ಮಾಜಿ ಕೇಂದ್ರ ಸಚಿವ ಶರದ್ ಯಾದವ್ ನಿಧನ

ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಆರ್.ಜೆ.ಡಿ ನಾಯಕ ಶರದ್ ಯಾದವ್ ಅವರು 75 ನೇ ವಯಸ್ಸಿನಲ್ಲಿ ಜನವರಿ 12 ರಂದು ಗುರುವಾರ ನಿಧನರಾಗಿದ್ದಾರೆ. ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ. ಮಾಜಿ ಸಚಿವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರದ್ ಯಾದವ್ ಅವರನ್ನು “ಪ್ರಜ್ಞಾಹೀನ ಮತ್ತು ಸ್ಪಂದಿಸದ ಸ್ಥಿತಿಯಲ್ಲಿ” ತುರ್ತು ವಿಭಾಗಕ್ಕೆ ಕರೆತರಲಾಯಿತು ಮತ್ತು ಅವರಿಗೆ “ಯಾವುದೇ ನಾಡಿಮಿಡಿತ ಅಥವಾ ದಾಖಲಿಸಬಹುದಾದ ರಕ್ತದೊತ್ತಡ” ಇರಲಿಲ್ಲ […]

ಕೋಟ: ಉದ್ಯಮಿ ಹರಿದಾಸ್ ಭಟ್ ನಿಧನ

ಕೋಟ: ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ನಿವಾಸಿ ಉದ್ಯಮಿ ಹರಿದಾಸ್ ಭಟ್ (60) ಅಸೌಖ್ಯದಿಂದ ಭಾನುವಾರದಂದು ನಿಧನ ಹೊಂದಿದ್ದಾರೆ. ಇವರು ಗೇರು ಉದ್ಯಮಿಯಾಗಿದ್ದರು ಹಾಗೂ ಹಳ್ಳಾಡಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ, ಜೈ ಗಣೇಶ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ, ಜಿ.ಎಸ್.ಬಿ.‌ಸೇವಾ ಸಂಘ‌ ಶಿರಿಯಾರದ ಪದಾಧಿಕಾರಿಯಾಗಿ, ಹವ್ಯಾಸಿ ಯಕ್ಷಗಾನ ತಾಳಮದ್ದಲೆಕಾರರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮಲ್ಪೆ: ಬೋಟಿನಿಂದ ಕಾಲು ಜಾರಿ ಬಿದ್ದು ಮೀನುಗಾರ ಮೃತ್ಯು

ಮಲ್ಪೆ: ಬೋಟಿನಿಂದ ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಬಂದರಿನಲ್ಲಿ ನಡೆದಿದೆ. ಮೃತರನ್ನು ಕಟಪಾಡಿ ಮಟ್ಟು ನಿವಾಸಿ ಸಂತೋಷ್ ತಿಂಗಳಾಯ (35) ಎಂದು ಗುರುತಿಸಲಾಗಿದೆ. ಇವರು ಮಲ್ಪೆಯ ಬಲರಾಮ್ ಪರ್ಸಿನ್ ಬೋಟು ಬಂದರಿನ ಒಳಗೆ ಬರುವಾಗ, ಕಾಲು ಜಾರಿ ನೀರಿಗೆ ಬಿದ್ದರೆನ್ನಲಾಗಿದೆ. ಇವರನ್ನು ಕೂಡಲೇ ಮೇಲಕ್ಕೆ ಎತ್ತಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ: ನೆಲಕ್ಕುರುಳಿದ ಮೋಟಾರ್ ಬೈಕ್; ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಗುರುವಾರದಂದು ಮೋಟರ್ ಬೈಕ್ ಹಿಂಬದಿ ಸವಾರಳಾಗಿದ್ದ 11 ವರ್ಷದ ಶಾಲಾ ಬಾಲಕಿಯೊಬ್ಬಳು ಮಳೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಗುರುವಾರ ಸಂಭವಿಸಿದೆ. ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಹೆಗ್ಗದಗೆರೆ ನಿವಾಸಿ ರಂಜಿತಾ ತನ್ನ ಸಂಬಂಧಿಯೊಬ್ಬರ ಬೈಕಿನಲ್ಲಿ ಹಿಂಬದಿ ಸವಾರಳಾಗಿ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಭಾರೀ ಮಳೆಯ ಕಾರಣದಿಂದ ಇಲ್ಲಿನ ದಡ್ಡಿಹಳ್ಳಿಯ ಕೆರೆಯ ನೀರು ಉಕ್ಕೇರಿ ಹರಿದ ಪರಿಣಾಮ ಬೈಕ್ ನೆಲಕ್ಕೆ ಉರುಳಿದೆ. ಇದನ್ನು ಕಂಡ ಗ್ರಾಮಸ್ಥರು ಬೈಕ್ ಚಾಲಕನನ್ನು ರಕ್ಷಿಸಿದ್ದಾರೆ ಆದರೆ ದುರಾದೃಷ್ಟವಶಾತ್ ಬಾಲಕಿ […]

ಕ್ಯಾಲಿಫೋರ್ನಿಯಾ: ಅಪಹರಣಕ್ಕೊಳಗಾಗಿದ್ದ ಭಾರತೀಯ ಮೂಲದ 4 ಮಂದಿ ಶವವಾಗಿ ಪತ್ತೆ

ಕ್ಯಾಲಿಫೋರ್ನಿಯಾ: ಎಂಟು ತಿಂಗಳ ಮಗು, ಆಕೆಯ ಪೋಷಕರಾದ ಜಸ್ಲೀನ್ ಕೌರ್, ಎಂ ಜಸ್ದೀಪ್ ಸಿಂಗ್ ಮತ್ತು ಚಿಕ್ಕಪ್ಪ ಅಮನದೀಪ್ ಸಿಂಗ್ ಸೋಮವಾರದಿಂದ ನಾಪತ್ತೆಯಾಗಿದ್ದರು. ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಅವರನ್ನು ಟ್ರಕ್‌ನೊಳಗೆ ಬಲವಂತವಾಗಿ ತುರುಕಿ ಕರೆದೊಯ್ಯುವುದು ಕಣ್ಗಾವಲು ದೃಶ್ಯಾವಳಿಗಳಲ್ಲಿ ದಾಖಲಾಗಿತ್ತು. ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಇವರನ್ನು ಅಪಹರಿಸಲಾಗಿದ್ದು, ಈ ನಾಲ್ಕೂ ಜನ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಗುರುವಾರ ದೃಢಪಡಿಸಿದ್ದಾರೆ. ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ 48 ವರ್ಷದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. “ಇದು ಭಯಾನಕ ಮತ್ತು ಪ್ರಜ್ಞಾಶೂನ್ಯವಾಗಿದೆ”ಎಂದು ಮರ್ಸಿಡ್ […]