ವಜ್ರನಗರಿಯಲ್ಲಿ 9,999 ವಜ್ರಗಳಿಂದ ಮೂಡಿಬಂತು ಅಪೂರ್ವ ರಾಮಮಂದಿರ ಕಲಾಕೃತಿ!!

ಸೂರತ್: ವಜ್ರನಗರಿಯೆಂದೇ ಜಗದ್ವಿಖ್ಯಾತವಾಗಿರುವ ಗುಜರಾತಿನ ಸೂರತ್ ನಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಮುಂಚಿತವಾಗಿ 9,999 ವಜ್ರಗಳಿಂದ ರಾಮಮಂದಿರದ ಚಿತ್ರವನ್ನು ಕುಶಲಕರ್ಮಿಯೊಬ್ಬರು ತಯಾರಿಸಿದ್ದಾರೆ. 9,999 ವಜ್ರಗಳಿಂದ ಕೂಡಿದ ಸುಂದರವಾದ ಸೂರತ್ ಕಸೂತಿಯ ಗೋಡೆಯ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ಈ ಗೋಡೆಯ ಚೌಕಟ್ಟಿನಲ್ಲಿ ಶ್ರೀ ರಾಮನನ್ನು ಚಿತ್ರಿಸಲಾಗಿದೆ ಮತ್ತು ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ.

ಮಂಗಳೂರು: ಒಳ ಉಡುಪಿನಲ್ಲಿಟ್ಟು 1.69 ಕೋಟಿ ರೂ ಮೌಲ್ಯದ ವಜ್ರ ಅಕ್ರಮ ಸಾಗಾಟ ಯತ್ನ; ವ್ಯಕ್ತಿ ಸೆರೆ

ಮಂಗಳೂರು: ದಿನಂಪ್ರತಿ ಅಕ್ರಮ ಚಿನ್ನ ಸಾಗಾಟದ ಘಟನೆಗಳು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುತ್ತವೆ. ಆದರೀಗ ವ್ಯಕ್ತಿಯೋರ್ವ ತನ್ನ ಒಳ ಉಡುಪಿನಲ್ಲಿ ಕೋಟ್ಯಾಂತರ ರೂ. ಮೌಲ್ಯದ ವಜ್ರವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಘಟನೆ ನಡೆದಿದ್ದು, ಪ್ರಯಾಣಿಕನೊಬ್ಬನಿಂದ 1.69 ಕೋಟಿ ರೂ.ಮೌಲ್ಯದ ವಜ್ರದ ಹರಳುಗಳನ್ನು ಜಪ್ತಿ ಮಾಡಲಾಗಿದೆ. ಮೇ 25ರಂದು ದುಬೈಗೆ ತೆರಳಬೇಕಿದ್ದ ವ್ಯಕ್ತಿಯೋರ್ವ ವಜ್ರಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದು, ಆತನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು […]