ಐಪಿಎಲ್ ಮಿನಿ ಹರಾಜು: 18.5 ಕೋಟಿಗೆ ಪಂಜಾಬ್ ಪಾಲಾದ ಸ್ಯಾಮ್ಯುಯೆಲ್ ಕರ್ರನ್; ಚೆನೈ ತಂಡಕ್ಕೆ ಬೆನ್ ಸ್ಟೋಕ್ಸ್ ಸೇರ್ಪಡೆ
ಕೊಚ್ಚಿ: ಭಾರತದ ಅತಿದೊಡ್ಡ ಕ್ರೀಡಾಕೂಟ ಇಂಡಿಯನ್ ಪ್ರೀಮಿಯರ್ ಲೀಗ್ ಬೇಸಿಗೆಯಲ್ಲಿ ಪ್ರಾರಂಭವಾಗಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಮಿನಿ ಹರಾಜು ನಡೆಸಲು ಸಂಘಟನಾ ಸಂಸ್ಥೆ ನಿರ್ಧರಿಸಿತ್ತು. ಐಪಿಎಲ್‌ನ 16ನೇ ಆವೃತ್ತಿಗಾಗಿ ಒಟ್ಟು 991 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಇಂದು ಎರ್ನಾಕುಲಂ ನಲ್ಲಿ 405 ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆದಿದೆ. ಎಲ್ಲಾ ಸ್ವರೂಪಗಳಲ್ಲಿಯೂ ಆಡುವ ಇಂಗ್ಲಿಷ್ ಕ್ರಿಕೆಟಿಗ ಸ್ಯಾಮ್ಯುಯೆಲ್ ಮ್ಯಾಥ್ಯೂ ಕರ್ರನ್ ದಾಖಲೆಯ 18.5 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. 17.5 ಕೋಟಿ ಮೊತ್ತಕ್ಕೆ ಕ್ಯಾಮರೂನ್ ಗ್ರೀನ್ ಮುಂಬೈ ಇಂಡಿಯನ್ಸ್ […]
ಕಸ್ತೂರ್ಬಾ ಆಸ್ಪತ್ರೆ ಕಾರ್ಪೊರೇಟ್ ಕ್ರಿಕೆಟ್ ಲೀಗ್: ಚಾಂಪಿಯನ್ ಆಗಿ ಹೊರಹೊಮ್ಮಿದ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕಾರ್ಪೊರೇಟ್ ಕಂಪನಿ, ಬ್ಯಾಂಕ್ ಗಳು, ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮ ಮಿತ್ರರಿಗಾಗಿ 3 ದಿನಗಳ ಕಾಲ ಸೌಹಾರ್ದಯುತ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಕೆ ಎಚ್ ಸಿ ಸಿ ಎಲ್ 2022) ಅನ್ನು ಆಯೋಜಿಸಿತ್ತು. ಡಿ.16 ಆರಂಭವಾದ ಪಂದ್ಯಾಟವು ಡಿ.೧೯ ರಂದು ಕೊನೆಗೊಂಡಿತು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಹಾಕೆ ಅಕ್ಷಯ್ ಮಚ್ಚೇಂದ್ರ ಪಾಲ್ಗೊಂಡಿದ್ದರು. ಎಲ್ಲಾ ತಂಡಗಳು ಒಟ್ಟು 1,20,000 ರೂ. ಮೊತ್ತವನ್ನು ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗಕ್ಕೆ […]
ಬಾಂಗ್ಲಾ ಚೆಂಡಿಗರನ್ನು ಬಗ್ಗಿಸಿದ ಭಾರತೀಯ ಬ್ಯಾಟರ್ ಇಶಾನ್ ಕಿಶನ್: ಏಕದಿನ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಬಾರಿಸಿದ ಪೋರ
ಚಿತ್ತಗಾಂಗ್: ಇಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ನಂತರ ಇಶಾನ್ ಕಿಶನ್ ಅವರ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ಅವರ 113 ರನ್‌ಗಳ ಬೆಂಬಲದೊಂದಿಗೆ ಭಾರತವು 409/8 ರನ್ ಗಳಿಸಿದೆ. ಮೆಹಿದಿ ಹಸನ್ ಕೇವಲ ಐದನೇ ಓವರ್‌ನಲ್ಲಿ ಶಿಖರ್ ಧವನ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ರೋಹಿತ್ ಶರ್ಮಾ ಗಾಯಗೊಂಡ ನಂತರ ತಂಡದಲ್ಲಿದ್ದ ಕಿಶನ್ ಇನ್ನಿಂಗ್ಸ್ ಸ್ಥಿರತೆ ಕಾಯ್ದುಕೊಳ್ಳಲು ಕೊಹ್ಲಿಯೊಂದಿಗೆ ಕೈಜೋಡಿಸಿದರು. ಮೂವತ್ತರ ಶತಕ ಬಾರಿಸುವವರೆಗೂ […]
ಟೆನಿಸ್ ಚಾಂಪಿಯನ್‌ಶಿಪ್ ಪುರುಷರ ಡಬಲ್ಸ್ ಸ್ಪರ್ಧೆ ಗೆದ್ದ ಧೋನಿ: ಮಾಹಿ ಇಲ್ಲಿಯೂ ಕಪ್ ಗೆಲ್ಲುತ್ತಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು
ರಾಂಚಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ನಾಯಕತ್ವದ ಸಮಯದಲ್ಲಿ ಭಾರತವು ಎಲ್ಲಾ ಐಸಿಸಿ ಪಂದ್ಯಾವಳಿಗಳನ್ನು ಗೆದ್ದಿದೆ. ಕ್ರಿಕೆಟ್ ಜೊತೆಗೆ ಅವರ ಫುಟ್ಬಾಲ್ ಪ್ರತಿಭೆಯನ್ನು ಅಭಿಮಾನಿಗಳು ನೋಡಿದ್ದಾರೆ. ನವೆಂಬರ್ 14 ರಂದು, ಸ್ಥಳೀಯ ಟೆನಿಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಧೋನಿ ಮತ್ತೊಂದು ಗರಿಯನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ)ಯು ಟೆನಿಸ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಿದ್ದು, ಪುರುಷರ ಡಬಲ್ಸ್ […]
ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತದ ರಾಷ್ಟ್ರಗಾನದ ಉದ್ಘೋಷ: ಭಾವುಕರಾದ ರೋಹಿತ್ ಶರ್ಮಾ
ಮೆಲ್ಬೋರ್ನ್: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಭಾನುವಾರದಂದು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವ ಕಪ್ ನಲ್ಲಿ ತನ್ನ ಸೂಪರ್ 12 ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವನ್ನು ಎದುರಿಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಭಾರತದ ರಾಷ್ಟ್ರಗಾನವನ್ನು ನುಡಿಸಲಾಗಿದ್ದು, ಇಡಿಯ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ರಾಷ್ಟ್ರಭಕ್ತಿಯ ಉದ್ಘೋಷ ರಾಷ್ಟ್ರಗಾನದ ರೂಪದಲ್ಲಿ ಮೊಳಗಿದೆ. ನಾಯಕ ರೋಹಿತ್ ಶರ್ಮಾ ಅವರು ಕೊನೆಯ ಕ್ಷಣದಲ್ಲಿ ಭಾವುಕರಾಗಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತೀಯ […]