ಐಪಿಎಲ್ ಫೈನಲ್: ಮೀಸಲು ದಿನ ಕೂಡ ಮಳೆ ಬಂದರೆ ಯಾರಾಗುವರು ಚಾಂಪಿಯನ್ ?

ಅಹಮದಾಬಾದ್: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯವನ್ನು ಮಳೆ ಹಿನ್ನೆಲೆ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದೆ. ನಿನ್ನೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸುರಿದ ಮಳೆಯಿಂದಾಗಿ ಟಾಸ್ ಪ್ರಕ್ರಿಯೆ ಕೂಡ ನಡೆಸಲಾಗಿಲ್ಲ. ಇದರಿಂದಾಗಿ ರೋಚಕ ಕಾದಾಟ ವೀಕ್ಷಿಸಲು ಬಂದಿದ್ದ 1,32,000ಕ್ಕು ಮಿಕ್ಕಿ ಪ್ರೇಕ್ಷಕರು ನಿರಾಸೆ ಅನುಭವಿಸಿದ್ದಾರೆ. ಭಾನುವಾರ ರಾತ್ರಿ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಸಂಜೆ 6.30ರ ವೇಳೆಗೆ ಮಳೆ […]

ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿ ಫೈನಲ್ ಗೆ ನುಗ್ಗಿದ ಗುಜರಾತ್ ಟೈಟನ್ಸ್: ನಾಳೆ ಧೋನಿ-ಪಾಂಡ್ಯ ಮುಖಾಮುಖಿ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್ 2 ರಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು 62 ರನ್‌ಗಳ ದೈತ್ಯಾಕಾರದ ಅಂತರದಿಂದ ಸೋಲಿಸಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಸತತ ಎರಡನೇ ಐಪಿಎಲ್ ಫೈನಲ್ ಪ್ರವೇಶಿಸಿತು. ತಮ್ಮ ತವರು ನೆಲದಲ್ಲಿ ಕ್ವಾಲಿಫೈಯರ್ 2 ರಲ್ಲಿ ಅವರ ಬಲವಾದ ಪ್ರದರ್ಶನದೊಂದಿಗೆ, ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್’ ಕ್ವಾಲಿಫೈಯರ್ 1 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಕ್ವಾಲಿಫೈಯರ್ 2 ರಲ್ಲಿ ರೋಹಿತ್ ಶರ್ಮಾ […]

ಮಾಹಿ 41ನೇ ಹುಟ್ಟು ಹಬ್ಬಕ್ಕೆ 41 ಫೀಟ್ ಕಟೌಟ್ ಹಾಕಿ ಸಂಭ್ರಮಿಸಿದ ವಿಜಯವಾಡಾ ಅಭಿಮಾನಿಗಳು

ವಿಜಯವಾಡಾ: ಭಾರತ ಕಂಡ ಅತ್ಯುತ್ತಮ ಕ್ರಿಕೆಟ್ ಕ್ಯಾಪ್ಟನ್ ಗಳಲ್ಲಿ ಒಬ್ಬರಾದ ಕೂಲ್ ಕ್ಯಾಪ್ಟನ್ ಥಲಾ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 41ನೇ ವರ್ಷದ ಹುಟ್ಟು ಹಬ್ಬವನ್ನಾಚರಿಸುತ್ತಿದ್ದಾರೆ. ಧೋನಿ ಹುಟ್ಟು ಹಬ್ಬಕ್ಕೆ ಇಡೀ ದೇಶವೆ ಅವರಿಗೆ ಶುಭಾಶಯಗಳ ಸುರಿಮಳೆಯನ್ನು ಸುರಿಸುತ್ತಿದೆ. ತಮ್ಮ ಧೋನಿ ಅಭಿಮಾನಕ್ಕೆ ಸಾಕ್ಷಿ ಎನ್ನುವಂತೆ, ವಿಜಯವಾಡದ ಜಿಲ್ಲೆಯೊಂದರಲ್ಲಿ ಅಭಿಮಾನಿಗಳು ಮಾಹಿಯ 41 ಅಡಿ ಕಟೌಟ್ ಹಾಕಿ ಮಾಜಿ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. ಕಟೌಟ್‌ನಲ್ಲಿ ಧೋನಿ ಬಹು ಪ್ರಖ್ಯಾತ ಹೆಲಿಕಾಪ್ಟರ್ ಶಾಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ […]

ಎಲ್ಲರಂತೆ ತಾನೂ ಎಂಎಸ್ ಧೋನಿ ಅಭಿಮಾನಿ ಎಂದು ತೋರಿದ ಡೇಲ್ ಸ್ಟೇನ್! ಚೆನ್ನೈ ನಾಯಕನ ಆಟೋಗ್ರಾಫ್ ಪಡೆದ ಹೈದ್ರಾಬಾದ್ ಬೌಲಿಂಗ್ ಕೋಚ್!!

ಭಾರತ ತಂಡದ ಮಾಜಿ ನಾಯಕ, ಎಂಎಸ್ ಧೋನಿ ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾನುವಾರ ಸಂಜೆ (ಮೇ 01), ತಂಡದ ನಾಯಕ ರವೀಂದ್ರ ಜಡೇಜಾ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ತಂಡಕ್ಕೆ ಮರಳಿದ್ದರು. ನಾಲ್ಕು ಬಾರಿಯ ಚಾಂಪಿಯನ್ ತಂಡದ ನಾಯಕ ಐಪಿಎಲ್ 2022 ರ ಆವೃತ್ತಿಯ 46 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪುಣೆಯ ಎಮ್ ಸಿ ಎ ಸ್ಟೇಡಿಯಂನಲ್ಲಿ ಎದುರಿಸಿದರು. ಭಾನುವಾರ ಸಂಜೆ ನಡೆದ ಐಪಿಎಲ್ ಪಂದ್ಯದಲ್ಲಿ […]