ಅಂತಿಮ ಹಂತದಲ್ಲಿವೆ ಕೋವೊವಾಕ್ಸ್ ಲಸಿಕಾ ಪ್ರಯೋಗಗಳು: 18 ವರ್ಷ ಕೆಳಗಿನ ಮಕ್ಕಳಿಗೆ ಜೂನ್ ವರೆಗೆ ದೊರೆಯಬಹುದು ಲಸಿಕೆ

  ದೆಹಲಿ: 18 ವರ್ಷ ಮೇಲ್ಪಟ್ಟವರಿಗೆಲ್ಲ ಈಗಾಗಲೇ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗಿದ್ದು, ಪುಟಾಣಿ ಮಕ್ಕಳಿಗೆ ಇನ್ನೂ ಲಸಿಕೆಗಳನ್ನು ನೀಡಲಾಗಿಲ್ಲ. ಚಿಕ್ಕ ಮಕ್ಕಳಲ್ಲಿ ಕೋವಿಡ್ ವಿರುದ್ದದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೋವೊವಾಕ್ಸ್ ಲಸಿಕೆಗಳನ್ನು ತಯಾರಿಸಲಾಗುತ್ತಿದೆ. ಲಸಿಕೆಗಳನ್ನು ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದ್ದು, ಮಕ್ಕಳ ಮೇಲೆ ವೈದ್ಯಕೀಯ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಕೋವೊವಾಕ್ಸ್ ಲಸಿಕೆಗಳನ್ನು ತಯಾರಿಸುವ ಹೊಣೆ ಹೊತ್ತಿದೆ. ಅಮೇರಿಕಾದ ಜೈವಿಕ ತಂತ್ರಜ್ಞಾನ ಸಂಸ್ಥೆಯು ಅಭಿವೃದ್ದಿ ಪಡಿಸಿರುವ ನೋವೋವಾಕ್ಸ್ (ಮರುಸಂಯೋಜಕ ನ್ಯಾನೊಪಾರ್ಟಿಕಲ್ […]