ಇಂದು ಪಡ್ಡಂಬೀಡು ಆಳ್ವ ಹೆಗ್ಡೆ ಕುಟುಂಬಸ್ಥರ ಮೂಲ ನಾಗ-ಬ್ರಹ್ಮಸ್ಥಾನ ಪ್ರತಿಷ್ಠಾವರ್ಧಂತಿ ಹಾಗೂ ಬ್ರಹ್ಮಮಂಡಲ ಸೇವೆ

ಹಿರಿಯಡಕ: ಪಡ್ಡಂಬೀಡು “ಆಳ್ವ ಹೆಗ್ಡೆ” ಕುಟುಂಬಸ್ಥರ ಮೂಲ ನಾಗ – ಬ್ರಹ್ಮ ಸ್ಥಾನ ಇದರ ಪ್ರತಿಷ್ಠಾವರ್ಧಂತಿ – ಮಹಾ ಅನ್ನಸಂತರ್ಪಣೆ ಹಾಗೂ “ಬ್ರಹ್ಮಮಂಡಲ (ಢಕ್ಕೆ ಬಲಿ) ಸೇವೆ” ಯು ಇಂದು ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ: 20.02.2023, ಸೋಮವಾರ ಬೆಳಿಗ್ಗೆ ಗಂಟೆ 9.00 ರಿಂದ : ಫಲನ್ಯಾಸ ಪ್ರಾರ್ಥನೆ, ಗಣಯಾಗ, ಬ್ರಹ್ಮದೇವರಿಗೆ ಪಂಚವಿಂಶತಿ ಕಲಶ ಪೂರ್ವಕ ಅಧಿವಾಸ ಹೋಮ – ನಾಗದೇವರಿಗೆ ಪವಮಾನ ಮಂತ್ರ ಗರ್ಭಿತ ನವಕ ಪ್ರಧಾನ, ತನು – ತಂದಿಲ ಸೇವೆ – ಪರಿವಾರ […]

ಪಡುಬಿದ್ರಿ: ಜ.19 ರಿಂದ ಐತಿಹಾಸಿಕ ಢಕ್ಕೆ ಬಲಿ ಸೇವೆ ಆರಂಭ

ಪಡುಬಿದ್ರಿ: ಇಲ್ಲಿನ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆ ಬಲಿ ಸೇವೆಯು ಜ.19 ರಂದು ಮಂಡಲ ಸೇವೆಯೊಂದಿಗೆ ಆರಂಭಗೊಳ್ಳಲಿದೆ. ಮಾರ್ಚ್ 11 ರಂದು ನಡೆಯುವ ಮಂಡಲ ವಿಸರ್ಜೆಯೊಂದಿಗೆ ಢಕ್ಕೆ ಬಲಿ ಸೇವೆಗಳು ಸಂಪನ್ನವಾಗಲಿವೆ. ಈ ಬಾರಿ ಒಟ್ಟು 36 ಸೇವೆಗಳು ಇರಲಿವೆ. ಹೆಚ್ಚಿನ ಮಾಹಿತಿಗಾಗಿ ಬ್ರಹ್ಮಸ್ಥಾನದ ಕಚೇರಿ ಅಥವಾ ಖಡೇಶ್ವರಿ ವನದುರ್ಗಾ ಟ್ರಸ್ಟ್ ನ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ.