ಲೇಖಕಿ ಡಾ. ರೇಖಾ ವಿ ಬನ್ನಾಡಿಗೆ ಮಾತೃ ವಿಯೋಗ
ಕುಂದಾಪುರ: ಲೇಖಕಿ ಡಾ.ರೇಖಾ ವಿ. ಬನ್ನಾಡಿಯವರ ತಾಯಿ, ಕಂದಾವರ ಕೊಂಗವಳ್ಳಿ ಮನೆ ದಿ. ಶಂಕರ ಶೆಟ್ಟರ ಪತ್ನಿ ಗುಳ್ವಾಡಿ ದೊಡ್ಡಮನೆ ರಾಜೀವಿ ಶೆಡ್ತಿಯವರು(85 ವರುಷ) ಸೆ. 30 ರಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ಅವರು ಮಗ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಣಿಪಾಲ: ಮೀನು ಹಿಡಿಯಲು ಹೋದ ವ್ಯಕ್ತಿ ಕೆರೆಗೆ ಬಿದ್ದು ಸಾವು
ಮಣಿಪಾಲ: ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರು ಮಣಿಪಾಲದ ಮಣ್ಣಪಳ್ಳ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಕುಂದಾಪುರದ ಪ್ರಕಾಶ್ (35) ಎಂದು ಗುರುತಿಸಲಾಗಿದೆ. ಇವರು ಮಣ್ಣಪಳ್ಳ ಕೆರೆಯಲ್ಲಿ ಗಾಳಹಾಕಿ ಮೀನು ಹಿಡಿಯುತ್ತಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಹಾಗೂ ಮಣಿಪಾಲ ಠಾಣಾಧಿಕಾರಿ ರಾಜಶೇಖರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಾದರು.
ಪೋಸ್ಟರ್ ಹಿಡಿದು ಏಕಾಂಗಿ ಹೋರಾಟ ನಡೆಸುತ್ತಿರುವ ಮಂಗಳೂರಿನ ಬಾಲಕ: ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿರುವ ಬಾಲಕನ ಕೂಗು ಆಡಳಿತಕ್ಕೆ ಕೇಳುವುದೆ?
ಮಂಗಳೂರು: ರಸ್ತೆಯಲ್ಲಿ ಗುಂಡಿಗೆ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ ಅತೀಶ್‌ನನ್ನು ಕಳೆದುಕೊಂಡ ಆತನ ಸ್ನೇಹಿತ ಲಿಖಿತ್ ಮಂಗಳೂರು ಮಹಾನಗರ ಪಾಲಿಕೆಯ ಮುಂದುಗಡೆ ನಿಂತು ಪೋಸ್ಟರ್ ಹಿಡಿದು ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಒಂಟಿಯಾಗಿ ಪೋಸ್ಟರ್ ಹಿಡಿದು ರಸ್ತೆಯಲ್ಲಿ ‘ಸುರಕ್ಷಾ ಬಂಧನ’ಕ್ಕೆ ಆಗ್ರಹಿಸುತ್ತಿದ್ದಾರೆ. ತನ್ನ ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಎದುರು ಪೋಸ್ಟರ್ ಹಿಡಿದು ನ್ಯಾಯ ಕೇಳುತ್ತಿರುವ ಈ ಬಾಲಕನ ಹೆಸರು ಲಿಖಿತ್ ರೈ. ಇತ್ತೀಚೆಗೆ ಆತನ ಸ್ನೇಹಿತ ಅತೀಶ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. […]
ಕಂಬದಕೋಣೆ ಬಳಿ ಬೈಕ್ ಅಪಘಾತ: ಆಂಧ್ರ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತ್ಯುವಶ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಂಬದಕೋಣೆ ಬಳಿಯ ಸೇತುವೆ ಸಮೀಪ ಬೈಕ್ ಸ್ಕಿಡ್ ಆಗಿದ್ದು, ಸವಾರರಿಬ್ಬರು ಸಾವನ್ನಪ್ಪಿದ ದುರ್ಘಟನೆ ಭಾನುವಾರ ಸಂಭವಿಸಿದೆ. ಆಂಧ್ರಪ್ರದೇಶದ ಆದಿತ್ಯ ರೆಡ್ಡಿ(18) ಮತ್ತು ತರುಣ್ ಕುಮಾರ್ ರೆಡ್ಡಿ( 19) ಸಾವನಪ್ಪಿದವರು. ಇವರಿಬ್ಬರೂ ಉಡುಪಿಯ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ. ಸವಾರರು ಕುಂದಾಪುರ ಕಡೆಯಿಂದ ಬೈಂದೂರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸುದ್ದಿ ತಿಳಿದ ತಕ್ಷಣ ಗಂಗೊಳ್ಳಿಯ 24*7 ಆಪತ್ಭಾಂಧವ ಆಂಬ್ಯುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. […]
ಬೈರಂಪಳ್ಳಿ: ಗದ್ದೆ ಕೆಲಸದಲ್ಲಿ ನಿರತನಾಗಿದ್ದ ಯುವಕ ಜಾರಿ ಬಿದ್ದು ಸಾವು
ಹಿರಿಯಡ್ಕ: ಇಲ್ಲಿನ ಬೈರಂಪಳ್ಳಿಯಲ್ಲಿ ಗದ್ದೆ ಕೆಲಸದಲ್ಲಿ ನಿರತನಾಗಿದ್ದ ಯುವ ಕೃಷಿಕನೊಬ್ಬ ಸಾವನಪ್ಪಿರುವ ಘಟನೆ ಜುಲೈ 3ರಂದು ನಡೆದಿದೆ. ಬೈರಂಪಳ್ಳಿ ದೂಪದಕಟ್ಟೆ ನಿವಾಸಿ 35 ವರ್ಷದ ಉಮೇಶ್ ಕುಲಾಲ್ ಮೃತಪಟ್ಟ ದುರ್ದೈವಿ. ಉಮೇಶ್ ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.