ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್ಯವರ್ಧನ್ : ಎಸ್.ನಾರಾಯಣ್ ‘ಸೂರ್ಯವಂಶ’ ದಿಂದ ಮತ್ತೆ ಕಿರುತೆರೆಗೆ ಅನಿರುದ್ದ್

ಅಭಿಮಾನಿಗಳ ನೆಚ್ಚಿನ ಆರ್ಯವರ್ಧನ್ ಖ್ಯಾತಿಯ ಅನಿರುದ್ದ್ ಮತ್ತೆ ಕಿರುತೆರೆಗೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಕನ್ನಡದ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್ ರವರು ಅನಿರುದ್ದ್ ಕೈ ಹಿಡಿದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ಮಾಡಿ ಹೆಸರುಗಳಿಸಿರುವ ಎಸ್.ನಾರಾಯಣ್ ಉದಯ ಟಿವಿಗಾಗಿ “ಸೂರ್ಯವಂಶ” ಧಾರಾವಾಹಿಯನ್ನು ರಚಿಸಿ ನಿರ್ದೇಶಿಸುತ್ತಿದ್ದಾರೆ. ವಿಶೇಷವೆಂದರೆ ಡಾ. ವಿಷ್ಣುವರ್ಧನ್ ರವರು ನಟಿಸಿದ್ದ ಸೂರ್ಯವಂಶ ಹೆಸರಿನ ಧಾರಾವಾಹಿಯಲ್ಲಿ ಅನಿರುದ್ದ್ ನಟಿಸುತ್ತಿರುವುದು. ವಿಷ್ಣು ದಾದಾ ನಟಿಸಿದ್ದ ಸೂರ್ಯವಂಶ ಚಿತ್ರವು ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಅಳಿಯ ಅನಿರುದ್ದ್ […]