!
ಸುಮಾರು 66 ಮಿಲಿಯನ್ ವರ್ಷಗಳ ಹಿಂದೆ, ಯುಕಾಟಾನ್ ಪರ್ಯಾಯ ದ್ವೀಪದ ಬಳಿ ಸುಮಾರು 6.2 ಮೈಲುಗಳಷ್ಟು (10 ಕಿಲೋಮೀಟರ್) ದೊಡ್ಡದಾಗಿರುವ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿತ್ತು. ಈ ಕ್ಷುದ್ರಗ್ರಹದ ಬಡಿತ ಹೇಗಿತ್ತೆಂದರೆ ಸಂಪೂರ್ಣ ಭೂಗ್ರಹವು ಕತ್ತಲೆಯಲ್ಲಿ ಮುಳುಗಿತ್ತು ಮತ್ತು ಭೂಮಿಯ ಮೇಲಿನ 80% ಪ್ರಾಣಿಗಳ ಜೀವಿತಾವಧಿಯನ್ನು ನಾಶಮಾಡುವಂತಹ ಸಾಮೂಹಿಕ ಅಳಿವಿಗೆ ಕಾರಣವಾಗಿತ್ತು. ಭೂಮಿಯ ಮೇಲಿನ ಬೃಹದಾಕಾರದ ಪ್ರಾಣಿಗಳಾಗಿದ್ದ ಡೈನೋಸಾರ್ ಗಳನ್ನು ಈ ಕ್ಷುದ್ರಗ್ರಹವು ಹೇಳಹೆಸರಿಲ್ಲದಂತೆ ನಾಶಮಾಡಿ ಬಿಟ್ಟಿತ್ತು. ಜಿಯೋಲಾಜಿಕಲ್ ಸೊಸೈಟಿ ಆಫ್ ಅಮೇರಿಕಾದ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಿದ ಹೊಸ […]