ಅಪರಿಚಿತ ಮಹಿಳೆ ಶವಪತ್ತೆ: ಪತ್ತೆಗೆ ಮನವಿ
ಉಡುಪಿ: ಕುತ್ಪಾಡಿ ಪಡುಕೆರೆ ಕಡಲ ತಡಿಯಲ್ಲಿ ಕಡಲ ಕೊರೆತ ತಡೆಗೊಡೆಗೆ, ಹಾಕಿದ ಕಲ್ಲುಗಳ ಸಂದಿಯಲ್ಲಿ ಸುಮಾರು 40 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಶವವು ಪತ್ತೆಯಾದ ಘಟನೆ ಮಂಗಳವಾರ ಬೆಳಗಿನ ಜಾವ ನಡಿದೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರಸುದಾರರು ನಗರ ಠಾಣೆ ಅಥವ, ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸ ಬಹುದು. ಶವ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಅಂಬುಲೇನ್ಸ್ ಸೇವೆ ನೀಡಿ ಇಲಾಖೆಗೆ […]
ಅಪರಿಚಿತ, ಮೃತ ವ್ಯಕ್ತಿ ಮಾಹಿತಿ ಬಗ್ಗೆ ಪತ್ತೆ
ಉಡುಪಿ: ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾಗಿ ದಾಖಲಾದ ಸುಭದ್ರಮ್ಮ (65) ಎಂಬುವವರು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು, ವಾರಸುದಾರರು ಯಾರಾದರು ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820-2520555 / 9449827833 ನ್ನು ಸಂಪರ್ಕಿಸುವಂತೆ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಪ್ರಕಟಣೆ ತಿಳಿಸಿದೆ.
ರಂಗದಲ್ಲೇ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಯಕ್ಷಗಾನ ಕಲಾವಿದ

ಬೈಂದೂರು :ಜಲವಳ್ಳಿ ಮೇಳದ ಖ್ಯಾತ ಕಲಾವಿದ ಹುಡುಗೋಡು ಚಂದ್ರಹಾಸ(52) ಅವರು ತಾಲ್ಲೂಕಿನ ಯಳಜಿತ ಗ್ರಾಮದ ಜೋಗಿಜಡ್ಡು ಎಂಬಲ್ಲಿ ಭಾನುವಾರ ರಾತ್ರಿ ಯಕ್ಷಗಾನ ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ರಂಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಂದೂರಿನಲ್ಲಿ ಕಲಾಧರ ಯಕ್ಷಗಾನ ಬಳಗ ಜಲವಳ್ಳಿ, ಮೇಳದ ವತಿಯಿಂದ ನಡೆಯುತ್ತಿದ್ದ ಯಕ್ಷಗಾನದಲ್ಲಿ ಅತಿಥಿ ಕಲಾವಿದರಾಗಿ ಕುಣಿಯುತ್ತಿದ್ದಾಗ ರಂಗದಲ್ಲಿಯೇ ಹುಡುಗೋಡು ಚಂದ್ರಹಾಸ ಅವರು ಕುಸಿದು ಬಿದ್ದಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ದಿಗ್ಬಾಂತರಾದ ಮೇಳದ ಕಲಾವಿದರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರ ಜೀವವನ್ನು ಉಳಿಸಿಕೊಳ್ಳಲಾಗಲಿಲ್ಲ. ಸಾಲ್ವನ ಪಾತ್ರದಲ್ಲಿ […]
ಉಡುಪಿ: ವಾಹನ ಅಪಘಾತ ಅಪರಿಚಿತ, ಮೃತ ವ್ಯಕ್ತಿಯ ಬಗ್ಗೆ ಮಾಹಿತಿ

ಉಡುಪಿ: ಉಡುಪಿ ಪುತ್ತೂರು ಗ್ರಾಮದ ಹನುಮಂತನಗರ ಪ್ರಾಥಮಿಕ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಸಾರ್ವಜನಿಕ ರಸ್ತೆಯಲ್ಲಿ ಮಾ.8 ರಂದು ಬೆಳಗ್ಗೆ 6.30 ಕ್ಕೆ ಸುಮಾರು ಸುಮಾರು 35 ವರ್ಷ, 5.4 ಅಡಿ ಎತ್ತರದ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿರುವ ಅಪರಿಚಿತ ವ್ಯಕ್ತಿಯೋರ್ವನಿಗೆ ಯಾವುದೋ ವಾಹನ ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ದುಡುಕುತನದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಅಪಘಾತವೆಸಗಿ ಪರಾರಿಯಾಗಿದ್ದು, ಅಪಘಾತದ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ […]
ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಉಡುಪಿ: ಗಂಗೊಳ್ಳಿ ಠಾಣಾ ವ್ಯಾಪ್ತಿಯ ಆರಾಟೆ ಸೇತುವೆ ಮೇಲೆ ಸೋಮವಾರ ಮಧ್ಯರಾತ್ರಿ ನಡೆದ ಭೀಕರ ರಸ್ತೆ ಅಫಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಗಣೇಶ್ ಎಂಬವರ ಪುತ್ರ ವಿಖ್ಯಾತ್ (24) ಗುರುತಿಸಲಾಗಿದೆ. ನಿನ್ನೆ ತಡರಾತ್ರಿ 12.30 ಸುಮಾರಿಗೆ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದು, ಅಫಘಾತ ಸ್ಥಳದಿಂದ 2 ಕಿಲೋಮೀಟರ್ ದೂರದ ಹೆಮ್ಮಾಡಿ ತನಕ ಬೈಕ್ ಎಳೆದೊಯ್ದಿದೆ. ಅಪಘಾತದ ರಭಸಕ್ಕೆ ಯುವಕನ ಮೃತ ದೇಹ ಹಾಗೂ […]