ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸ್ ಸಮಸ್ಯೆ ಸರಿಪಡಿಸುವಂತೆ ರೋಗಿಗಳಿಂದ ಪ್ರತಿಭಟನೆ: ಶಾಸಕರಿಂದ ಸ್ಪಂದನೆ

ಉಡುಪಿ: ಸೋಮವಾರದಂದು ಜಿಲ್ಲಾಸ್ಪತೆಯ ವಠಾರದಲ್ಲಿ ಡಯಾಲಿಸ್ ಸಮಸ್ಯೆ ಸರಿಪಡಿಸುವಂತೆ ಕೋರಿ ರೋಗಿಗಳಿಂದ ಪ್ರತಿಭಟನೆ ನಡೆಯಿತು. ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿದ ರೋಗಿಗಳು ಸಮಸ್ಯೆಯನ್ನು ಸರಿಪಡಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ಕಾಂಗ್ರೆಸ್ ಮುಖಂಡ ಕೆ ಕೃಷ್ಣಮೂರ್ತಿ ಆಚಾರ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಶೀಘ್ರವೇ ಪರಿಹರಿಸುವುದಾಗಿ ರೋಗಿಗಳಿಗೆ ಭರವಸೆ ನೀಡಿದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ […]

ಕೇಂದ್ರ ಸರಕಾರದಿಂದ “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಯೋಜನೆ: ಮನ್ ಸುಖ್ ಮಾಂಡವೀಯಾ

ನವದೆಹಲಿ: ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು ಯಾವುದೇ ಸಮಯದಲ್ಲಿ ದೇಶದಲ್ಲಿ ಎಲ್ಲಿ ಬೇಕಾದರೂ ಚಿಕಿತ್ಸೆಗೊಳಗಾಗಲು ಕೇಂದ್ರ ಸಾರಕಾರವು “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಕಾರ್ಯಕ್ರಮವನ್ನು ಹೊರತರಲಿದೆ ಎಂದು ಆರೋಗ್ಯ ಸಚಿವ ಡಾ.ಮನ್ ಸುಖ್ ಮಾಂಡವಿಯಾ ಹೇಳಿದ್ದಾರೆ. ಮರೀನಾ ಬೀಚ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಆಯೋಜಿಸಿದ್ದ ಸೈಕಲ್ ರಾಲಿಯಲ್ಲಿ ಡಾ ಮನ್ಸುಖ್ ಮಾಂಡವಿಯಾ ಭಾಗವಹಿಸಿದ್ದರು. ಆಬಳಿಕ ನಗರದ ತಮಿಳುನಾಡು ಸರಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ರೊಬೊಟಿಕ್ ಸರ್ಜರಿ ಸೌಲಭ್ಯ ಮತ್ತು ಆರಂಭಿಕ ಗರ್ಭಧಾರಣೆಯ ಅಸಂಗತತೆಗಳ ತಪಾಸಣೆ ಕೇಂದ್ರವನ್ನು ಅವರು […]