ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಿಂದ ಜಗನ್ನಾಥ ಭವನ ಭೇಟಿ

ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಇಂದು ಕರ್ನಾಟಕದ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಗಳಾದ ಮನ್ ಸುಖ್ ಮಾಂಡವೀಯ ಹಾಗೂ ಕೆ. ಅಣ್ಣಾಮಲೈ ಭೇಟಿ ನೀಡಿ, ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ಜಗನ್ನಾಥ್ ರಾವ್ ಜೋಷಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಜಿ.ವಿ ಮುಂತಾದವರು ಉಪಸ್ಥಿತರಿದ್ದರು.  

ಕರ್ನಾಟಕ ಚುನಾವಣೆ: ಬಿಜೆಪಿಗೆ ಪ್ರಧಾನ್-ಅಣ್ಣಾಮಲೈ ಸಾರಥ್ಯ

ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು ಶನಿವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ಪಕ್ಷ ಸಂಘಟನೆಯಲ್ಲಿ ಅನುಭವವಿರುವ ಪ್ರಧಾನ್, ಈ ಹಿಂದೆಯೂ ಹಲವು ಚುನಾವಣೆಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರನ್ನು ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಕರ್ನಾಟಕಕ್ಕೆ ಅಣ್ಣಾಮಲೈ ಹೊಸಬರೇನಲ್ಲ. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದ ಸಿಂಘಂ ಎಂದು ಖ್ಯಾತಿವೆತ್ತಿದ್ದ ಅಣ್ಣಾಮಲೈ ಇಲ್ಲಿನವರಿಗೆ ಚಿರಪರಿಚಿತ ಹೆಸರು. ಕರ್ನಾಟಕದಲ್ಲಿ ಈ ವರ್ಷದ ಮಧ್ಯಭಾಗದಲ್ಲಿ ಚುನಾವಣೆ […]

ಆರಂಭಿಕ ವರ್ಷಗಳಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ; ಇಂಗ್ಲಿಷ್ ಎರಡನೇ ಭಾಷೆಯ ಆಯ್ಕೆಯಲ್ಲಿ ಒಂದಾಗಿರಲಿ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ ಬಿಡುಗಡೆ ಮಾಡಿದ ಅಡಿಪಾಯ ಹಂತದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎಂಟು ವರ್ಷ ವಯಸ್ಸಿನ ಮಕ್ಕಳಿಗೆ ಮಾತೃಭಾಷೆಯನ್ನು ಪ್ರಾಥಮಿಕ ಶಿಕ್ಷಣ ಮಾಧ್ಯಮವಾಗಿಸಬೇಕು ಎಂದು ಶಿಫಾರಸು ಮಾಡಿದೆ. ಆರಂಭಿಕ ವರ್ಷಗಳಲ್ಲಿ ಹೊಸ ಭಾಷೆಯನ್ನು ಕಲಿಯುವುದು “ಇಡೀ ಕಲಿಕೆಯ ಪ್ರಕ್ರಿಯೆಯನ್ನು ಹಿಮ್ಮುಖಗೊಳಿಸುತ್ತದೆ” ಎಂದು ಅದು ಹೇಳಿದೆ. ಇಂಗ್ಲಿಷ್ ಅನ್ನು ಎರಡನೇ ಭಾಷೆಯ ಆಯ್ಕೆಗಳಲ್ಲಿ ಒಂದಾಗಿಸಬಹುದು ಎಂದು ಅದು ಸೇರಿಸಿದೆ. 2005 ರಲ್ಲಿ […]