ಡಿ.16 ರಂದು ವರ್ತೆಕಲ್ಕುಡ ದೈವಸ್ಥಾನದ ಕಾಲಾವಧಿ ಸಿರಿಸಿಂಗಾರ ಕೋಲ
ಉಡುಪಿ: ವರ್ತೆಕಲ್ಕುಡ ದೈವಸ್ಥಾನ, ಬಜೆ ತಂಗಾಣ ಇಲ್ಲಿ ಡಿ.16 ಶುಕ್ರವಾರದಂದು ಕಾಲಾವಧಿ ಸಿರಿಸಿಂಗಾರ ಕೋಲ ನಡೆಯಲಿದ್ದು, ರಾತ್ರಿ 7.00ಕ್ಕೆ ಭಜನಾ ಕಾರ್ಯಕ್ರಮ ರಾತ್ರಿ 8.00ಕ್ಕೆ ಅನ್ನ ಸಂತರ್ಪಣೆ ರಾತ್ರಿ 9.00ಕ್ಕೆ ಹೂವಿನ ಪೂಜೆ ಜರುಗಲಿರುವುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಆಗಮಿಸಿ, ಶ್ರೀ ದೈವಗಳ ಸಿರಿಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ. ಸರ್ವರಿಗೂ ಆದರದ ಸ್ವಾಗತ ಬಯಸುವ ಸುಧಾಕರ ಶೆಟ್ಟಿ ಬಜೆ, ತಂಗಾಣ ತಂಗಾಣ ಕುಟುಂಬಸ್ಥರು, ಬಜೆ ಸಂಪರ್ಕ: […]
ಕಾರ್ಕಳ: ಪರ್ಪಲೆಗಿರಿಯಲ್ಲಿ ದೈವಸ್ಥಾನ ನಿರ್ಮಾಣಕ್ಕಾಗಿ ಭೂ ನಿಧಿ ಸಂಚಯನಕ್ಕೆ ಚಾಲನೆ
ಕಾರ್ಕಳ: ಇಲ್ಲಿನ ಅತ್ತೂರು ಪರ್ಪಲೆಗಿರಿಯಲ್ಲಿ ಶುಕ್ರವಾರದಂದು ಭೂ ನಿಧಿ ಸಂಚಯನದ ಅಂಗವಾಗಿ ಕೇಂಜ ಶ್ರೀಧರ ತಂತ್ರಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ಪರ್ಪಲೆಗಿರಿಯಲ್ಲಿ ದೈವಸ್ಥಾನ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದ್ದು, ದೇವಸ್ಥಾನ ಮತ್ತು ದೈವಸ್ಥಾನ ನಿರ್ಮಾಣ ಹಾಗೂ ಇತರ ಧಾರ್ಮಿಕ ಸಾಮಾಜಿಕ ಕಾರ್ಯಗಳಿಗಾಗಿ ಜಮೀನಿನ ಅವಶ್ಯಕತೆ ಇರುವುದರಿಂದ ಭೂ ನಿಧಿ ಸಂಚಯನ ಯೋಜನೆಯನ್ನು ಹಮ್ಮಿಕೊಂಡಿದ್ದು ( 0.25 ಸೆಂಟ್ಸ್(3,000/-), 0.50 ಸೆಂಟ್ಸ್(6,000/-),1 ಸೆಂಟ್ಸ್(12,000/-) 2 ಸೆಂಟ್ಸ್(24,000/-), 5 ಸೆಂಟ್ಸ್(60,000/-),10 ಸೆಂಟ್ಸ್(1,20,000/-), 25 ಸೆಂಟ್ಸ್ (3 […]