ವಜ್ರನಗರಿಯಲ್ಲಿ 9,999 ವಜ್ರಗಳಿಂದ ಮೂಡಿಬಂತು ಅಪೂರ್ವ ರಾಮಮಂದಿರ ಕಲಾಕೃತಿ!!

ಸೂರತ್: ವಜ್ರನಗರಿಯೆಂದೇ ಜಗದ್ವಿಖ್ಯಾತವಾಗಿರುವ ಗುಜರಾತಿನ ಸೂರತ್ ನಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಮುಂಚಿತವಾಗಿ 9,999 ವಜ್ರಗಳಿಂದ ರಾಮಮಂದಿರದ ಚಿತ್ರವನ್ನು ಕುಶಲಕರ್ಮಿಯೊಬ್ಬರು ತಯಾರಿಸಿದ್ದಾರೆ.

9,999 ವಜ್ರಗಳಿಂದ ಕೂಡಿದ ಸುಂದರವಾದ ಸೂರತ್ ಕಸೂತಿಯ ಗೋಡೆಯ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ಈ ಗೋಡೆಯ ಚೌಕಟ್ಟಿನಲ್ಲಿ ಶ್ರೀ ರಾಮನನ್ನು ಚಿತ್ರಿಸಲಾಗಿದೆ ಮತ್ತು ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ.