ಧಾರಾವಾಹಿಯಲ್ಲಿ ದೈವಾರಾಧನೆಯ ದೃಶ್ಯ: ಪ್ರಕರಣ ದಾಖಲಿಸಲು ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಒತ್ತಾಯ
ಮಂಗಳೂರು: ತುಳುನಾಡಿನ ಕಟ್ಟುಕಟ್ಟಳೆಯಾದ ದೈವಾರಾಧನೆಯ ಹಿನ್ನೆಲೆಯಿರುವ ಚಿತ್ರಗಳು, ಕಿರುಚಿತ್ರಗಳು ಒಂದರ ಹಿಂದೆ ಒಂದು ಬಿಡುಗಡೆಯಾಗುತ್ತಿದ್ದು ಇದೀಗ ಧಾರಾವಾಹಿಯಲ್ಲೂ ದೈವಾರಾಧನೆಯ ದೃಶ್ಯಗಳನ್ನು ಅಳವಡಿಸಿಕೊಂಡಿರುವುದು ತುಳುವರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಕಾವೇರಿ ಕನ್ನಡ ಮಿಡಿಯಂ ಧಾರವಾಹಿಯ ಪ್ರೋಮೋ ರೀಲಿಸ್ ಆಗಿದ್ದು, ಅದರಲ್ಲಿ ದೈವಾರಾಧನೆಯ ಕುರಿತ ವಿಡಿಯೋ ಶೂಟಿಂಗ್ ಆಗಿದೆ. ಇದಕ್ಕೆ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ. ದೈವಾರಾಧನೆ ಪ್ರದರ್ಶನ ಬೆನ್ನಲ್ಲೇ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೈವದ ಪಾತ್ರ ನಿರ್ವಹಿಸಿದ ಕಲಾವಿದನ […]